ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶಿಕ್ಷಣ ಸಂಸ್ಥೆಗಳಿಂದ ಸಂಸ್ಕಾರ: ಶ್ರೀಗಳು

Mainashree
Updated On : 11 Dec 2013, 10:45 am

ಕನ್ನಡಪ್ರಭ ವಾರ್ತೆ  ಸೈದಾಪುರ  ಡಿ.10
ಸರ್ಕಾರ ಮಾಡಲಾಗದ ಕೆಲಸವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ. ವಿವಿಧ ಚಟುವಟಿಕೆಗಳ ಮೂಲಕ ಅವುಗಳು ವಿದ್ಯಾರ್ಥಿಗಳಿಗೆ ಸಂಸ್ಕಾರವನ್ನು ನೀಡುತ್ತಿವೆ ಎಂದು ಮುರುಘರಾಜೇಂದ್ರ ಶ್ರೀ ಹೇಳಿದರು.
 ಇಲ್ಲಿನ ಸೈದಾಪುರ ವಿದ್ಯಾ ವರ್ಧಕ ಸಂಘದ ಸಂಸ್ಥೆಯ ಸುವರ್ಣ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿನ ರಂಗಮಂದಿರದ ಶಂಕುಸ್ಥಾಪನೆ ನಂತರ ಮಾತನಾಡಿ, ಬದುಕಿನಲ್ಲಿ ಶಾಶ್ವತವಾಗಿರುವುದು ಜ್ಞಾನ ಮಾತ್ರ. ಅದನ್ನು ಅಪಹರಿಸಲು ಯಾರಿಂದಲು ಸಾಧ್ಯವಿಲ್ಲ. ಇದನ್ನು ವಿದ್ಯಾರ್ಥಿಗಳು ತಮ್ಮದಾಗಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
  ಸಾನ್ನಿಧ್ಯ ವಹಿಸಿ ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಡೇಚೂರ ಸಂಸ್ಥಾನಮಠದ ಷ.ಬ್ರ. ಗುರುಮೂರ್ತಿ ಶಿವಾಚಾರ್ಯ ಶ್ರೀ ಮಾತನಾಡಿ, ಕೆಲ ಕೋಣಿಗಳಿಂದ ಪ್ರಾರಂಭವಾದ ಸಂಸ್ಥೆ ಇವತ್ತು ಎತ್ತರಕ್ಕೆ ಬೆಳೆದಿದೆ. ವಿವಿಧ ವಿಭಾಗಳೊಂದಿಗೆ ಕಾರ್ಯನಿರ್ವಸುವಂತಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸೇವಾ ಮನೋಭಾವನೆಯ ಕೆಲಸ ಮಾಡುವಂತಾಗಲೆಂದು ಹೇಳಿದರು.
  ಮಹೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷ ಗಾಜೀಯೊದ್ದೀನ್ ಸಿದ್ದಖಿ, ಗೌರವ ಅಧ್ಯಕ್ಷ ಮಲ್ಲರೆಡ್ಡಿಪ್ಪಗೌಡ ಕಣೇಕಲ, ಸಂಸ್ಥೆಯ ಮಾಜಿ ಅಧ್ಯಕ್ಷ ದೊಡ್ಡ ಸಿದ್ರಾಮಪ್ಪಗೌಡ ಬೆಳಗುಂದಿ ಇದ್ದರು. ಸಂಸ್ಥೆಯ ಅಧ್ಯಕ್ಷ ಸಿದ್ದಣ್ಣಗೌಡ ಕಡೇಚೂರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಚಂದ್ರಯ್ಯಗೌಡ ಕೂಡಲೂರ, ಬಸವರಾಜಪ್ಪಗೌಡ ನಿಲಗಲ, ಬಸವರಾಜ ಪಾಟೀಲ ಕ್ಯಾತನಾಳ, ಸಂಸ್ಥೆಯ ಉಪಾಧ್ಯಕ್ಷರಾದ ಬಸವಂತರಾಯಗೌಡ ಪೋ. ಪಾಟೀಲ, ಕೋಶಾಧ್ಯಕ್ಷರಾದ ಭೀಮಣ್ಣಗೌಡ ಹೊಸಗೌಡರು, ಆಡಳಿತ ಮಂಡಳಿಯ ಸದಸ್ಯರಾದ ಸಿದ್ರಾಮರಡ್ಡಿ ಪಲ್ಲಾ, ನ್ಯಾಯವಾದಿ ಬಸವರಾಜ ಪಾಟೀಲ, ಬಸ್ಸಪ್ಪಗೌಡ ಪಾಟೀಲ, ಬಸವರಾಜಪ್ಪ ಗೊಂದೆಡಿಗಿ, ಸದಸ್ಯರು, ಗ್ರಾಮಸ್ಥರು, ವಿವಿಧ ಶಾಲೆಗಳ ಶಿಕ್ಷಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಭೀಮಣ್ಣಗೌಡ ಪಾಟೀಲ ಕ್ಯಾತನಾಳ ಸ್ವಾಗತಿಸಿದರು. ಸಹಕಾರ್ಯದರ್ಶಿ ಮುಕುಂದಕುಮಾರ ಅಲಿಝಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement