ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದು ಪರಮೇಶ್ವರರ ಮೌನ ತಪಸ್ಸು ಸಂಪನ್ನ

Mainashree
Updated On : 11 Dec 2013, 10:45 am

ಕ.ಪ್ರ.ವಾರ್ತೆ  ಚಿಂಚೋಳಿ  ಡಿ. 10
ಸಂತ ಮಹಾತಪಸ್ವಿ ಪಂಚಾಕ್ಷರಿ ಪರ್ವತಲಿಂಗ ಪರಮೇಶ್ವರ ಮಹಾರಾಜ ಅವರ 9 ತಿಂಗಳ 9 ದಿವಸದ ಘೋರ ಮೌನ ತಪಸ್ಸಿನ ಮುಕ್ತಾಯ ಸಮಾರಂಭ ಡಿ.11ರಂದು ಬೆಳಗ್ಗೆ 9.9 ನಿಮಿಷಕ್ಕೆ ಚಿಂಚೋಳಿ ತಾಲೂಕಿನ ಸುಕ್ಷೇತ್ರ ಸೊನ್ಯಾಲಗಿರಿ ಪಂಗರಗಾದಲ್ಲಿ ನಡೆಯಲಿದೆ. ಬೆಳಗ್ಗೆ 11.05ಕ್ಕೆ ಬೆಳ್ಳಿ ತೊಟ್ಟಿಲು ಹಾಗೂ ತುಲಾಭಾರ ಕಾರ್ಯಕ್ರಮ ನಡೆಯಲಿದೆ. 12. 30ಕ್ಕೆ ಧಾರ್ಮಿಕ ಸಭೆ ನಡೆಯಲಿದೆ.
ಕ್ಷೇತ್ರದ ಶಾಸಕ ಡಾ. ಉಮೇಶ ಜಾಧವ ಅವರ ಅಧ್ಯಕ್ಷತೆಯಲ್ಲಿ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಾಮಾಜಿಕ ನ್ಯಾಯ, ಸಬಲೀಕರಣ ಖಾತೆ ಸಚಿವ ಪಿ.ಬಲರಾಮ ನಾಯಕ, ಸಂಸದ ಧರ್ಮಸಿಂಗ್, ಮಾಜಿ ಸಚಿವ ರೇವು ನಾಯಕ ಬೆಳಮಗಿ ಸಚಿವರಾದ ಖಮರುಲ್ ಇಸ್ಲಾಂ, ಡಾ. ಶರಣಪ್ರಕಾಶ ಪಾಟೀಲ್, ಪಿ.ಟಿ. ಪರಮೇಶ್ವರ ನಾಯಕ, ಶಾಸಕರು, ಗಣ್ಯರು ಆಗಮಿಸಲಿದ್ದಾರೆ.
ಡಾ. ರಾಮರಾವ ಮಹಾರಾಜರು ದಿವ್ಯ ಸಾನ್ನಿಧ್ಯ ವಹಿಸುವರು. ಚೆನ್ನವೀರ ಶಿವಾಚಾರ್ಯರು, ಗುರುಪಾದಲಿಂಗ ಶಿವಾಚಾರ್ಯರು, ಶಿವಾನಂದ ಮಹಾಸ್ವಾಮೀಜಿ, ಸೋಮಶೇಖರ ಶಿವಾಚಾರ್ಯರು, ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ವಿರೂಪಾಕ್ಷ ಶಿವಾಚಾರ್ಯರು, ನೀಲಕಂಠ ಸ್ವಾಮೀಜಿ, ಜೇಮಸಿಂಗ್ ಮಹಾರಾಜರು, ಮಹ್ಮದ್ ಖುಸ್ರೋ ಹುಸೇನಿ ಸಜ್ಜಾದ್, ಬಳಿರಾಮ ಮಹಾರಾಜರು, ಸಿದ್ದಲಿಂಗ ಸ್ವಾಮೀಜಿ, ಮಾತಾ ಲತಾ ದೇವಿ, ಮಾತಾ ಕಲಾವತಿ ದೇವಿ ಅವರು ನೇತೃತ್ವ ವಹಿಸಲಿದ್ದಾರೆ.
ಕಂಗೊಳಿಸುತ್ತಿದೆ ಧ್ಯಾನ ಮಂದಿರ: ಸುಕ್ಷೇತ್ರ ಸೋನ್ಯಾಲಗಿರಿಯ ಧಾರ್ಮಿಕ ಪುಣ್ಯಕ್ಷೇತ್ರದಲ್ಲಿ ಸಂತ ಮಹಾತಪಸ್ವಿ ಪಂಚಾಕ್ಷರಿ ಪರ್ವತಲಿಂಗ ಪರಮೇಶ್ವರ ಮಹಾರಾಜರವರ 9 ತಿಂಗಳ 9 ದಿವಸದ ಘೋರ ಮೌನ ತಪಸ್ಸಿನ ಮುಕ್ತಾಯ ಸಮಾರಂಭದ ಹಿನ್ನೆಲೆಯಲ್ಲಿ ಸೊನ್ಯಾಲಗಿರಿಯಲ್ಲಿ ಹಬ್ಬದ ಸಡಗರ ಸಂಭ್ರಮ ಕಂಡು ಬರುತ್ತಿದೆ.
ಸಕಲ ಸಿದ್ಧತೆ: ಈಗಾಗಲೇ ಹೋಟೆಲ್, ಮಕ್ಕಳ ಆಟಿಕೆ ಸಾಮಾನುಗಳು ಮತ್ತು ತೆಂಗಿನ ವ್ಯಾಪಾರ ಅಂಗಡಿ ವ್ಯಾಪಾರಸ್ಥರು ತಮ್ಮ ವ್ಯಾಪಾರ ಅಂಗಡಿಗಳನ್ನು ತೆರೆದಿದ್ದಾರೆ. ಬೆಡಸೂರ(ಕೆ) ಮತ್ತು ಬೆಡಸೂರ(ಎಂ) ಹಾಗೂ ಪಂಗರಗಾ ಗ್ರಾಮಗಳ ಮುಖಾಂತರ ಬರುವ ಭಕ್ತರಿಗಾಗಿ ಉತ್ತಮ ರಸ್ತೆಗಳ ನಿರ್ಮಾಣ ನಡೆಸಲಾಗಿದೆ.
ಕುಡಿವ ನೀರು, ಊಟದ ವ್ಯವಸ್ಥೆ ಮಾಡಲಾಗಿದೆ. ತಾಲೂಕಿನ ಕುಂಚಾವರಂ, ಐನಾಪುರ, ಚಿಮ್ಮನಚೋಡ ಮತ್ತು ಚಂದನಕೇರಾ, ಕೋಡ್ಲಿ, ಚೆಂಗಟಾ ಸಲಗರ ಬಸಂತಪುರ ಶಾದೀಪುರ, ಧರ್ಮಾಸಾಗರ ವಲಯಗಳ ಬಂಜಾರ ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement