ಪ್ರತಿಭಾ ಕಾರಂಜಿ
ಗುಲ್ಬರ್ಗ/ಶಹಾಬಾದ್: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಡಿ.12 ರಂದು ಹೊನಗುಂಟಾ ರಸ್ತೆಯ ಮಿನಿ ರೋಸ್ ಪಬ್ಲಕ್ ಶಾಲೆಯಲ್ಲಿ ಬೆಳಗ್ಗೆ 10ಕ್ಕೆ ನಡೆಯಲಿದೆ ಎಂದು ಸಿಆರ್ಪಿ ಹೊನ್ನಪ್ಪ ಬಿ.ಕೆ. ತಿಳಿಸಿದ್ದಾರೆ. ನಗರಸಭೆ ಅಧ್ಯಕ್ಷ ಗಿರೀಶ ಕಂಬಾನೂರ ಉದ್ಘಾಟಿಸಲಿದ್ದು, ಕ್ಷೇತ್ರ ಸಮನ್ವಯ ಅಧಿಕಾರಿ ಸಿದ್ಧವೀರಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಲಿಂಗಪ್ಪ ಹೆಬ್ಬಾಳ, ಉಪಾಧ್ಯಕ್ಷ ಶಿವಪುತ್ರ ಕರಣಿಕ, ಶಿಕ್ಷಣ ಸಂಯೋಜಕ ಸುಭಾಶ್ಚಂದ್ರ, ಕನ್ಯಾ ಪ್ರೌಢಶಾಲೆಯ ಮುಖ್ಯಗುರುಗಳಾದ ಪ್ರತಿಭಾ, ಸರ್ಕಾರ ಕನ್ಯಾ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶಿವಪುತ್ರ ಕೋಣಿನ್, ಬನ್ನಪ್ಪ ಸೈದಾಪುರ, ಪಿಎಸ್ಐ ರಘು.ಎನ್. ಮಿನಿ ರೋಸ್ ಸಂಸ್ಥೆ ಅಧ್ಯಕ್ಷ ಶಬ್ಬೀರ್ ಅಹ್ಮದ್ ಭಾಗವಹಿಸಲಿದ್ದಾರೆ.
ಸಂತಾಪ
ಗುಲ್ಬರ್ಗ/ಶಹಾಬಾದ್: ಮಂಗಳವಾರ ಮೈಸೂರು ಮಹಾರಾಜ ಶ್ರೀಕಂಠದತ್ತ ಒಡೆಯರ್ ನಿಧನಕ್ಕೆ ನಾಲವಾರದ ಕಾಂಗ್ರೆಸ್ ಮುಖಂಡರು ಸಂತಾಪ ಸೂಚಿಸಿದ್ದಾರೆ.ಮುಖಂಡರಾದ ಲಿಂಗಾರೆಡ್ಡಿ ಬಾಸರೆಡ್ಡಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವೀರಣ್ಣಗೌಡ ಪರಸರೆಡ್ಡಿ, ತಾಪಂ ಮಾಜಿ ಉಪಾಧ್ಯಕ್ಷ ಸಿದ್ರಾಮರೆಡ್ಡಿ ಗೌಡ ಕುರಾಳ, ಡಾ. ವಿರೇಶ ಎಣ್ಣಿ, ಶರಣಗೌಡ ಇಟಗಿ, ಮಲ್ಲಿಕಾರ್ಜುನ ಪಡಶೆಟ್ಟಿ, ಚಂದ್ರಶೇಖರ ಇಂಗಳಗಿ, ಸೋಮಣ್ಣಗೌಡ ತುಮಕುರ ಶೋಕ ವ್ಯಕ್ತಪಡಿಸಿದ್ದಾರೆ.
ದನಗಾಯಿ ಸಾವು
ಗುಲ್ಬರ್ಗ: ಮಹಾಗಾಂವ ಗ್ರಾಮದ ಬಳಿ ಟಂಟಂ ಡಿಕ್ಕಿ ಹೊಡೆದ ಪರಿಣಾಮ ದನಗಾಯಿಯೊಬ್ಬ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ. ಶಿವಲಾಲ ಹೊಸಮನಿ ಮೃತನು. ಶಿವಲಾಲ ಎಂಬಾತ ಗುರುಶಾಸ್ತ್ರೀ ಅವರ ದನಗಳನ್ನು ಮೆಯಿಸಿಕೊಂಡು ವಾಪಸ್ ಮಹಾಗಾಂವ ಗ್ರಾಮಕ್ಕೆ ಹೋಗುತ್ತಿದ್ದಾಗ ಟಂಟಂ ಡಿಕ್ಕಿ ಹೊಡೆದಿದೆ. ಚಾಲಕ ಟಂಟಂ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-----
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.