ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ತೊಗರಿ ಬೆಳೆ ನಷ್ಟ: ರೈತರಿಗೆ ಪರಿಹಾರ ನೀಡಲು ಆಗ್ರಹ

Lingaraj Badiger
Updated On : 6 Dec 2013, 12:04 pm

ಚಿಂಚೋಳಿ: ತಾಲೂಕಿನಲ್ಲಿ ಕಳೆದ ತಿಂಗಳು ಆಂಧ್ರಪ್ರದೇಶದಲ್ಲಿ ಬೀಸಿದ ಚಂಡಮಾರುತ ಮತ್ತು ಮಳೆಯಿಂದಾಗಿ ಪ್ರಸಕ್ತ ಸಾಲಿನಲ್ಲಿ ಬೆಳೆದು ನಿಂತಿರುವ ರೈತರ ತೊಗರಿ ಬೆಳೆಯ ಹೂವುಗಳು ಉದುರಿ ಬಿದ್ದು ಬೆಳೆಯೂ ಸಂಪೂರ್ಣ ಹಾಳಾಗಿದ್ದರಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಕೂಡಲೇ ಕೃಷಿ ಇಲಾಖೆಯಿಂದ ಕೂಡಲೇ ತೊಗರಿ ಬೆಳೆ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಬೇಕೆಂದು ಸುಲೇಪೇಟ್ ಜಿಪಂ ಸದಸ್ಯ ಸಂಜೀವನ್ ಯಾಕಾಪುರ ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದಾರೆ.
  ತಾಲೂಕಿನ ಹೊರವಲಯದಲ್ಲಿ ಜಮೀನಿನಲ್ಲಿ ಬೆಳೆದಿರುವ ತೊಗರಿ ಬೆಳೆಯನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ಕೃಷಿ ಇಲಾಖೆ ಮಾಹಿತಿ ಪ್ರಕಾರ ಒಟ್ಟು 48, 555 ಹೆಕ್ಟೇರ್ ಜಮೀನಿನಲ್ಲಿ ತೊಗರಿ ಬೆಳೆಯಲಾಗಿದೆ. ಈಗಾಗಲೇ ಅನೇಕ ಗ್ರಾಮಗಳಲ್ಲಿ ತೊಗರಿ ಹೂ ಮತ್ತು ತೊಗರಿ ಕಾಯಿ ಆಗುವಷ್ಟರಲ್ಲಿಯೇ ಕಳೆದ ನ.23, 24 ರಂದು ಬೀಸಿದ ಚಂಡಮಾರುತ, ಮಳೆಯಿಂದಾಗಿ ತೊಗರಿ ಬೆಳೆಯೂ ಸಂಪೂರ್ಣ ಹಾಳಾಗಿದೆ ಎಂದರು.
  ಕೇವಲ ಎರಡು ದಿನದಲ್ಲಿ 24.02 ಮಿಮೀ ಮಳೆಯಾಗಿದೆ. ಹೀಗಾಗಿ ತಾಲೂಕಿನ ಸುಲೇಪೇಟ್, ನಿಡಗುಂದಾ, ಕುಂಚಾವರಂ, ಚಿಮ್ಮನಚೋಡ, ಐನಾಪುರ, ಕೋಡ್ಲಿ, ಕಾಳಗಿ ಇನ್ನಿತರ ವಲಯದಲ್ಲಿ ಬರುವ ಗ್ರಾಮಗಳಲ್ಲಿ ರೈತರು ಬೆಳೆದಿರುವ ತೊಗರಿ ಬೆಳೆಯೂ ಹಾಳಾಗಿದೆ. ಅನೇಕ ರೈತರು ಹೆಚ್ಚಿನ ಬೆಲೆಯುಳ್ಳ ಕೀಟನಾಶಕ ಸಿಂಪರಣೆ ಮಾಡಿದ್ದಾರೆ. ಇದೀಗ ಆಂಧ್ರಪ್ರದೇಶದಲ್ಲಿ ಬೀಸಿದ ಚಂಡಮಾರುತ ಮಳೆಯಿಂದಾಗಿ ತೊಗರಿ ಬೆಳೆ ಹಾಳಾಗಿದೆ ಎಂದು ತಿಳಿಸಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement