ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಾಡಿ ಅಭಿವೃದ್ಧಿಗೆ ಪ್ರಿಯಾಂಕ್ ನಿರ್ಲಕ್ಷ್ಯ

Lingaraj Badiger
Updated On : 10 Dec 2013, 10:43 am

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಡಿ.9
ವಾಡಿ ಪಟ್ಟಣದ ಸಿಸಿ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಇತರ ಮೂಲ ಸೌಕರ್ಯ ಒದಗಿಸಲು ಬಿಜೆಪಿ ಸರ್ಕಾರದಲ್ಲಿ ಐದು ಕೋಟಿ ರು. ಮಂಜೂರು ಮಾಡಿದೆ. ಶಾಸಕ ಪ್ರಿಯಾಂಕ್ ಖರ್ಗೆ ಅವರು ನಿರ್ಲಕ್ಷ್ಯದಿಂದ ಪಟ್ಟಣದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಮಾಜಿ ಶಾಸಕ ವಾಲ್ಮೀಕಿ ನಾಯಕ ಆರೋಪಿಸಿದರು.
  ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಯಕರ್ತರ ತುರ್ತು ಸಭೆ ಉದ್ದೇಶಿಸಿ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಪಟ್ಟಣದ ಬಲರಾಮ ಚೌಕದಿಂದ ಶ್ರೀನಿವಾಸ ವೃತ್ತದವರೆಗೆ ದೊಡ್ಡ ರಸ್ತೆ ನಿರ್ಮಾಣ, ವಿವಿಧ ವಾರ್ಡ್‌ನಲ್ಲಿ ಸಿಸಿ ರಸ್ತೆ, ಚರಂಡಿಗಾಗಿ ಐದು ಕೋಟಿ ರು. ಮಂಜೂರು ಮಾಡಲಾಗಿದೆ. ಪುರಸಭೆ ನೂತನ ಕಟ್ಟಡಕ್ಕಾಗಿ 11 ಲಕ್ಷ ವೆಚ್ಚದಲ್ಲಿ ಒಂದು ಎಕರೆ ಭೂಮಿ ಖರೀದಿಸಿದೆ. ಪುರಸಭೆ ಭವ್ಯ ಕಟ್ಟಡಕಾಗಿ 80 ಲಕ್ಷ ಮಂಜೂರು ಮಾಡಲಾಗಿತ್ತು ಎಂದು ಹೇಳಿದರು.
  ಪಟ್ಟಣದ ಅನೇಕ ಕಾಮಗಾರಿಗಳು ಶಾಸಕ ಪ್ರಿಯಾಂಕ್ ಖರ್ಗೆ ಅವರ ನಿರ್ಲಕ್ಷ್ಯದಿಂದ ಕುಂಠಿತಗೊಂಡಿವೆ ಎಂದು ಆರೋಪಿಸಿದರು.
  ಇದೇ ಸಂದರ್ಭದಲ್ಲಿ ಶಕ್ತಿ ಕೇಂದ್ರದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಹರಿ ಗಲಾಂಡೆ, ಕಾರ್ಯದರ್ಶಿಯಾಗಿ ರಾಜೇಶ ಕಾಂಬಳೆ, ಶಕ್ತಿ ಕೇಂದ್ರ ಯುವ ಮೋರ್ಚಾ ಅಧ್ಯಕ್ಷ ಸುನೀಲ್. ಎಸ್. ರಾಠೋಡ (ಪೋನಾ), ಕಾರ್ಯದರ್ಶಿಯಾಗಿ ವೀರಣ್ಣ ಯಾರಿ, ಉಪಾಧ್ಯಕ್ಷ ಹಣಮಂತ ಚವ್ಹಾಣ ಆಯ್ಕೆಗೊಂಡರು.
  ಬಿಜೆಪಿ ಮುಖಂಡರಾದ ಅಶೋಕ ಸೂರ್ಯವಂಶಿ, ರಾಮಚಂದ್ರ ರೆಡ್ಡಿ, ಟೂನು ಶೇಠ್, ಫರತಪ್ಪ ಕರದಳಿ, ಮಲ್ಲೇಶಿ ಭಂಡಾರಿ, ಹರಿ ಗಲಾಂಡೆ, ಠಾಕೂರ ಸಿಂಗ್, ಹಣಮಂತ ಚವ್ಹಾಣ, ಬಸವರಾಜ ಕಟಮಳ, ಪುರಸಭೆ ಸದಸ್ಯ ಭಗವತ ಸೂಳೆ, ಕಿಶನ ಜಾಧವ, ಅಶೋಕ ಬಾಜಿರಾವ, ಹರಿ ಜಾಧವ, ಅಂಬಾದಾಸ ಜಾಧವ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement