ಉದಾರತೆಗೆ ಕನ್ನಡಿಗರೇ ಸಾಕ್ಷಿ: ಡಾ.ರಾಜೇಂದ್ರ
ಚಿತ್ತಾಪುರ: ಕನ್ನಡಿಗರಲ್ಲಿ ಉದಾರತೆ ಮನೋಭಾವನೆ ಅಡಗಿದೆ. ಬೇರೆ ಭಾಷೆಗಳ ಬಗ್ಗೆ ತಾತ್ಸರ ಹೊಂದದೆ ಸಹಕಾರ ಹಾಗೂ ತಾಳ್ಮೆ ಗುಣ ಹೊಂದಿದ್ದಾರೆ ಎಂದು ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಹಾಗೂ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ಯರನಾಳೆ ಎಂದು ಹೇಳಿದರು.
ತಾಲೂಕಿನ ಅಳ್ಳಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ದಿಗ್ಗಾಂವ ವಲಯ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ರಾಜ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ನಾಡು -ನುಡಿ ಕುರಿತು ಉಪನ್ಯಾಸ ನೀಡಿದರು.
ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಶಾಂತಪ್ಪ ಚಾಳಿಕಾರ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ರಾಮರೆಡ್ಡಿ ಸಂಕನೂರ, ಭೀಮರಾಯ ಅಡಕಿ, ಮಲ್ಲಣ್ಣ ವಾಡ, ರಾಮತೀರ್ಥ ಪೀರಹಮ್ಮದ್ ಮಾತನಾಡಿದರು.
ವಲಯ ದಿಗ್ಗಾಂವ ವಲಯ ಕಸಾಪ ಅಧ್ಯಕ್ಷ ಪಂಚಾಕ್ಷರಿ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಶಿವಗಂಗಮ್ಮ, ತಾಪಂ ಸದಸ್ಯೆ ಸಿದ್ದಮ್ಮ ಕಾಶನೂರ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಸಣ್ಣ ಬಜಂತ್ರಿ, ತಾಲೂಕು ಕಸಾಪ ಅಧ್ಯಕ್ಷ ನಾಗಯ್ಯಸ್ವಾಮಿ ಅಲ್ಲೂರ, ಕಸಾಪ ಗೌರವ ಕಾರ್ಯದರ್ಶಿ ಕಾಶಿನಾಥ ಗುತ್ತೇದಾರ, ಶಾಲೆ ಮುಖ್ಯಗುರು ಚಂದ್ರಾಮ ಅಮ್ಮನಗಡೆ ಭಾಗವಹಿಸಿದ್ದರು.
ಸಾವಿರಮಠದ ಸಂಗಮೇಶ ಮಹಾಸ್ವಾಮೀಜಿ ಹಾಗೂ ಮಹ್ಮಾತ ಪೀಠ ಗದ್ದುಗೆ ಮಠದ ನಾಗಪ್ಪಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಲಯ ಕಸಾಪ ಗೌರವ ಕೋಶಾಧ್ಯಕ್ಷ ಸುಭಾಷಸ್ವಾಮಿ ತೋಟ್ನಳ್ಳಿ, ಚಂದ್ರು ದೇವರು ರಾಮತೀರ್ಥ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಪ್ರಾರ್ಥನೆ ಗೀತೆ ಹಾಡಿದರು. ಸೋಮಶೇಖರ ಮೋಶನಿ ಸ್ವಾಗತಿಸಿದರು. ಕಸಾಪ ಗೌರವ ಕಾರ್ಯದರ್ಶಿ ಮಾಲತೇಶ ಬಬ್ಬಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಅಶೋಕ ಕಾರ್ಯಕ್ರಮ ನಿರೂಪಿಸಿದರು. ಗುರುನಾಥರಡ್ಡಿ ವಂದಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಮರಡ್ಡಿ ಪಾಟೀಲ್ ನಿವೃತ್ತ ಪ್ರಾಚಾರ್ಯರು ಸಂಕನೂರ (ಶಿಕ್ಷಣ), ಮಾಲತೇಶ ಬಬ್ಬಜಿ ದಂಡಗುಂಡ (ಸಾಹಿತ್ಯ), ಬಸವರಾಜಯ್ಯ ಸ್ವಾಮಿ ಭೀಮನಹಳ್ಳಿ (ಸಂಗೀತ), ಬಸವರಾಜ ಅವಂಟಿ ಡೋಣಗಾಂವ (ರಂಗಭೂಮಿ), ಭೀಮರಾಯ ಆಡಕಿ (ಕಲಾಕ್ಷೇತ್ರ), ಮಲ್ಲಣ್ಣ ವಾಡ ರಾಮತೀರ್ಥ (ಕೃಷಿ), ಪೀರಹಮ್ಮದ್ ಸಾತನೂರ ಮೊಹರಂ ಪದಕಾರರು (ಜಾನಪದ ಕಲಾವಿದ), ಸಂಗಣ್ಣ ಬಡಿಗೇರ ರಾಜೊಳ್ಳಿ (ಶಿಲ್ಪಿಗಳು), ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟಕ್ಕೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಅಂಬರೇಶ ಅವರನ್ನು ಸನ್ಮಾನಿಸಲಾಯಿತು.