ನಿಧಿಗಾಗಿ ಚಂಡರಕಿ ಶಿವಲಿಂಗ ಧ್ವಂಸ
ಗುರುಮಠಕಲ್: ನಿಧಿ ಆಸೆಗಾಗಿ ಚಂಡರಕಿ ಗ್ರಾಮದ ಹೊರವಲಯದಲ್ಲಿರುವ ಶಿವಾಲಯದಲ್ಲಿನ ಗರ್ಭಗುಡಿಯಲ್ಲಿನ ಶಿವಲಿಂಗವನ್ನು ಪೂರ್ಣವಾಗಿ ಜಖಂಗೊಳಿಸಿರುವ ದುಷ್ಕರ್ಮಿಗಳು ಲಿಂಗ ಪ್ರತಿಷ್ಠಾಪನೆ ಮಾಡಲಾಗಿದ್ದ ಸ್ಥಳದಲ್ಲಿ ಆಳಕ್ಕೆ ಅಗೆದು ನಿಧಿಗಾಗಿ ವಿಫಲಯತ್ನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಹೈದ್ರಬಾದ್ ನಿಜಾಮರ ಆಡಳಿತ ಸಂದರ್ಭದಲ್ಲಿ ರಾಜವಂಶಸ್ಥರ ಅರಾಧ್ಯ ದೈವಾಗಿದ್ದಂತಹ ಚಂಡರಕಿಯ ಶಿವಾಲಯಕ್ಕೆ ಮತ್ತೊಮ್ಮೆ ನಿಧಿಗಳ್ಳರ ಕರಿ ನೆರಳು ಬಿದ್ದು, ಈ ಬಾರಿ ದೇವರ ಲಿಂಗವನ್ನು ದ್ವಂಸಗೊಳಿಸಿ ನಿಧಿಗಾಗಿ ಪ್ರಯತ್ನಿಸಿದ್ದಂತಹ ಘಟನೆ ಮತ್ತೊಮ್ಮೆ ನಡೆದಿದೆ.
ಈ ಕುರಿತು ಮಂಗಳವಾರ ಗ್ರಾಮದ ಮುಖಂಡರು ಕೋಟೆಯಲ್ಲಿ ಪ್ರವೇಶಿಸಿ ಶಿವಲಿಂಗದ ದರ್ಶನ ಪಡೆಯಲು ಹೋದಾಗ ಲಿಂಗ ವಿಘ್ನಗೊಂಡಿದ್ದನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.
ಈ ಹಿಂದೆ ನಿಧಿಗಳ್ಳರು ಕಳೆದ ಸುಮಾರು 15 ವರ್ಷಗಳ ಹಿಂದೊಮ್ಮೆ ಕೋಟೆಯೊಳಗಿರುವ ಸಿದ್ದೇಶ್ವರ ದೇಗುಲದ ಗರ್ಭಗುಡಿಯ ಶಿವಲಿಂಗವನ್ನು ವಿಗ್ನಗೊಳಿಸಿ, ಪ್ರತಿಷ್ಠಾಪನೆಯಾಗಿರುವ ಸ್ಥಳದಿಂದ ಕೀಳಿಹಾಕಿ ಸುಮಾರು 6 ಅಡಿ ಆಳಕ್ಕೆ ತೋಡಿ ನಿಧಿಗಾಗಿ ಅಸೆ ಪಟ್ಟು ಗ್ರಾಮಸ್ಥರು ಎಚ್ಚರ ವಹಿಸಿರುವ ಹಿನ್ನಲೆಯಲ್ಲಿ ನಿಧಿಯ ಅಸೆಯನ್ನು ಕೈಬಿಟ್ಟದರು ಅದರೆ ಗ್ರಾಮಸ್ಥರು ಸ್ವಲ್ಪ ಅಜಾಗಾರು ಕತೆಯಿಂದಾಗಿ ಮತ್ತೊಮ್ಮೆ ನಿಧಿಗಾಗಿ ಪ್ರಯತ್ನ ನಡೆಸಿ ನಿಧಿ ಸಿಗದೆ ಶಿವಲಿಂಗವನ್ನೆ ಧ್ವಂಸಮಾಡಿ ಪರಾರಿಯಾದ್ದಂತಹ ಘಟನೆ ನಡೆದಿದೆ.
ಶಿವಾಲಯಕ್ಕೆ ಅಷ್ಟೆ ಅಲ್ಲದೆ ಗರ್ಭಗುಡಿಯ ಮುಂದೆ ಇರುವ ದೊಡ್ಡ ನಂದಿ ವಿಗ್ರಹದ ಕೆಳಗೆ ಏನಾದರೂ ಆಭರಣಗಳು ಇರಬಹುದು ಎಂದು ನಂದಿ ವಿಗ್ರಹವನ್ನು ಸರಿಸಲು ಸಾಕಷ್ಟು ದಿನಗಳಿಂದ ದುಷ್ಕರ್ಮಿಗಳು ಪ್ರಯತ್ನ ಪಡುತ್ತಿದ್ದಾರೆ. ಇದುವರೆಗೂ ಯಾರಿಂದಲೂ ಅದನ್ನು ಅಲುಗಾಡಿಸಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.
ಆಂಧ್ರದ ಗಡಿಯಿಂದ ಕೇವಲ 3 ಕಿ.ಮೀ. ದೂರದಲ್ಲಿರುವ ಚಂಡರಕಿ ಗ್ರಾಮಕ್ಕೆ ಅಮವಾಸ್ಯೆ, ಹುಣ್ಣಿಮೆಗಳಂದು ರಾತ್ರಿ ವೇಳೆ ಗುಂಪುಗುಂಪಾಗಿ ಕೋಟೆಗೆ ನುಗ್ಗಿ ಎಲ್ಲೆಂದರಲ್ಲಿ ತೆಗ್ಗುಗಳನ್ನು ತೋಡುತ್ತಿದ್ದಾರೆ. ಇದು ನಿಧಿಗಳ್ಳರು ಕಲ್ಲಿನಿಂದ ಕೆತ್ತಿರುವ ನಂದಿ ವಿಗ್ರಹದಲ್ಲಿ ನಿಧಿ ಇರಬಹುದು ಎಂಬ ಊಹೆಯಿಂದ ಅದರ ಮೂಗು ಮತ್ತು ಕಿವಿಗಳಲ್ಲಿ ವಿದ್ಯುತ್ ಉಪಕರಣಗಳನ್ನು ಬಳಸಿ ರಂದ್ರಗಳನ್ನು ಹಾಕಲಾಗುತ್ತಿದೆ. ಐತಿಹಾಸಿಕ ಕೋಟೆ ನಿಧಿಗಳ್ಳರ ಪಾಲಾಗುತ್ತಿದೆ ಎಂದು ಆರ್.ಬಸವರಾಜ ಕಳವಳ ವ್ಯಕ್ತಪಡಿಸಿದರು.