ಚಿತ್ರಕಲೆಯಿಂದ ನೆನಪಿನ ಶಕ್ತಿ ವೃದ್ಧಿ
ಚಿತ್ತಾಪುರ: ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಿಗೆ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ ಹಾಗೂ ಆಲೋಚನಾ ಶಕ್ತಿ ಬೆಳೆಯುತ್ತದೆ ಎಂದು ಯಾದಗಿರ ಶಾಖೆಯ ಕೃಷ್ಣ ಭೀಮಾ ಸಮೃದ್ಧಿ ಲೋಕಲ್ ಬ್ಯಾಂಕ್ ಫಿಲ್ಡ್ ಆಫಿಸರ್ ರಾಜಕುಮಾರ್ ಹೇಳಿದರು.
ಪಟ್ಟಣದ ಸರ್ಕಾರಿ ಮಾದರಿಯ ಕನ್ಯಾ ಪ್ರಾಥಮಿಕ ಶಾಲೆಯಲ್ಲಿ ಕೃಷ್ಣಾ ಭೀಮಾ ಸಮೃದ್ಧಿ ಲೋಕಲ್ ಏರಿಯಾ ಬ್ಯಾಂಕ್ ಶಾಖೆ ಯಾದಗಿರ ಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಯಲ್ಲಿ ಮಾತನಾಡಿದರು.
ಬ್ಯಾಂಕ್ ವ್ಯವಸ್ಥಾಪಕ ಮಂಜುನಾಥ ಹರಸೂರ ಮಾತನಾಡಿ, ದುಂದು ವೆಚ್ಚ ಮಾಡದೆ ಹಣ ಉಳಿಸಿದಾಗ ಮಾತ್ರ ಅದು ಕಷ್ಟ ಕಾಲದಲ್ಲಿ ಸಹಾಯಕ ಬರುತ್ತದೆ ಎಂದರು.
ಶಿವಶರತಣಪ್ಪ ಕೇಶ್ವಚರ ಟೆಂಗಳಿ, ವೆಂಕಣ್ಣ ಟಿ. ಹವಾಲ್ದಾರ, ಯಂಕಪ್ಪ ಬಪ್ಪರಗಿ, ಎಂ.ಡಿ. ಕಲಿಲ್ ಜಮಾದಾರ, ಚಂದ್ರಶೇಖರ ಗೋಗಿ, ಶಿಕ್ಷಕರಾದ ಶರಣಪ್ಪ ಭಜಂತ್ರಿ, ದೇವಪ್ಪ ಕೆ. ನಂದೂರಕರ್, ನರಸಿಂಹಲು ಹಾಗೂ ಮುಂತಾದವರು ಉಪಸ್ಥಿತರಿದ್ದರು.