ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದು ಅಳ್ಳಳ್ಳಿ ಹಂಪಯ್ಯಸ್ವಾಮಿಪುಣ್ಯಾರಾಧನೆ

Rashmi Kasaragodu
Updated On : 13 Dec 2013, 11:11 am

ಚಿತ್ತಾಪುರ: ತಾಲೂಕಿನ ಅಳ್ಳಳ್ಳಿ ಮಹಾತ್ಮಪೀಠದ ಹಂಪಯ್ಯ ಮಹಾಸ್ವಾಮಿಗಳ ಪ್ರಥಮ ಪುಣ್ಯರಾಧನೆಯನ್ನು ಡಿ.13 ರಂದು ಬೆಳಗ್ಗೆ 9.30ಕ್ಕೆ ಮಹಾತ್ಮಪೀಠ ಗದ್ದಿಗಿಮಠದಲ್ಲಿ ಜರುಗಲಿದೆ ಎಂದು ಭಕ್ತ ರಾಜಣ್ಣ ಕರದಾಳ ತಿಳಿಸಿದ್ದಾರೆ. ರಾತ್ರಿ 9.30ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಹಂಪಯ್ಯ ಸ್ವಾಮಿಗಳು ಪವಾಡ ಪುರುಷ ಅಯ್ಯಪ್ಪ ಸ್ವಾಮಿಗಳ ವಂಶಸ್ಥರಾಗಿದ್ದರು. ಸಂಗೀತ ಕಲಾಪೋಷಕರಾಗಿ ಈ ಭಾಗದಲ್ಲಿ ಅನೇಕ ಸಂಗೀತ ಕಲಾವಿದರನ್ನು ನಟರನ್ನು ಬೆಳಸಿದ್ದಾರೆ. ಆಯುರ್ವೇದಿಕ ವೈದ್ಯರಾಗಿ ಈ ಭಾಗದ ಅನೇಕ ರೋಗಿಗಳಿಗೆ ಔಷಧಿ ನೀಡಿ ಗುಣಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement