ಇಂದು ಕಲಂ 371(ಜೆ) ಜಾಗೃತಿ
ಗುಲ್ಬರ್ಗಣಶಹಾಬಾದ್: ಹೈದ್ರಾಬಾದ್ ಕರ್ನಾಟಕ ಮುಸ್ಲಿಂ ಫೋರಂ ವತಿಯಿಂದ ಡಿ.12ರಂದು ಬೆಳಗ್ಗೆ 10 ಗಂಟೆಗೆ ನಗರದ ಜಾಮೀಯಾ ಮಜೀದ್ ಸಭಾಗೃಹದಲ್ಲಿ ಕಲಂ 371(ಜೆ) ಜಾರಿ ಕುರಿತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಚಾಲ ಫಜಲ್ ಪಟೇಲ್ ತಿಳಿಸಿದ್ದಾರೆ.
ತಾಪಂ ಚಲೋ
ಚಿಂಚೋಳಿ: ತಾಲೂಕಿನ ಗ್ರಾಮ ಪಂಚಾಯ್ತಿ ನೌಕರರ ಸಂಘದ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಡಿ.12 ರಂದು ತಾಪಂ ಚಲೋ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಭಾಗಣ್ಣ ಸಾಗರ ತಿಳಿಸಿದ್ದಾರೆ. ಗ್ರಾಪಂ ನೌಕರರ ಸಂಘದಿಂದ ವಿವಿಧ ಬೇಡಿಕೆಗಳಿಗಾಗಿ ಅನೇಕ ಸಲ ಮನವಿ ಪತ್ರ ಸಲ್ಲಿಸಿದರು ಕೂಡ ಸರ್ಕಾರ ಆದೇಶವಿದ್ದರು ಗ್ರಾಮ ಪಂಚಾಯತಿಗಳಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕನಿಷ್ಟ ವೇತನ ನೀಡಿರುವುದಿಲ್ಲ ಎಂದು ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಭಾಗಣ್ಣ ಸಾಗರ ತಿಳಿಸಿದ್ದಾರೆ.