ಕೋಲಿ ಸಮಾಜ ಸಂಘಟಕನ ನಿಧನಕ್ಕೆ ಗಣ್ಯರ ಕಂಬನಿ
ಗುರುಮಠಕಲ್: ಮಾಜಿ ಎಂಎಲ್ಸಿ ಹಾಗೂ ಕೋಲಿ ಸಮಾಜದ ಸಂಘಟಕರಾದ ವಿಠಲ್ ಹೆರೂರ್ ಅವರು ಸೋಮವಾರ ತಡರಾತ್ರಿ ನಿಧನರಾದ ಹಿನ್ನಲೆಯಲ್ಲಿ ಸಂತಾಪ ವ್ಯಕ್ತಪಡಿಸಲಾಯಿತು. ಗಂಗಾಮತ ಕೋಲಿ ಸಮಜ ಗುರುಮಠಕಲ್ ಮತಕ್ಷೇತ್ರದ ಹಾಗೂ ನಗರ ಘಟಕ ಮತ್ತು ಅವರ ಅಭಿಮಾನಿಗಳು ಇಲ್ಲಿನ ಮಾತಾ ಮಾಣಿಕೇಶ್ವರಿ ಆಶ್ರಮದಲ್ಲಿ ಸಭೆ ನಡೆಸಿ, ಅಗಲಿದ ನಾಯಕನಿಗೆ ಶೋಕ ಸೂಚಿಸಿ, ಅತ್ಮಕ್ಕೆ ಶಾಂತಿ ಕೋರಿದರು.
ಅನಂದ ಕುಮಾರ ಯದ್ಲಾಪುರ, ಭೀಮಶಂಕರ ಪಡಿಗೆ, ವೆಂಕಟಪ್ಪ ಅವಾಂಗಪುರ, ವೆಂಕಟಪ್ಪ ಮನ್ನೆ, ವೆಂಕಟರಾಮುಲು ಪೆದ್ದಬೋಯಿ, ರಾಮುಲು ಕೊಡಗಂಟಿ, ಲಕ್ಷ್ಮಪ್ಪ ಮಜ್ಜಿಗೆ, ದೇವಾಪ್ಪ ಕೋರೆಬನ್, ಪಂಡರಿ ದೋಡ್ಲಾ ಮತ್ತಿತರರು ಹಾಜರಿದರು.
ಶರಣಪ್ಪ ಸಲಾದಪುರ ಕಂಬನಿ
ಶಹಾಪುರ: ತೀವ್ರ ಅನಾರೋಗ್ಯದಿಂದ ಮಾಜಿ ಎಂಎಲ್‌ಸಿ ವಿಠ್ಠಲ ಹೇರೂರ್ ಮೃತಪಟ್ಟಿರುವುದರಿಂದ ಕೋಲಿ ಸಮಾಜವು ಚತುರ ಸಂಘಟಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಹಿರಿಯ ಜೆಡಿಎಸ್ ಮುಖಂಡ ಶರಣಪ್ಪ ಸಲಾದಪುರ ಕಂಬನಿ ಮಿಡಿದಿದ್ದಾರೆ.ವಿಠ್ಠಲ ಹೇರೂರ ಅವರ ನಿಧನಕ್ಕೆ ಶಾಸಕ ಗುರುಪಾಟೀಲ ಶಿರವಾಳ, ಮಾಜಿ ಮಂತ್ರಿ ಶರಣಬಸಪ್ಪಗೌಡ ದರ್ಶನಾಪುರ, ಮಾಜಿ ಎಂಎಲ್‌ಸಿ ಅಮಾತೆಪ್ಪ ಕಂದಕೂರ, ಡಾ.ಮಲ್ಲನಗೌಡ ಉಕ್ಕಿನಾಳ, ಡಾ.ಚಂದ್ರಶೇಖರ ಸುಬೇದಾರ, ಟಿ. ಶಶಿಧರ, ನೀಲಕಂಠ ಬಡಿಗೇರ, ಮಲ್ಲಿಕಾರ್ಜುನ ಪೂಜಾರಿ, ನಾಗಣ್ಣ ಬಡಿಗೇರ, ಕೋಲಿ ಸಮಾಜದ ಮಹಾದೇವಪ್ಪ ಸಾಲಿಮನಿ, ನಾಗೇಂದ್ರಪ್ಪ ಇಟಿಗಿ ಪಾಂಡುರಂಗ ಮಾಸ್ಟರ್, ಸಣ್ಣನಿಂಗಣ್ಣ ನಾಯ್ಕೋಡಿ, ಶಿವಪ್ಪ ಹಳಕಟ್ಟಿ, ಗೋಪಾಲ ಸುರಪುರ, ಭಗವಂತ್ರಾಯ ಬಳೂಂಡಗಿ, ಭೀಮರಾಯ ಮಮದಾಪುರ, ದೊಡ್ಡಮಾನಯ್ಯ, ರಾಮಾಂಜನೇಯ, ಬಸವರಾಜ ಕಂದಳ್ಳಿ, ವೆಂಕಟೇಶ ಮೂಲಿಮನಿ, ಭೀಮಾಶಂಕರ ಅಣಬಿ, ಮರೆಪ್ಪ ಚಂಡು, ರವೀಂದ್ರನಾಥ ನರಸನಾಯಕ, ಅಂಬ್ಲಪಗೌಡ ಅಪ್ಲೆ, ಶಂಕ್ರಣ್ಣ ಶಾಣ್ಯಾನೋರ, ನಾಗಪ್ಪ ತಹಸೀಲ್ದಾರ, ಚಂದ್ರಶೇಖರ ಸಾಲಿಮನಿ, ಮಲರಡ್ಡಿ ವಿಭೂತಿಹಳ್ಳಿ ಮತ್ತಿತರರು ಕಂಬನಿ ಮಿಡಿದು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ತಾಲೂಕುಗಳ ಗಣ್ಯರ ಕಂಬನಿ
ಚಿತ್ತಾಪುರ: ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಹಾಗೂ ಕೋಲಿ ಸಮಾಜದ ಮುಖಂಡ ವಿಠಲ ಹೇರೂರ ಅವರ ನಿಧನಕ್ಕೆ ತಾಲೂಕಿನ ಗಣ್ಯರು ಸಂತಾಪ ಸೂಚಿಸಿದ್ದಾರೆ.ಕಾಂಗ್ರೆಸ್ ಮುಖಂಡ ಲಿಂಗಾರಡ್ಡಿ ಬಾಸರಡ್ಡಿ, ಕಾಳಗಿ ಜಿಪಂ ಸದಸ್ಯ ಶಂಭುಲಿಂಗ ಗುಂಡಗುರ್ತಿ, ಮಾಜಿ ಎಪಿಎಂಸಿ ಅಧ್ಯಕ್ಷ ವೀರಣ್ಣಗೌಡ ಪರಸರಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಕೋಲಿ ಸಮಾಜದ ಗೌರವ ಅಧ್ಯಕ್ಷ ಬಸವರಾಜ ಚಿನಮಳ್ಳಿ, ತಾಲೂಕು ಕೋಲಿ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ, ಪ್ರಧಾನ ಕಾರ್ಯದರ್ಶಿ ದೇವಿಂದ್ರ ಅರಣಕಲ್, ನಗರ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಸುರೇಶ ಬೆನಕನಹಳ್ಳಿ, ಚಂದ್ರು ಕಾಳಗಿ, ಶರಣು ಡೋಣಗಾಂವ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.
ಅಫಜಲ್ಪುರ: ಜಿಪಂ ಸದಸ್ಯ ಪ್ರಕಾಶ ಜಮಾದಾರ, ಸಿದ್ದಾರ್ಥ ಬಸರಿಗಿಡ, ಅವ್ವಣ್ಣ ಮ್ಯಾಕೇರಿ, ಗುರಣ್ಣ ಜಮಾದಾರ, ಶಿವಕುಮಾರ ನಾಟಿಕಾರ, ಲಚ್ಚಪ್ಪ ಜಮಾದಾರ, ದೇವಲ ಗಾಣಗಾಪುರದ ಸಮಸ್ತ ಕೋಲಿ ಸಮಾಜ ಬಾಂಧವರು, ಮೌಲಾಸಾಬ್ ನದಾಫ, ಸಾಯಬಣ್ಣ ಪೂಜಾರಿ ಮಲ್ಲಾಬಾದ್, ಭೀಮರಾಯ ದೊಡ್ಮನಿ, ರಾಯಗೊಂಡಪ್ಪ ಅಂಜುಟಗಿ, ವಕೀಲ ಸಂಘದ ಅಧ್ಯಕ್ಷ ಕೆ.ಜಿ ಪೂಜಾರಿ, ಫೀರೋಜ್ ಜಾಗಿರದಾರ, ನ್ಯಾಯವಾದಿಗಳು, ಮಹಾಂತಪ್ಪ ಖರ್ಗೆ, ಸಮಸ್ತ ಕೋಲಿ ಸಮಾಜದ ನಾಯಕರು ಹೇರೂರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
ಗುಲ್ಬರ್ಗ: ಎಂಎಲ್ಸಿಗಳಾದ ನಮೋಶಿ, ಅಲ್ಲಂಪ್ರಭು, ರೈತ ಮುಖಂಡ ಕೇದಾರಲಿಂಗಯ್ಯ ಹಿರೇಮಠ, ಕೋಲಿ ಸಮಾಜದ ಮುಖಂಡ ತಿಪ್ಪಣಪ್ಪ ಕಮಕನೂರ, ಪ್ರಕಾಶ ಜಮಾದಾರ, ನರೇಂದ್ರಭಟ್ಟ ಪೂಜಾರಿ, ರವೀಂದ್ರಭಟ್ಟ ಪೂಜಾರಿ, ಮಹಾಂತೇಶ ಮಂದೇವಾಲ, ಮರೇಶ ಬೇಳಕೋಟಿ, ಪ್ರಕಾಶ ಹಾಗರಗಿ, ವಿಜಯಕುಮಾರ್, ಮಲ್ಲಿಕಾರ್ಜುನ ಕೆರಮಗಿ, ರವಿ ಕೋರಿ, ರಾಮಚಂದ್ರ ಝಂಡೆ, ಮಿಲಿಂದ ಮೋಘಾ, ಅಭಿಷೇಕ ಮೊಲಕರ್, ದೇವೇಂದ್ರಪ್ಪ, ಮಹಾಂತೇಶ ಕೌಲಗಿ, ಎಸ್.ಎಸ್. ಪೂಜಾರಿ, ಮಲ್ಲಿಕಾರ್ಜುನ ಭಂಕೂರ, ರೇವಣಸಿದ್ದಪ್ಪ ಸಾತನೂರ, ಹಣಮಂತ ಬರಗಾಲಿ, ಪ್ರಭು ಜುಮ್ಮಣ್ಣ, ಡಾ. ಬಿ. ಟಿ. ಪೂಜಾರ, ಸಿದ್ದು ಮಾಶಾಳ, ದೇವರಾಜ ಪೂಜಾರಿ, ದೇವಿಂದ್ರಪ್ಪ ನಾಯಿಕೋಡಿ, ಹಯ್ಯಾಳಪ್ಪ ಪೂಜಾರಿ, ಧರ್ಮವೀರ ಪಟ್ಟಣ, ರೋಹಿತ ಪೂಜಾರಿ, ಹಣಮಂತ ಪೂಜಾರಿ, ಬಸವರಾಜ ಹೇರೂರ, ಧರ್ಮರಾಜ ಜವಳಿ, ಡಾ. ನಾಗರತ್ನ ದೇಶಮಾನ್ಯೆ, ನಿಂಗಣ್ಣ ಉದನೂರ, ಸಿದ್ದು ಹಂದನೂರ, ರಮೇಶಕುಮಾರ್ ರಾವೂರ, ಬಜರಂಗ ಗಾಯಕವಾಡ, ಗುರುಶಾಂತ ಪಟ್ಟೇದಾರ ಸಂತಾಪ ಸೂಚಿಸಿದ್ದಾರೆ.
ವಕೀಲರ ಸಂಘದಿಂದ ಸಂತಾಪ
ಅಫಜಲ್ಪುರ: ತಾಲೂಕು ವಕೀಲರ ಸಂಘದ ಕಿರಿಯ ವಕೀಲ ದೇವಿಂದ್ರ ಬಸಣ್ಣ ಹಂಚಿನಾಳ ವಕೀಲರ ಸಂಘದ ವತಿಯಿಂದ ಸಂತಾಪ ಸೂಚಿಸಿ ಅವರ ಆತ್ಮಕ್ಕೆ ಭಗವಂತನು ಶಾಂತಿಯನ್ನು ನೀಡಲಿ ಮತ್ತು ಮೃತರ ಕುಟುಂಬ ಈ ಆಘಾತವನ್ನು ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕೋರಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಜಿ ಪೂಜಾರಿ, ವಕೀಲರಾದ ಎಸ್.ಎಸ್. ಪಾಟೀಲ್, ಫೀರೋಜ ಜಾಗಿರದಾರ, ಎಸ್.ಜೆ. ಗುತ್ತೇದಾರ, ಸಿ.ಎಸ್. ಹಿರೇಮಠ, ಎಸ್.ಸಿ. ತಳಕೇರಿ, ಆರ್.ಎಸ್. ಹೂಲ್ಲೂರ, ಛತ್ರ ರಾಠೋಡ ಸಂತಾಪ ಸೂಚಿಸಿದ್ದಾರೆ.
ಬೆಲ್ದಾಳರು, ಬಪಾ ಸೇಡಂ ಸಂತಾಪ
ಗುಲ್ಬರ್ಗ: ಕೋಲಿ ಸಮಾಜ ಮುಖಂಡ, ಮಾಜಿ ಎಂಎಲ್ಸಿ ವಿಠ್ಠಲ್ ಹೆರೂರ್ ನಿಧನಕ್ಕೆ ಬೀದರ್‌ನ ಬೆಲ್ದಾಳ ಶರಣರು ಹಾಗೂ ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ್ ಸೇಡಂ ಕಂಬನಿ ಮಿಡಿದಿದ್ದಾರೆ.
ಹೆರೂರ್ ಪ್ರಗತಿಪರ ಚಿಂತಕರಾಗಿದ್ದಲ್ಲದೆ ಕೋಲಿ ಸಮಾಜದ ಏಳಿಗೆಗೆ ಬದುಕಿನುದ್ದಕ್ಕೂ ಹೋರಾಟ ನಡೆಸಿದವರು. ಅವರ ನಿಧನ ಕೋಲಿ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಬೆಲ್ದಾಳ ಶರಣರು ತಮ್ಮ ಹೇಳಿಕೆಯಲ್ಲಿ ಕಂಬನಿ ಮಿಡಿದ್ದಾರೆ. ಸಮಾಜದವರು ಹೆರೂರ್ ಅವರ ಆದರ್ಶಗಳು, ಅವರು ಕಂಡ ಕನಸಿನಂತೆ ಮುಂದುವರಿಯಬೇಕಿದೆ ಎಂದು ಬಸವರಾಜ ಪಾಟೀಲ್ ಸೇಡಂ ತಮ್ಮ ಸಂತಾಪ ಸೂಚನೆ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.