ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಧನಾತ್ಮಕ ಚಿಂತನೆಯಂದ ವ್ಯಕ್ತಿತ್ವ ವಿಕಾಸ

Mainashree
Updated On : 11 Dec 2013, 10:46 am

ಗುಲ್ಬರ್ಗ: ಪ್ರತಿಯೊಬ್ಬರು ಸದಾ ಧನಾತ್ಮಕ ಚಿಂತನಶೀಲರಾಗಿದಾಗಲೇ ಅವರ ವ್ಯಕ್ತಿತ್ವ ವಿಕಸನವಾಗಿ ಪರಿಪೂರ್ಣ ಜೀವನ ನಡೆಸಲು ಸಾಧ್ಯ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಮಹೇಶ್ವರಾನಂದಜೀ ಮಹಾರಾಜರು ಅಭಿಪ್ರಾಯಪಟ್ಟರು.
ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದ ಕಾರ್ಯಕ್ರಮ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಗಳ ಆಶ್ರಯದಲ್ಲಿ ಇತ್ತೀಚೆಗೆ ಜಿಲ್ಲೆಯ ಗಿರಿಜನ ಹಾಗೂ ಪರಿಶಿಷ್ಟ ಪಂಗಡದ ಯುವಜನರಿಗಾಗಿ ಆಯೋಜಿಸಲಾಗಿದ್ದ ಯುವ ಚೇತನ ಹಾಗೂ ಯುವ ಪ್ರೇರಣೆ ತರಬೇತಿಯ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶಿಬಿರಾಧಿಕಾರಿಗಳು ಹಾಗೂ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಶಿವಕುಮಾರ ಸ್ವಾಮಿ ಶಿಬಿರದ ಬಗ್ಗೆ ವಿಚಾರ ಮಂಡಿಸಿದರು. ಜಿಪಂ ಯೋಜನಾ ನಿರ್ದೇಶಕ ಎಸ್.ಎಂ. ಕೆಂಚಣ್ಣನವರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಬಿರಾರ್ಥಿ ಬಸವರಾಜ ಹಾಗೂ ಶಶಿಕಲಾ ಅವರು ಶಿಬಿರದ ವರದಿ ಮಂಡಿಸಿದರು. ಶಿಬಿರಾರ್ಥಿಗಳಾದ ಪೂಜಾ, ಜಯಶ್ರೀ ಹಾಗೂ ಮಹೇಶ ಶಿಬಿರದ ಬಗೆಗಿನ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಶಿಬಿರದ ಯಶಸ್ವಿಗೆ ಕಾರಣರಾದ ಶಿಬಿರಾಧಿಕಾರಿಗಳಿಗೆ ಸನ್ಮಾನಿಸಲಾಯಿತು.
ಮಹರ್ಷಿ ವಾಲ್ಮೀಕಿ ಸಮಾಜದ ಮುಖಂಡರಾದ ಶಿವರಾಜ ನಾಯಕ, ಜಿಲ್ಲಾ ಜಾಗೃತ ದಳದ ಸದಸ್ಯ ಚನ್ನಪ್ಪ, ಜಿಲ್ಲಾ ಮಹರ್ಷಿ ವಾಲ್ಮಿಕಿ ಯುವ ಸಂಘದ ಅಧ್ಯಕ್ಷ ವಿರೇಶ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದರಾಮಪ್ಪ ಲೋಣಿ, ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಪ್ರತಿಭಾ ಹಿರೇಮಠ ಹಾಗೂ ಪ್ರಿಯಂಕಾ ನಾಗೂರೆ, ಮಹಿಳಾ ವಸತಿ ನಿಲಯದ ಮೇಲ್ವಿಚಾರಕಿ ಮಂಜುಳಾ, ಇಲಾಖೆಯ ಸಿಬ್ಬಂದಿಗಳಾದ ರಾಜೇಂದ್ರ, ರಾಮಚಂದ್ರ, ಸಚಿನ್, ಮಲ್ಲಪ್ಪ, ವೆಂಕಣ್ಣ ಸೇರಿದಂತೆ ಎಲ್ಲ ಸಿಬ್ಬಂದಿ, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಅಂಬಮ್ಮ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ನಾಗಮಣಿ ಸ್ವಾಗತಿಸಿದರು. ಶಾರದಾ ನಿರೂಪಿಸಿದರು. ರವಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement