ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

16ರಂದು ತೊಗರಿ ಬೆಳೆಗಾರರ ಚಳವಳಿ

Rashmi Kasaragodu
Updated On : 13 Dec 2013, 11:12 am

ಸೇಡಂ: ರಾಜ್ಯದಲ್ಲೇ ಅತ್ಯಧಿಕ ತೊಗರಿ ಬೆಳೆಯುತ್ತಿರುವ ಜಿಲ್ಲೆಯ ಪ್ರತಿ ಕ್ವಿಂಟಲ್ ತೊಗರಿಗೆ 6,450 ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿ ಡಿ.16 ರಂದು ಜಿಲ್ಲಾದ್ಯಂತ ರಸ್ತ ತಡೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಬಸವರಾಜ ಇಂಗಿನ್ ಹೇಳಿದರು.
  ಪಟ್ಟಣದ ಎಪಿಎಂಸಿ ರೈತ ಭವನದಲ್ಲಿ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿ, ರಾಜ್ಯಾದ್ಯಂತ ಇರುವ ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ನೀಡಲಾಗಿದೆ. ಆದರೆ ಹಿಂದುಳಿದ ಭಾಗದ ತೊಗರಿ ಕಣಜಕ್ಕೆ ಸೂಕ್ತ ಬೆಲೆ ನೀಡದೇ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು.
ಎಚ್ಚೆತ್ತುಕೊಂಡು ಹೋರಾಟಕ್ಕೆ ಸಿದ್ಧರಾಗಿ: ರೈತರು ತಮ್ಮತನವನ್ನು ಹಣಕ್ಕಾಗಿ ಮಾರಾಟ ಮಾಡದೆ, ಸ್ವಾಭಿಮಾನಕ್ಕಾಗಿ ಎಚ್ಚೆತ್ತುಕೊಳ್ಳಬೇಕು. ತೊಗರಿ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸಲು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಹೋರಾಟಕ್ಕೆ ಸಿದ್ಧರಾಗಬೇಕು ಎಂದರು.
  ಮುಕ್ರಂಖಾನ್ ಮಾತನಾಡಿ, ಸರ್ಕಾರವು ತೊಗರಿಗೆ ಬೆಂಬಲ ಬೆಲೆ ನೀಡುವವರೆಗೆ ರಾಜಕೀಯ ಮರೆತು ಹೋರಾಟಕ್ಕೆ ಮುಂದಾಗಬೇಕು. ರೈತರ ಬೆಂಬಲವಿದ್ದಲ್ಲಿ ಮುಖಂಡರಿಗೂ ಹುರುಪು ಬರುತ್ತದೆ. ರೈತರು ಸಂಘಟಿತರಾಗಿ ತಮ್ಮ ಹಕ್ಕು ಪಡೆಯಲು ಮುಂದಾಗಬೇಕು. ಜಾತ್ಯತೀತವಾಗಿ ಬೆಂಬಲ ಬೆಲೆಗಾಗಿ ನಡೆಯುವ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.
ತೊಗರಿಗೂ ಸೂಕ್ತ ಬೆಂಬೆಲೆ ನಿಗದಿಪಡಿಸಿ: ಹಿರಿಯ ಮುಖಂಡ ಮಾರುತಿ ಮಾರಪಡೆ ಮಾತನಾಡಿದರು. ಪುರಸಭೆ ಸದಸ್ಯ ರಾಜಶೇಖರ ನೀಲಂಗಿ ಮಾತನಾಡಿ, ವಿವಿಧ ವಸ್ತುಗಳಿಗೆ ನಿಗದಿಪಡಿಸಿದ ಮೊತ್ತದಂತೆ ತೊಗರಿಗೂ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಿ ಮುದ್ರಿಸಬೇಕು. ಹೋಬಳಿ ಮಟ್ಟದಲ್ಲಿ ರೈತರು ಸಂಘಟಿತರಾಗಬೇಕು ಎಂದು ತಿಳಿಸಿದರು.
  ಕರಿಸಿದ್ದಪ್ಪ, ಗೋಪಿಕಿಶನ ಲಡ್ಡಾ, ನಾರಾಯಣರೆಡ್ಡಿ, ರಾಚಯ್ಯ, ಶಿವಕುಮಾರ ಬೋಳಶೆಟ್ಟಿ, ಶಿವಕುಮಾರ್ ನೂಲಾ ಸೇರಿದಂತೆ ಹಲವಾರು ರೈತ ಮುಖಂಡರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement