ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

16 ರಂದು ಬೆಂಗಳೂರಲ್ಲಿ ಸಮ್ಮೇಳನ

Lingaraj Badiger
Updated On : 12 Dec 2013, 10:59 am

ಗುಲ್ಬರ್ಗ: ಎರಡು ಮತ್ತು ಮೂರು ವರ್ಷಗಳ ತರಬೇತಿ ಪಡೆದ ಎಲ್ಲ ಐಟಿಸಿ ತರಬೇತಿದಾರರಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಅವಕಾಶವಾಗುವಂತೆ ನೇಮಕಾತಿ ನಿಯಮಾವಳಿಗಳಲ್ಲಿ ತಿದ್ದುಪಡಿ ತರಬೇಕೆಂದು ಒತ್ತಾಯಿಸಿ ಅಖಿಲ ಭಾರತ ಯುವಜನ ಒಕ್ಕೂಟದ ಸಂಯೋಜಿತ ಐಟಿಸಿ ತರಬೇತಿದಾರರ ಸಂಘ ಡಿ.16 ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಮ್ಮೇಳನ ನಡೆಸಲು ನಿರ್ಧರಿಸಿದೆ.
ಈ ರಾಜ್ಯಮಟ್ಟದ ಸಮ್ಮೇಳನದ ಅಂಗವಾಗಿ ಡಿ.15 ರಂದು ಗುಲ್ಬರ್ಗದಿಂದ ಬೆಂಗಳೂರು ಚಲೋ ಕರೆ ನೀಡಲಾಗಿದೆ. ಈ ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲ ತರಬೇತಿದಾರರು ಡಿ.15ರ ಸಂಜೆ 6 ಗಂಟೆಯೊಳಗೆ ನಗರದ ರೈಲು ನಿಲ್ದಾಣದಲ್ಲಿರಬೇಕೆಂದು ಮುಖಂಡರಾದ ಮಹೇಶಕುಮಾರ್ ರಾಠೋಡ ಮತ್ತು ಹಣಮಂತ ಅಟ್ಟೂರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಿಎಂ ಚಾಲನೆ: ಡಿ.16 ರಂದು ಬೆಂಗಳೂರಿನಲ್ಲಿ ನಡೆಯುವ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಕುಮಾರ ನಾಯಕ ಭಾಗವಹಿಸಲಿದ್ದಾರೆ ಎಂದರು.
ಕ್ರಮಕ್ಕೆ ಸ್ವಾಗತ: ಐಟಿಸಿ ತರಬೇತಿದಾರರನ್ನು ಕೆಪಿಟಿಸಿಎಲ್‌ನಲ್ಲಿ ನೇರ ನೇಮಕಾತಿಗೆ ಪರಿಗಣಿಸಬೇಕೆಂದು ಎಐವೈಎಫ್ ನೇತೃತ್ವದಲ್ಲಿ ನಡೆದ ಹೋರಾಟ ಪ್ರತಿಫಲವಾಗಿ ಕೆಪಿಟಿಸಿಎಲ್ ನ್ಯಾಯಾಲಯದಲ್ಲಿ ಸಲ್ಲಿಸಿದ ಮೇಲ್ಮನವಿಯನ್ನು ಹಿಂದಕ್ಕೆ ಪಡೆದು ತರಬೇತಿದಾರರಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಅನುವು ಮಾಡಿಕೊಳ್ಳುವಂತೆ ನಿರ್ದೇಶನ ನೀಡಿರುವ ಕ್ರಮವನ್ನು ಸ್ವಾಗತಿಸಿದರು.
ನೇರ ನೇಮಕಾತಿಗೆ ತಿದ್ದುಪಡಿ: ಒಕ್ಕೂಟ ಈ ಕ್ರಮವನ್ನು ಖಂಡಿಸಿ ತನ್ನ ಮೇಲ್ಮನವಿಯನ್ನು ವಾಪಸ್ ಪಡೆದು ಎಲ್ಲ ಐಟಿಸಿ ತರಬೇತಿದಾರರ ನೇತೃತ್ವದಲ್ಲಿ ಕಳೆದ 6 ತಿಂಗಳಿಂದ ನಿರಂತರವಾಗಿ ವಿವಿಧ ಹಂತದ ಹೋರಾಟ ಮಾಡಿದ ಪರಿಣಾಮವಾಗಿ ಕೆಪಿಟಿಸಿಎಲ್ ಸಹ ನ್ಯಾಯಾಲಯಕ್ಕೆ ಸಲ್ಲಿಸಿರುವ ಮೇಲ್ಮನವಿಯನ್ನು ವಾಪಸ್ ಪಡೆದು ತರಬೇತಿದಾರರಿಗೆ ನೇರ ನೇಮಕಾತಿಗೆ ತಿದ್ದುಪಡಿ ತರುವುದಾಗಿ ತಿಳಿಸಿದೆ ಎಂದರು.
ಕೆಪಿಟಿಸಿಎಲ್ ರಾಜ್ಯದ ನಾಲ್ಕು ವಿಭಾಗಗಳಲ್ಲಿ ನಡೆಸುತ್ತಿರುವ ತರಬೇತಿ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ನಂತರ ಮೂರು ವರ್ಷದ ತರಬೇತಿಯನ್ನು ಹಾಗೂ 2003 ರಿಂದ ಐಟಿಐ ನಂತರದ ಎರಡು ವರ್ಷ ಹಾಗೂ ಒಂದು ವರ್ಷದ ತರಬೇತಿಯನ್ನು ಕೊಡುತ್ತ ಬಂದಿದೆ. ಹೀಗಾಗಿ ಒಂದು, ಎರಡು, ಮೂರು ವರ್ಷ ತರಬೇತಿ ಪಡೆದ ಎಲ್ಲ ತರಬೇತಿದಾರರಿಗೆ ನೇರ ನೇಮಕಾತಿ ಮಾಡಿಕೊಳ್ಳುವ ರೀತಿಯಲ್ಲಿ ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಅರುಣಕುಮಾರ್ ಪಾಟೀಲ್ ಇದ್ದರು.
---

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement