ಅತ್ಯಾಚಾರಕ್ಕೆ ಯತ್ನ
ಚಿಂಚೋಳಿ: ತಾಲೂಕಿನ ಚಿಕ್ಕನಿಂಗದಳ್ಳಿ ಗ್ರಾಮದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಬಗ್ಗೆ ಘಟನೆ ನಡೆದಿದೆ. ಗ್ರಾಮದ ಶೇಖಪ್ಪ ತಂದೆ ಅಂಜಪ್ಪ ಬುಧವಾರ ಸಂಜೆ ಕಿರಾಣಿ ಅಂಗಡಿಯಲ್ಲಿ ಮೊಬೈಲ್ ರಿಚಾರ್ಜ್ ಮಾಡಿಸುವ ನೆಪದಿಂದ ಹೋಗಿ ವ್ಯಾಪಾರ ನಡೆಸುತ್ತಿದ್ದರು. ಆಗ ಮಹಿಳೆಯ ಕೈಹಿಡಿದು ಎಳೆದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಿರಿಯಾಣ ಎಎಸ್ಐ ಗುರುಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶೇಖಪ್ಪನು ಮಹಿಳೆಯ ಗಂಡ ಇಲ್ಲದ ವೇಳೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಚೇಳು ಕಚ್ಚಿ ಬಾಲಕಿ ಸಾವು
ಗುಲ್ಬರ್ಗ/ಶಹಾಬಾದ್: ಶಹಾಬಾದ್ ಇಲ್ಲಿನ ಹರಳಯ್ಯ ನಗರ ಬಡಾವಣೆಯಲ್ಲಿ ಚೇಳು ಕಚ್ಚಿದ ಪರಿಣಾಮ ಫಿರ್ದೋಸ್ (6) ಎಂಬ ಬಾಲಕಿ ಮರಣ ಹೊಂದಿದ್ದಾಳೆ. ಮಲಗಿದಾಗ ಚೇಳು ಕಚ್ಚಿದ್ದು, ಶಹಾಬಾದ್ ನಗರ ಠಾಣೆಲ್ಲಿ ಪ್ರಕರಣ ದಾಖಲಾಗಿದೆ.
ಬಾವಿಗೆ ಬಿದ್ದು ವ್ಯಕ್ತಿ ಸಾವು
ನೀರು ಕುಡಿಯಲು ಹೋಗಿ ಹಳೆ ಶಹಾಬಾದಿನ ಬಾವಿಯಲ್ಲಿ ಕಾಲು ಜಾರಿ ಬಿ. ಮಹ್ಮದ್ ಯೂನಸ್ (42) ಎಂಬಾತ ಮರಣ ಹೊಂದಿದ ಘಟನೆ ಮಂಗಳವಾರ ನಡೆದಿದೆ.
--