ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

120 ಲೀಟರ್ ಕಲಬೆರಕೆ ಸೇಂದಿ, ತಯಾರಿ ಸಾಮಗ್ರಿ ವಶ

Rashmi Kasaragodu
Updated On : 13 Dec 2013, 11:11 am

ಗುಲ್ಬರ್ಗ: ಖಚಿತ ಮಾಹಿತಿ ಮೇರೆಗೆ ಚಿಂಚೋಳಿ ತಾಲೂಕಿನ ಜೆಟ್ಟೂರಲ್ಲಿ ಅಬಕಾರಿ ದಾಳಿ ನಡೆಸಿ 120 ಲೀಟರ್ ಕಲಬೆರಕೆ ಸೇಂದಿ ಹಾಗೂ ಸೇಂದಿ ತಯಾರಿಸುವ ಇತರೆ ಸಾಮಗ್ರಿಗಳನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಎಫ್.ಎಚ್. ಚಲವಾದಿ ಆದೇಶದ ಮೇರೆಗೆ ಅಬಕಾರಿ ನಿರೀಕ್ಷಕರಾದ ಮೈನುದ್ದೀನ್, ಜಾಫರಮಿಯ್ಯ, ಲಕ್ಷ್ಮಣ ರಾಠೋಡ, ಶಬ್ಬೀರಮಿಯ್ಯಾ, ಸೈಯಿದುದ್ದೀನ್, ಬಸವರಾಜ ಮಾಲಗತ್ತಿ, ಪೀರಪ್ಪ ಇತರರು ನರಸಿಂಹಲು ತಂದೆ ಹಣಮಯ್ಯ ಎಂಬುವರ ಮನೆಗೆ ದಾಳಿ ನಡೆಸಿ ಅಕ್ರಮವಾಗಿ 120 ಲೀಟರ್ ಸೇಂದಿ, ಸಿಎಚ್ ಪೌಡರ್, ಸಿಟ್ರಿಕ್ ಎಸಿಡ್ ಹಾಗೂ ಇತರೆ ಸೇಂದಿ ತಯಾರಿಸುವ ಸಾಮಗ್ರಿಗಳು ಜಪ್ತಿ ಮಾಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಯಾಗಿ ವ್ಯಾಪಕ ಜಾಲ ಬೀಸಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.


ಇಬ್ಬರು ಜೂಜುಕೋರರ ಬಂಧನ
ಗುಲ್ಬರ್ಗ/ಶಹಾಬಾದ್: ಶಹಾಬಾದ್ ಠಾಣೆ ವ್ಯಾಪ್ತಿಯ ಹೊನಗುಂಟಾ ಗ್ರಾಮದ ಹನುಮಾನ ದೇವಸ್ಥಾನದ ಬಳಿ ಮಟ್ಕಾ ಬರೆದುಕೊಳ್ಳುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಆಧಾರದ ಮೇಲೆ ಪಿಐ ವಿಜಯಕುಮಾರ್ ಹೊಸ್ಮನಿ, ಪಿಸಿ ನಾಗೇಂದ್ರ, ಬಸವರಾಜ ಮಳ್ಳಿ, ಚಾಲಕ ಹಣಮಂತರಾಯ ಕರಹರಿಯವರು ದಾಳಿ ನಡೆಸಿ ಮಟ್ಕಾ ಬರೆದುಕೊಳ್ಳುತ್ತಿದ್ದ ಗ್ರಾಮದ ಸಂಗಣ್ಣ ಶಂಕರಪ್ಪ ದಿಬ್ಬಣ್ಣಿ, ಶಹಾಬಾದ್ನ ಅಂಬಾರಾಯ ಹಣಮಂತ ಎಂಬುವವರನ್ನು ವಶಕ್ಕೆ ತೆಗೆದುಕೊಂಡಿದ್ದು, ಅವರಿಂದ 2180 ವಶಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement