ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಹಕಾರ ಸಂಘಗಳಿಗೆ ಸೂಚನೆ

Lingaraj Badiger
Updated On : 10 Dec 2013, 10:42 am

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಡಿ.9
ರಾಜ್ಯ ಸರ್ಕಾರದ ಸಚಿವಾಲಯದ ಆದೇಶದಂತೆ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ಕ್ಕೆ ತಿದ್ದುಪಡಿ ತರಲಾಗಿದೆ.
 ತಿದ್ದುಪಡಿ ಅಧಿನಿಯಮ 2013ಕ್ಕೆ ಸಂಬಂಧಿಸಿದಂತೆ ತೊಡಕು ನಿವಾರಿಸಲು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ನಿಯಮ 1960ರನ್ವಯ 2012- 13ನೇ ಸಾಲಿಗೆ ಲೆಕ್ಕ ಪರಿಶೋಧನೆ ಮಾಡಿಸದೆ ಇರುವ ಸಹಕಾರ ಸಂಘಗಳಿಗೆ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 27(ಬಿ)ರಂತೆ ರಿಯಾಯಿತಿ ನೀಡಲಾಗಿದೆ.
  2012- 13ನೇ ಸಾಲಿಗೆ ಲೆಕ್ಕಪರಿಶೋಧನೆ ಆಗಿರುವ ಗುಲ್ಬರ್ಗ ಉಪ ವಿಭಾಗದ ಸಹಕಾರ ಸಂಘಗಳು ಸಹಕಾರ ವರ್ಷ ಮುಕ್ತಾಯದ 6 ತಿಂಗೊಳಗೆ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 27(ಬಿ)ನಂತೆ ಸಂಘದ ಚಟುವಟಿಕೆಗಳ ವಾರ್ಷಿಕ ವರದಿ, ಲೆಕ್ಕಪತ್ರ ಪರಿಶೋಧಿತ ವಿವರ ಪತ್ರಗಳು, ಸಾಮಾನ್ಯ ಸಭೆಯು ಅನುಮೋದಿಸಿರುವ ಹೆಚ್ಚುವರಿ ಆದಾಯದ ವಿಲೇವಾರಿಗಾಗಿ ಯೋಜನೆ ಮತ್ತು ಉಪವಿಧಿಯ ತಿದ್ದುಪಡಿಗಳ ಪಟ್ಟಿ, ಸಾಮಾನ್ಯ ಸಭೆ ನಡೆಸುವ ದಿನಾಂಕ, ಚುನಾವಣೆಗಳು ಬಾಕಿ ಇದ್ದಲ್ಲಿ ಅವುಗಳನ್ನು ನಡೆಸುವ ಬಗ್ಗೆ ಘೋಷಣೆಯನ್ನು, ಹಣದ ದುರುಪಯೋಗ ಅಥವಾ ದುರ್ವಿನಿಯೋಗ ಇದ್ದರೆ ಅದು ಮತ್ತು ಸಿವಿಲ್, ಕ್ರಿಮಿನಲ್ ಮತ್ತು ಶಿಸ್ತು ಕ್ರಮ ಸೇರಿದಂತೆ ಆ ಕುರಿತು ಜವಾಬ್ದಾರರಾಗಿರುವ ವ್ಯಕ್ತಿಗಳ ವಿರುದ್ಧ ಕೈಗೊಂಡ ಕ್ರಮ ಮತ್ತು ಅಧಿನಿಯಮದ ಮಾಹಿತಿಯನ್ನು ಗುಲ್ಬರ್ಗ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಸಲ್ಲಿಸಬೇಕೆಂದು ತಿಳಿಸಲಾಗಿದೆ.

ಇಂದು ವಿಶೇಷ ಆರೋಗ್ಯ ತಪಾಸಣೆ
ಗುಲ್ಬರ್ಗ: ಹೈದರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆ ಗುಲ್ಬರ್ಗ ನೇತೃತ್ವದಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಯೋಜನೆಯಡಿ ವಿಶೇಷ ಆರೋಗ್ಯ ತಪಾಸಣಾ ಶಿಬಿರವನ್ನು ಅಫಜಲ್ಪುರ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಡಿ. 10ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 4ರವರೆಗೆ ಹಮ್ಮಿಕೊಳ್ಳಲಾಗಿದೆ. ಅಫಜಲ್ಪುರ ತಾಲೂಕಿನ ಬಿಪಿಎಲ್ ಕಾರ್ಡು ಹೊಂದಿದ ಕುಟುಂಬದ ರೋಗಿಗಳು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ. ಶಿಬಿರದಲ್ಲಿ ಕ್ಯಾನ್ಸರ್, ನರರೋಗ, ಮೂತ್ರಪಿಂಡದ ತೊಂದರೆ, ಸುಟ್ಟಗಾಯ, ಅಪಘಾತ ಹಾಗೂ ನವಜಾತ ಶಿಶುಗಳ ಪರಿಣಿತ ವೈದ್ಯರು ಪಾಲ್ಗೊಂಡು ರೋಗಿಗಳನ್ನು ಪರೀಕ್ಷಿಸಿ, ಚಿಕಿತ್ಸೆ ಮತ್ತು ಸಲಹೆ ನೀಡುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement