ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಲಾರಿ- ಬೈಕ್ ಡಿಕ್ಕಿ: ವ್ಯಕ್ತಿ ಸಾವು

Lingaraj Badiger
Updated On : 10 Dec 2013, 10:46 am

ಶಹಾಪುರ: ತಾಲೂಕಿನ ಮದ್ರಿಕಿ ಹೈವೆ ರಸ್ತೆಯಲ್ಲಿ ಲಾರಿ ಮತ್ತು ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೆ ದ್ವಿಚಕ್ರ ವಾಹನ ಸವಾರ ಸಾವಿಗೀಡಾಗಿದ್ದಾನೆ.
ಸುರಪುರ ತಾಲೂಕಿನ ಕರಡಕಲ್ ಗ್ರಾಮದ ಶಿವಣ್ಣ ಹಣಮಂತ್ರಾಯ (32) ಸ್ಥಳದಲ್ಲಿ ಮೃತಪಟ್ಟಿದ್ದು, ಹಿಂಬದಿ ಸವಾರ ಮೌನೇಶ ಎಂಬಾತನಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮೂಡಬೂಳ ಗ್ರಾಮಕ್ಕೆ ಕ್ರೂಸರ್‌ವೊಂದರಲ್ಲಿ ಸುರಪುರ ತಾಲೂಕಿನಿಂದ ಹತ್ತಿ ಬಿಡಿಸಲು ಕೂಲಿ ಕಾರ್ಮಿಕರು ಬಂದಿದ್ದು, ಶಿವಣ್ಣ ಹಣಮಂತ್ರಾಯ ಕೂಲಿ ಆಳುಗಳನ್ನು ಕಳುಹಿಸಿ ತಾನು ಹಿಂಬದಿಯಿಂದ ದ್ವಿಚಕ್ರವಾಹನದ ಮೇಲೆ ಹೊರಟಿದ್ದ. ಈ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.
ಸ್ಥಳಕ್ಕೆ ಗ್ರಾಮೀಣ ಭಾಗದ ಸಿಪಿಐ ಸಂತೋಷ ಬನ್ನಟ್ಟಿ ಮತ್ತು ಬಿ.ಗುಡಿ ಠಾಣೆಯವರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
--
ವಿದ್ಯಾರ್ಥಿಗಳಲ್ಲಿ ಪರಿಸರ ಜ್ಞಾನ ಮೂಡಿಸಲು ಕರೆ
ಸುರಪುರ: ಕಾಡು ಬೆಳೆಸಿದರೆ ನಾಡು ಉಳಿಯುತ್ತದೆ. ಕಾಡಿನಲ್ಲಿರುವ ಗಿಡ ಮರಗಳೇ ಜೀವಾಳ. ಗಿಡಮರಗಳು ಮನುಷ್ಯನ ಉಸಿರಾಟಕ್ಕೆ ಬೇಕಾದ ಆಮ್ಲಜನಕ ಒದಗಿಸುತ್ತವೆ. ಗಿಡಮರಗಳ  ಮಹತ್ವದ ಬಗ್ಗೆ ಜ್ಞಾನ ಮೂಡಿಸುವುದು ಅತ್ಯವಶ್ಯ ಎಂದು ಸುರಪುರದ ಬಾಲಕಿಯರ ಸಪಪೂ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕ ರಾಜಶೇಖರ ಮಿಣಜಗಿ ಹೇಳಿದರು.
ಸಮೀಪದ ರಂಗಂಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಚಾರ್ಯ ಬಸವರಾಜ ಕೊಡೇಕಲ್ ಮಾತನಾಡಿದರು.
ಕರ್ನಾಟಕ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ನಾಗಣ್ಣ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉಪನ್ಯಾಸಕಿ ಶಕುಂತಲಾ ಜಾಲವಾದಿ ಪ್ರಾಸ್ತಾವಿಕ ಮಾತನಾಡಿದರು. ಗುರುಲಿಂಗಪ್ಪ ಖಾನಾಪುರ, ಮಹ್ಮದ್ ಮಶಾಖ್, ಈರಯ್ಯ ಭಂಡಾರಿ, ಅಬ್ದುಲ್ ವಾಸೆ, ಕಬೀರ್, ಸತೀಶ ವಾರದ, ಅಶೋಕ ಗೋಗಿ, ನಿಂಗಣ್ಣಗೌಡ ಪಾಟೀಲ್ ಇನ್ನಿತರ ಉಪನ್ಯಾಸಕರು ಇದ್ದರು. ಉಪನ್ಯಾಸಕಿಯರಾದ ಗೀತಾ ಸ್ವಾಗತಿಸಿದರು. ಅರುಣಾ ನಿರೂಪಿಸಿದರು. ಕಬೀರ ವಂದಿಸಿದರು.
----

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement