ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಎಸ್ಮಾ ಕಾಯ್ದೆ ಜಾರಿಗೆ ವಿರೋಧ

Lingaraj Badiger
Updated On : 6 Dec 2013, 12:04 pm

ಗುಲ್ಬರ್ಗ: ಬೆಳಗಾವಿ ಅಧಿವೇಶನದಲ್ಲಿ ನೌಕರರಿಗೆ ಮಾರಕವಾದ ಎಸ್ಮಾ ಕಾಯ್ದೆಯನ್ನು ಮಂಡನೆ ಮಾಡಿರುವುದನ್ನು ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೆಂಗಟಿ, ಪ್ರಧಾನ ಕಾರ್ಯದರ್ಶಿ ಕೆ. ಈರಣ್ಣಗೌಡ ಖಂಡಿಸಿದ್ದಾರೆ. ದುಡಿಯುವ ವರ್ಗದ ಮೇಲೆ ಸರ್ಕಾರ ಮಾರಕ ಅಸ್ತ್ರ ಎಸ್ಮಾ ಜಾರಿಗೆ ತಂದು ಸಂವಿಧಾನ ವಿರೋಧ ಕೆಲಸವನ್ನು ಮಾಡಿದೆ. ನೌಕರರು ತಮ್ಮ ಬೇಡಿಕೆಯನ್ನು ಸರ್ಕಾರಕ್ಕೆ ಹೇಳುವ ಹಕ್ಕಿದೆ. ಆದರೆ, ಈ ರೀತಿ ಎಸ್ಮಾ ಜಾರಿಗೆ ಮಾಡಿ ಸರ್ವಾಧಿಕಾರಿ ಧೋರಣೆ ತಾಳಿದೆ. ಅಲ್ಲದೆ ನೌಕರರನ್ನು ಭಯದ ನೆರಳಿನಲ್ಲಿ ಇರುವಂತೆ ಮಾಡಿದಂತಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೂಡಲೇ ಎಸ್ಮಾ ಹಿಂದಕ್ಕೆ ಪಡೆಯಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸಂಘವು ಎಚ್ಚರಿಸಿದೆ.
ಪೌರಾಡಳಿತ ಸಚಿವ ಖಮರುಲ್ ಪ್ರವಾಸ
ಗುಲ್ಬರ್ಗ: ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ ಡಿ.7ರಂದು ಬೆ.7.15ಕ್ಕೆ ಗುಲ್ಬರ್ಗಕ್ಕೆ ಆಗಮಿಸುವರು.  ಅಂದು ಬೆ.10ಕ್ಕೆ ಗುಲ್ಬರ್ಗದಿಂದ ಬೀದರ್ ತೆರಳಿ ಡಿಸಿ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ನಂತರ ಮ.2.30ಕ್ಕೆ ಅಲ್ಪಸಂಖ್ಯಾತರ ಹಾಸ್ಟ್ಟೆಲ್  ಉದ್ಘಾಟನೆ ಮತ್ತು ಸ್ಥಳೀಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಡಿ.8ರಂದು ಸಾರ್ವಜನಿಕ ಭೇಟಿ, ಕುಂದುಕೊರತೆಗಳ ವಿಚಾರಣೆ ಮತ್ತು ಸ್ಥಳೀಯ ಕಾರ್ಯಕ್ರಮ. ಡಿ.9ರಂದು ಬೆ.11ಕ್ಕೆ ಜಿಲ್ಲಾಧಿಕಾರಿ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ಮ.2ರಿಂದ ಸಂಜೆ 6 ವರೆಗೆ ಸಾರ್ವಜನಿಕ ಭೇಟಿ, ಕುಂದುಕೊರತೆಗಳ ವಿಚಾರಣೆ ಮತ್ತು ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬೆಂಗಳೂರಿಗೆ ಪ್ರಯಾಣಿಸುವರು.
1008 ದೀಪೋತ್ಸವ
ಅಫಜಲ್ಪುರ: ತಾಲೂಕಿನ ಹಿರೇಜೇವರ್ಗಿಯ ಹಿರೇಮಠದಲ್ಲಿ ಕಾರ್ತಿಕ ಮಾಸದ ಕೊನೆಯ ದಿನ ಸೋಮವಾರ 1008 ದೀಪೋತ್ಸವವನ್ನು ಶಿಷ್ಯಸದ್ಭಕ್ತರ ಸಮ್ಮುಖ ಸಹಯೋಗದದೊಂದಿಗೆ ಗುರುಶಾಂತಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ನೆರವೇರಿಸಿದರು. ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಗಳು ಪ್ರವಚನ ನೀಡಿ, ಶಿವ ಪುರಾಣದಲ್ಲಿ ಶಿವನೇ ಹೇಳಿದಂತೆ ವರ್ಷದಲ್ಲಿ ಒಮ್ಮೆಯಾದರೂ ಮಾನವನು ದೀಪವನ್ನು ಬೆಳಗಿಸಬೇಕು. ದೀಪದ ದರ್ಶನ ಮಾಡಬೇಕು. ಇದು ಮಾಡುವ  ಯೋಗ್ಯ ದಿನವೆಂದರೆ ಕಾರ್ತೀಕ ಮಾಸದ ಕೊನೆಯ ದಿನವಾದ ಛಟ್ಟಿ ಅಮವಾಸ್ಯೆ ಎಂದರು.
ಪ್ರವಚನ ಆರಂಭ
ಗುಲ್ಬರ್ಗ: ಆನಂದ ಸಿಂಧು ಅಭಿಯಾನ ಪ್ರಯುಕ್ತ ನಗರದ ನೂತನ ವಿದ್ಯಾಲಯದ ದತ್ತಾತ್ರೇಯ ಹೇರೂರ ರಂಗ ಮಂದಿರದಲ್ಲಿ ಗುರುವಾರ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಮೈಸೂರಿನ ಕೆಆರ್ ನಗರದ ಯೋಗನಂದೇಶ್ವರ ಮಠದ ಶಾಂಕರ ಭಾರತಿ ಶಂಕರಾಚಾರ್ಯರು ಪ್ರತಿನಿತ್ಯ ಸಂಜೆ 5ರಿಂದ 6.30 ರವರೆಗೆ ಪ್ರವಚನ ನೀಡುತ್ತಿದ್ದು, ಇದು ಡಿ.15ರವರೆಗೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement