ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಾಳೆಬೆಳಗುಂದಿ: ಬನದೇಶ್ವರ ರಥೋತ್ಸವ ವೈಭವ

Mainashree
Updated On : 11 Dec 2013, 10:44 am

ಕ.ಪ್ರ. ವಾರ್ತೆ  ಯಾದಗಿರಿ  ಡಿ.10
ತಾಲೂಕಿನ ಗಡಿಭಾಗದ ಧಾರ್ಮಿಕ ಕ್ಷೇತ್ರವಾಗಿರುವ ಕಾಳೆಬೆಳಗುಂದಿ ಬನದೇಶ್ವರ ಜಾತ್ರೆ ಅಂಗವಾಗಿ ರವಿವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಸಾವಿರಾರು ಭಕ್ತರ ಮಧ್ಯೆ ರಥೋತ್ಸವ ಅದ್ಧೂರಿಯಾಗಿ ನಡೆಯಿತು.
  ದೇವಸ್ಥಾನದ ಅರ್ಚಕರು ದೇವರ ಮೂರ್ತಿಯನ್ನು ರಥೋತ್ಸವದಲ್ಲಿ ಕೂಡಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ರಥೋತ್ಸವದ ಮೇಲೆ ಉತ್ತುತ್ತಿ, ಬಾಳೆಹಣ್ಣು ಹಾಗೂ ತೆಂಗಿನ ಕಾಯಿಯನ್ನು   ಭಕ್ತಿಯಿಂದ ಅರ್ಪಿಸಿ ಬನದೇಶ್ವರ ಮಹಾರಾಜ್ ಕೀ ಜೈ ಎಂದು ಜೈಕಾರ ಹಾಕಿ ತಮ್ಮ  ಹರಕೆ ತೀರಿಸಿಕೊಂಡರು.
  ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲರೆಡ್ಡಿಗೌಡ ಕಣೆಕಲ್, ಜಿಲ್ಲಾ ನಾಯಾಧೀಶರಾದ ವಿದ್ಯಾವತಿ ಅಕ್ಕಿ, ಚಿದಾನಂದಪ್ಪ ಕಾಳಬೆಳಗುಂದಿ, ಪ್ರೇಮರಾಜ್ ದೋಕಾ, ಡಾ. ಅಮರೇಶ ಗೌಡರ್ ಸೈದಾಪೂರ, ಸಿದ್ದಣಗೌಡ ಕಡೇಚೂರು, ಬನದಪ್ಪ್ಪ ಮಾದ್ವಾರ, ವಿಶ್ವನಾಥ ರೆಡ್ಡಿ ಗೊಂದಡಗಿ, ವೆಂಕಟ ರೆಡ್ಡಿ ಹತ್ತಿಕುಣಿ, ಬನಶಂಕರ ಕಿಲ್ಲನಕೇರಾ, ಮಲ್ಲಿಕಾಜರ್ಜುನ ರೆಡ್ಡಿ ಮುಷ್ಟೂರು, ವೆಂಕೋಬಾ ಪೂಜಾರಿ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement