ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಗ್ರಾಮೀಣ ಪ್ರದೇಶ ಅಭಿವೃದ್ಧಿಗೆ ಆದ್ಯತೆ: ಶಾಸಕ ಮಾಲಿಕಯ್ಯ

Vishwanath S
Updated On : 5 Dec 2013, 11:28 am

ಅಫಜಲ್ಪುರ:  ಈಗ ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಸಧ್ಯ ನಾನು ಈ ಕ್ಷೇತ್ರದ ಶಾಸಕನಾಗಿ ತಾಲೂಕಿನ ಎಲ್ಲ ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಶಾಸಕ ಮಾಲಿಕಯ್ಯ ಗುತ್ತೇದಾರ ಹೇಳಿದರು.
ತಾಲೂಕಿನ ಹಾವನೂರ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು,  ಅಪೌಷ್ಟಿಕತೆ ತೊಲಗಿಸುವ ಸಲುವಾಗಿ ಅಂಗನವಾಡಿ ಕೇಂದ್ರಗಳಲ್ಲಿ ಉತ್ತಮ ಗುಣಮಟ್ಟದ ಪೌಷ್ಟಿಕ ಸತ್ವವುಳ್ಳ ಆಹಾರ ಸಿಗುತ್ತದೆ. ಹೀಗಾಗಿ, ತಾಯಂದಿರು ಮಕ್ಕಳನ್ನು ಅಂಗನವಾಡಿಗಳಿಗೆ ಕಳುಹಿಸಬೇಕು ಎಂದರು.
ಹಾವನೂರ ಕ್ರಾಸ್‌ನಿಂದ ಘರೂರ್, ಬಿದನೂರ, ಚೌಡಾಪುರದಿಂದ ಚಿನ್ನಮಳ್ಳಿ ಹೋಗುವ ರಸ್ತೆಯವರೆಗೆ ರಸ್ತೆ ಕಾಮಗಾರಿ ಕೂಡಲೇ ಕೈಗೊಳ್ಳಲಾಗುವುದು. ಹಾವನೂರ ಮತ್ತು ಘರೂರರಗೆ ಹೋಗುವ ಮಾರ್ಗ ಮಧ್ಯ ಬ್ಯಾರೇಜ್ ಕಂ ಬ್ರಿಜ್ ನಿರ್ಮಾಣದ ಸಲುವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅನುಮತಿ ಸಿಕ್ಕ ಕೂಡಲೇ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಹಾವನೂರ ಗ್ರಾಮಕ್ಕೆ ಮುಂಬರುವ ದಿನಗಳಲ್ಲಿ ಬಸವ ಯೋಜನೆಯಡಿ ಮನೆಗಳನ್ನು ಖುದ್ದು ಬಂದು ಮನೆಗಳ ಹಂಚಿಕೆ ಮಾಡುವುದಾಗಿ ತಿಳಿಸಿದರು.
ರೈತರ ಬೇಡಿಕೆಯಂತೆ ಈಗಾಗಲೇ ಕಬ್ಬಿಗೆ 2650 ಬೆಲೆ ಘೋಷಿಸಿದ್ದು, ಕಾರ್ಖಾನೆಯವರು 2500 ಕೊಡಬೇಕು. ಇದಕ್ಕೆ ಸರ್ಕಾರದಿಂದ ಬೆಂಬಲ ಬೆಲೆಯಾಗಿ 150 ನೀಡಲಾಗುವುದು ಇದನ್ನು ಯಾವ ಕಾರ್ಖಾನೆಯವರು ಉಲ್ಲಂಘಿಸಿದರು. ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು.
ತಾಪಂ ಸದಸ್ಯ ಹುಣಚಪ್ಪ ಅಂತರಗಂಗಿ, ಬಿ.ವೈ.ಪಾಟೀಲ್, ವಿಶ್ವನಾಥ ರೇವುರ, ಅರಣಗೌಡ ಪಾಟೀಲ್ ಗೊಬ್ಬುರ, ಸಿದ್ದು ಹಳಗೋದಿ, ಸಾವಿರಪ್ಪ ಪೂಜಾರಿ, ದೇವೇಂದ್ರಪ್ಪ ಪಾಟೀಲ್, ಸಿದ್ದಣಗೌಡ ಪಾಟೀಲ್, ಮಲ್ಲಿನಾಥ ರೇವುರ, ಬಾಬುರಾವ್ ಮುಜಗೊಂಡ, ಯಶ್ವಂತರಾವ್ ಇಸ್ರಿ, ತಾಪಂ ಕಾರ್ಯನಿರ್ವಾಹಣಾಧಿಕಾರಿ ಎಸ್.ಪಿ. ನಂದಗಿರಿ, ಭೂಸೇನಾ ನಿಗಮದ ಅಧಿಕಾರಿ ವಿ.ಬಿ. ಕಲಗುರಕಿ, ಪ್ರಭಾರಿ ಸಿಡಿಪಿಒ ಸರಳಾ ಸೇರಿದಂತೆ ಇತರರು ಇದ್ದರು.
ಭೀಮಾಶಂಕರ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆ ಧಾನಮ್ಮ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement