ಪಂಗರಗಾ ಅರಣ್ಯದಲ್ಲಿ ಒತ್ತು'ವರಿ'
ಗುಲ್ಬರ್ಗ: ಚಿಂಚೋಳಿ ತಾಲೂಕಿನ ಸೋನ್ಯಾಲಗಿರಿಯಲ್ಲಿ ಕಾಯ್ದಿಟ್ಟ ಅರಣ್ಯದ 8 ಎಕರೆ ಭೂಮಿ ಒತ್ತುವರಿಯಾಗಿದೆ ಎಂದು 2013ರ ಫೆ.5ರಂದು ಕೂಡ್ಲಿ ಶಾಖೆ ಉಪ ವಲಯ ಅರಣ್ಯಾಧಿಕಾರಿ ಎಫ್‌ಐಆರ್ ದಾಖಲಿಸಿದ್ದು, ಡಿ.11ರಂದು ನಡೆಯಲಿರುವ ಲಂಬಾಣಿ ಸಮುದಾಯದ ಸಂತ ಪರ್ವತಲಿಂಗ ಮಹಾರಾಜರ ಮೌನ ತಪಸ್ಸಿನ ಮುಕ್ತಾಯ ಸಮಾರಂಭದ ಸುತ್ತ ವಿವಾದ ಕುಡಿಯೊಡೆದಂತಾಗಿದೆ.
ಪ್ರತಿಯೊಂದಿಗೆ ಧ್ವನಿ ಎತ್ತಿದ್ದರಿಂದ ಡಿ. 11 ರ ಬುಧವಾರ ಆಯೋಜನೆಗೊಂಡಿರುವ ಲಂಬಾಣಿ ಸಮುದಾಯದ ಸಂತ ಪರ್ವತಲಿಂಗ ಮಹಾ ರಾಜರ ಮೌನ ತಪಸ್ಸಿನ ಮುಕ್ತಾಯ ಸಮಾರಂಭದ ಸುತ್ತ ವಿವಾದ ಕುಡಿಯೊಡದಂತಾಗಿದೆ.
ಫೆ.5ರಂದೇ ಎಫ್‌ಐಆರ್ ದಾಖಲು: ಕೂಡ್ಲಿ ಶಾಖೆಯ ಪಂಗರಗಾ ಅರಣ್ಯ ಬೀಟ್‌ನಲ್ಲಿ ಚಿತ್ತಾಪುರದ ಬೆಡಸೂರ ತಾಂಡಾದ ಪರಶುರಾಮ(ಪರಮೇಶ್ವರ) ಸೊನ್ಯಾಲಗಿರಿ ಸಂತ ಪರ್ವತಲಿಂಗ ಪರಮೇಶ್ವರ ಮಹಾರಾಜ) ಪಂಗರಗಾ ಕಾಯ್ದಿಟ್ಟ ಅರಣ್ಯ ಪ್ರದೇಶದ ಸರ್ವೆ ನಂಬರ್ 113 ಮತ್ತು 114ರಲ್ಲಿ ಅಕ್ರಮ ಪ್ರವೇಶಿಸಿ ಭೂಮಿ ಒತ್ತುವರಿ ಮಾಡಿ, ಅಕ್ರಮ ಕಟ್ಟಡ ನಿರ್ಮಿಸಿದ್ದಾರೆ, ಅಂದಾಜು 8 ಎಕರೆ ಭೂಪ್ರದೇಶ ಅಲ್ಲಿ ಒತ್ತುವರಿಯಾಗಿದೆ ಎಂದು ಚಿಂಚೋಳಿ ಪ್ರಾದೇಶಿಕ ವಲಯ ಅರಣ್ಯ ವಿಭಾಗದ ಕೋಡ್ಲಿ ಉಪ ವಲಯ ಅರಣ್ಯಾಧಿಕಾರಿಗಳು 2013ರ ಫೆ.5ರಂದು ದಾಖಲಿಸಿರುವ ಪ್ರಥಮ ಮಾಹಿತಿ ವರದಿಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.
ಸಿಎಂ ಪಾಲ್ಗೊಳ್ಳುವಿಕೆ ಅದೆಷ್ಟು ಸರಿ?: ಈ ಪ್ರಕರಣದಲ್ಲಿ ಯಾವುದೇ ವಿಧದಲ್ಲಿ ಇತ್ಯರ್ಥವಾಗಿಲ್ಲ. ಆದಾಗ್ಯೂ ಕಾಯ್ದಿಟ್ಟ ಭೂಮಿ ಒತ್ತುವರಿ ಆರೋಪ ಹೊತ್ತುಕೊಂಡಿರುವ ಸೋನ್ಯಾಲಗಿರಿ ಪಂಗರಗಾದ ಪರ್ವತಲಿಂಗ ಪರಮೇಶ್ವರ ಸ್ವಾಮೀಜಿ ಅವರ ಮೌನ ತಪಸ್ಸಿನ ಮುಕ್ತಾಯ ಸಮಾರಂಭಕ್ಕೆ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ, ರಾಜ್ಯ ಸಚಿವರು, ರಾಜಕೀಯ ಮುಖಂಡರೇ ಬರುತ್ತಿರುವುದು ಅದೆಷ್ಟು ಸರಿ, ಕಾನೂನು ಬಾಹಿರ ಕೆಲಸಗಳಿಗೆ ಬೆಂಬಲಿಸಿದಂತೆ ಆಗುವುದಿಲ್ಲವೇ ಎಂದು ಪಂಗರಗಾ ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
ಮೊದಲೇ ಅರಣ್ಯ ಅಷ್ಟಕ್ಕಷ್ಟೆ ಇರುವ ಗುಲ್ಬರ್ಗದಲ್ಲಿನ ಹಸಿರು ನೆಲವೆಂದರೆ ಚಿಂಚೋಳಿ. ಕಾಯ್ದಿಟ್ಟ ಅರಣ್ಯವಾಗಿ ಇಲ್ಲಿ ಹಸಿರಿನ ಸಂರಕ್ಷಣೆಗೆ ಸರ್ಕಾರ ಮುಂದಾದರೂ ಸ್ಥಳೀಯವಾಗಿ ಇಂತಹ ಸಮಸ್ಯೆಗಳು ಕಾಡಲಾರಂಭಿಸಿವೆ. ಸರ್ಕಾರ ವನ್ಯಧಾಮ ಯೋಜನೆ ಕೈಗೆತ್ತಿಕೊಂಡಿರುವ ಸಂದರ್ಭದಲ್ಲೇ ಒತ್ತುವರಿ ತಲೆಶೂಲೆ ಶುರುವಾಗಿದೆ.
ಶೇಷಮೂರ್ತಿ ಅವಧಾನಿ