ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಷಣ್ಮುಖಶ್ರೀ ಪಲ್ಲಕ್ಕಿ ಉತ್ಸವ

Lingaraj Badiger
Updated On : 10 Dec 2013, 10:42 am

ಜೇವರ್ಗಿ: ಷಣ್ಮುಖ ಶ್ರೀ ತಪಸ್ಸಿನ ಸ್ಥಳವಾದ ಜೋಗಿಕೊಳ್ಳದಲ್ಲಿ ನಡೆಯಲಿರುವ ಛಟ್ಟಿ ಉತ್ಸವ ನಿಮಿತ್ತ ಸೋಮವಾರ ಪಟ್ಟಣದ ಷಣ್ಮುಖಶ್ರೀ ಮಠದಿಂದ ಭಕ್ತರು ತಾಲೂಕಿನ ಕೋಳಕೂರ ಗ್ರಾಮದವರೆಗೆ ಷಣ್ಮುಖ ಶಿವಯೋಗಿ ಪಲ್ಲಕ್ಕಿ ಉತ್ಸವ ನಡೆಸಿದರು. ಪೀಠಾಧಿಪತಿ ವಿಜಯಕುಮಾರಶ್ರೀ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ಛಟ್ಟಿ ಉತ್ಸವದ ನಿಮಿತ್ತ ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೋಳಕೂರದ ಜೋಗಿ ಕೊಳ್ಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯಕುಮಾರ ಶ್ರೀ ನೇತೃತ್ವ ವಹಿಸಿದ್ದರು. ವಿವಿಧ ವಾದ್ಯ ವೈಭವಗಳು ಪಲ್ಲಕ್ಕಿ ಉತ್ಸವದ ಮೆರಗನ್ನು ಇಮ್ಮಡಿಸಿದ್ದವು.
 ರಟಕಲ್‌ನ ನೀಲಕಂಠಶ್ರೀ ಸಾನಿಧ್ಯ ವಹಿಸಿದ್ದರು. ಪಲ್ಲಕ್ಕಿ ಉತ್ಸವದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಜಿಪಂ ಮಾಜಿ ಸದಸ್ಯ ಅಶೋಕ ಸಾಹು ಗೋಗಿ, ಷಣ್ಮುಖಪ್ಪ ಸಾಹು ಗೋಗಿ, ಬಸ್ಸಯ್ಯಸ್ವಾಮಿ ಸ್ಥಾವರಮಠ, ಶಿವಶರಣಪ್ಪಗೌಡ, ಶಿವಾನಂದ, ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ, ವಿಶ್ವನಾಥ ಕಲ್ಲಾ, ದೇವಿಂದ್ರಪ್ಪ ಸೀರಿ, ಚಂದ್ರಶೇಖರ ಸೀರಿ, ಹಂಪಣ್ಣಗೌಡ ಹಾಲಗಡ್ಲಾ, ಶರಣಪ್ಪ, ಬಸವರಾಜ ಹಳಿಮನಿ, ರವಿ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement