ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಭಾವಶುದ್ಧಿಯಿಂದ ದೈವದೊಲುಮೆ

Lingaraj Badiger
Updated On : 12 Dec 2013, 10:58 am

ಕ.ಪ್ರ.ವಾರ್ತೆ, ಚಿಂಚೋಳಿ, ಡಿ. 11
ಆತ್ಮ ಶುದ್ಧಿ ಮತ್ತು ಶುದ್ಧ ಭಾವಗಳನ್ನು ಉಳ್ಳವರು ಶಿವನನ್ನು ಕಾಣಬಹುದು. ಭಗವಂತನಿಗಿಂತ ಭಕ್ತರೇ ದೊಡ್ಡವರು. ಭಕ್ತನು ಭಕ್ತಿಯಿಂದ ದೇವರನ್ನು ಒಲಿಸಿಕೊಳ್ಳಬೇಕಾದರೆ ಭಾವನೆಗಳು ಬದಲಾಗಬೇಕೆಂದು ಸೊನ್ಯಾಲಗಿರಿ ಮಹಾತಪಸ್ವಿ ಪಂಚಾಕ್ಷರಿ ಪರ್ವತಲಿಂಗ ಪರಮೇಶ್ವರ ಮಹಾರಾಜರು ನುಡಿದರು.
ತಾಲೂಕಿನ ಪಂಗರಗಾ ಗ್ರಾಮದ ಸೊನ್ಯಾಲಗಿರಿಯಲ್ಲಿ ಬುಧವಾರ ನಡೆದ 9 ತಿಂಗಳ 9 ದಿವಸ ಘೋರ ಮೌನ ತಪಸ್ಸಿನ ಮುಕ್ತಾಯ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಭಕ್ತರಿಗಾಗಿ ನನ್ನ ಜೀವನವನ್ನೇ ತ್ಯಾಗ ಮಾಡಿದ್ದೇನೆ. ಮಾನವನು ತನ್ನ ಭಾವನೆಗಳನ್ನು ಶುದ್ಧಗೊಳಿಸಿಕೊಳ್ಳದಿದ್ದರೆ ಫಲ ಸಿಗುವುದಿಲ್ಲ. ಆತ್ಮ ಮತ್ತು ಶುದ್ಧ ಭಾವನೆಗಳಿದ್ದರೆ ಶಿವನನ್ನು ಕಾಣಬಹುದು ಎಂದರು.
ಭಕ್ತಿಯಿಂದ ಮುಕ್ತಿ ಹೊಂದಲು ಸಾಧ್ಯ: ಬಂಜಾರ ಸಮಾಜದಲ್ಲಿ ಸೇವಾಲಾಲ್, ಲೋಕಲಾಲ್ ಮಹಾರಾಜರು ಪವಾಡ ಪುರುಷರಾಗಿ ಬಾಳಿ ಸಮಾಜವನ್ನು ಉದ್ದರಿಸಿದವರು.
ಹಾಲಿನಲ್ಲಿ ತುಪ್ಪವಿದ್ದರೂ ನಮ್ಮ ಕಣ್ಣಿಗೆ ಕಾಣುವುದಿಲ್ಲ. ತುಪ್ಪಕ್ಕಾಗಿ ಶ್ರಮ ಪಟ್ಟಾಗ ಮಾತ್ರ ತುಪ್ಪ ಸಿಗುವ ಹಾಗೇ ಆತ್ಮವೇ ಪರಮಾತ್ಮನಾಗಿರುವಾಗ ಭಕ್ತಿಯಿಂದ ಮುಕ್ತಿ ಹೊಂದಲು ಸಾಧ್ಯವಿದೆ ಎಂದರು.
ಎಲ್ಲ ವರ್ಗದವರು ತಮ್ಮ ಗ್ರಾಮ ತಾಂಡಾಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ದುಶ್ಚಟಗಳಿಂದ ದೂರವಿರಬೇಕೆಂದು ನುಡಿದರು.
ಜೇಮಸಿಂಗ ಮಹಾರಾಜ, ಬಳೀರಾಮ ಮಹಾರಾಜ,  ಶಾಸಕರಾದ ಡಾ. ಉಮೇಶ ಜಾಧವ, ಬಿ.ಆರ್. ಪಾಟೀಲ್, ಅಲ್ಲಂಪ್ರಭು ಪಾಟೀಲ್, ಕೇಂದ್ರ ಮಾಜಿ ಸಚಿವರಾದ ಬಸವನಗೌಡ ಪಾಟೀಲ್ ಯತ್ನಾಳ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಮುಖಂಡರಾದ ಸುಭಾಷ ರಾಠೋಡ, ಡಾ. ತುಕರಾಮ ಪವಾರ, ಅರುಣಕುಮಾರ್ ಪವಾರ, ರಾಮಚಂದ್ರ ಜಾಧವ, ಭೀಮರಾವ ತೇಗಲತಿಪ್ಪಿ, ತಿಪ್ಪಣ್ಣಪ್ಪ ಕಮಕನೂರ, ಜಿಪಂ ಸದಸ್ಯರಾದ ಪಾರ್ವತಿ ಚವ್ಹಾಣ, ರೇಣುಕಾ ರಾಠೋಡ, ಸುನಂದಾ ಕೊರವಿ, ಮಾಜಿ ಶಾಸಕ ವಾಲ್ಮಿಕಿ ನಾಯಕ, ವಿಠ್ಠಲ್ ಜಾಧವ, ಶಾಮರಾವ ರಾಠೋಡ, ಈಶ್ವರ ನಾಯಕ, ರಾಮಶೆಟ್ಟಿ ಪವಾರ, ನಾಮದೇವ ಮಾಸ್ಟರ್, ಸುಭಾಷ ಪವಾರ, ಅಪ್ಪು ರಾಠೊಡ, ಡಾ. ಅಶೋಕ ರಾಠೋಡ, ಲಕ್ಷ್ಮಣ ನಾಯಕ, ಮೋತಿರಾಮ ಚವ್ಹಾಣ, ವಸಂತ ಜಾಧವ, ತುಳಸೀರಾಮ ಜಾಧವ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement