ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

2 ಅಕ್ರಮ ಪಿಸ್ತೂಲ್ ವಶ, ಇಬ್ಬರ ಸೆರೆ

Rashmi Kasaragodu
Updated On : 13 Dec 2013, 11:11 am

ಗುಲ್ಬರ್ಗ: ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಲ್ಲಿನ ರಾಮನಗರ ಬಡಾವಣೆಯ ಕೇಂದ್ರ ಅಬಕಾರಿ ಕಚೇರಿ ಹತ್ತಿರದ ಬಯಲಿನಲ್ಲಿ ಅಕ್ರಮ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಮನಗರದ ದತ್ತು ಸಕಾರಾಮ(42) ಹಾಗೂ ಸಂಜೀವನಗರದ ವಿನೋದ ವಳಕರ್ (21) ಎಂಬುವವರನ್ನು ಬಂಧಿಸಿ ಒಂದೂವರೆ ಲಕ್ಷ ಮೌಲ್ಯದ 2 ನಾಡ ಪಿಸ್ತೂಲು ಮತ್ತು ಬೈಕ್ ವಶಪಡಿಸಿಕೊಂಡಿದ್ದಾರೆ. ಗುಲ್ಬರ್ಗ ಗ್ರಾಮಾಂತರ ಉಪ ವಿಭಾಗದ ಎಎಸ್ಸಿ ಸಂತೋಷಬಾಬು ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಗ್ರಾಮೀಣ ವೃತ್ತದ ಸಿಪಿಐ ಡಿ.ಜಿ. ರಾಜಣ್ಣ, ಮಹಾಗಾಂವ ಠಾಣೆಯ ಪಿಎಸ್ಐ ಬಾಪುಗೌಡ, ಸಿಬ್ಬಂದಿ ಪ್ರಭುಲಿಂಗ, ಅಯೂಬ್, ಶಿವಕುಮಾರ್, ಹುಸೇನ್ ಬಾಷಾ, ರಾಜಕುಮಾರ್, ನರಸಿಂಹಾಚಾರಿ, ಗುರುಶಾಂತ, ಕಂಠೆಪ್ಪ, ಹಣಮಂತ, ಅನೀಲ್, ಆನಂದ, ಕುಪೇಂದ್ರ, ಮಿರ್ಜಾ ಅಮ್ಜದ್ ಬೇಗ, ಭವಾನಿಸಿಂಗ್ ಭಾಗವಹಿಸಿದ್ದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement