ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಗ್ರಾಪಂ ನೌಕರರ ಆಕ್ರೋಶ

Rashmi Kasaragodu
Updated On : 13 Dec 2013, 11:10 am

ಕ.ಪ್ರ.ವಾರ್ತೆ     ಅಫಜಲ್ಪುರ     ಡಿ. 12
ರಾಜ್ಯಾದ್ಯಂತ ಪಂಚಾಯಿತಿಗಳಲ್ಲಿ ದುಡಿಯುತ್ತಿರುವ ಪಂಪ್ ಆಪರೇಟರ್ಗಳು, ಬಿಲ್ ಕಲೆಕ್ಟರ್ಗಳು, ವಾಟರ್ ಮನ್ಗಳು, ಜವಾನರು ಸೇರಿದಂತೆ ಕಸ ಗುಡಿಸುವವರ ಸಂಬಳವನ್ನು ಸುಮಾರು 6 ತಿಂಗಳಿಂದ ನೀಡದೆ ಸತಾಯಿಸುತ್ತಿದ್ದು, ಕೂಡಲೇ ಸಂಬಳ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘ ಹಾಗೂ ಸಿಐಟಿಯು ಸಂಯೋಜನೆಯೊಂದಿಗೆ ತಾಲೂಕು ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ಸಂಘದ ಅಧ್ಯಕ್ಷ ಮಹಾಂತೇಶ ಜಮಾದಾರ ಅವರು ತಾಪಂ ಕಾರ್ಯನಿರ್ವಾಹಣ ಅಧಿಕಾರಿ ಎಸ್.ಪಿ. ನಂದಗಿರಿ ಅವರಿಗೆ ಮನವಿ ನೀಡಿ ಬೇಡಿಕೆಗೆ ಆಗ್ರಹಿಸಿದರು.
6 ತಿಂಗಳಿಂದ ವೇತನ ನೀಡಿಲ್ಲ: ಪಂಚಾಯಿತಿಗಳಲ್ಲಿ ದುಡಿಯುತ್ತಿರುವ ಪಂಪ್ ಆಪರೇಟರ್ಗಳಿಗೆ 6,165.90, ಕಂಪ್ಯೂಟರ್ ಆಪರೇಟರ್ಗಳಿಗೆ 6,276. 40, ಜವಾನರಿಗೆ 5,944.90, ಕಸಗುಡಿಸುವವರಿಗೆ 4,841.20, ವಾಟರ್ ಮನ್ಗಳಿಗೆ 6,055.40 ವೇತನ ನೀಡಬೇಕಾಗಿತ್ತು. ಆದರೆ ಕಳೆದ 6 ತಿಂಗಳಿನಿಂದ ಸಂಬಳ ಕೊಡದೆ ದುಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಎಸ್ಸೆಸ್ಸೆಲ್ಸಿ ತೇರ್ಗಡೆ ಹೊಂದಿದ ಪಂಪ್ ಆಟರೇಟರ್ಗಳಿಗೆ ಬಿಲ್ ಕಲೆಕ್ಟರ್ ಹುದ್ದೆಗೆ 5 ವರ್ಷ ಸೇವೆ ಸಲ್ಲಿಸಿದವರಿಗೆ ಬಡ್ತಿ ನೀಡಬೇಕು. 2013ನೇ ವರ್ಷದ ತುಟ್ಟಿ ಭತ್ಯೆ ಸೇರಿಸಿ ವೇತನ ನೀಡಬೇಕು. ಸಿಬ್ಬಂದಿ ಸಂಬಳ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಸೇರಬೇಕು. ಸೇವಾ ಪುಸ್ತಕ ತೆರೆಯಬೇಕು. ಪಂಚಾಯಿತಿಯ ಯಾವುದೇ ಸಿಬ್ಬಂದಿಗಳನ್ನು ಮುಖ್ಯ ಕಾಯರ್ವನಿರ್ವಾಹಕ ಅಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಅಕ್ರಮ ನೇಮಕಾತಿ ತಡೆ ಹಿಡಿಯಬೇಕೆಂದು ಒತ್ತಾಯಿಸಿದರು.
ಅಣ್ಣಪ್ಪ ಮಲ್ಲಾಬಾದ್, ಶಿವಾನಂದ ಬಳೂರ್ಗಿ, ಮಹಾಂತಯ್ಯ ಸ್ವಾಮಿ ಬಾದನಳ್ಳಿ, ಬಸಲಿಂಗಪ್ಪ ಗೂಡೂರ, ಗುರು ಹಿರೇಮಠ, ಸಿದ್ದಮ್ಮ ವಗ್ಗೆ, ಬಸಮ್ಮ ಹೊಸ್ಮನಿ, ಪಾರ್ವತಿ ನಾಟಿಕಾರ, ಈರಮ್ಮ ಕಾಂಬಳೆ, ಅಶೋಕ ದೂಬೆ, ಶ್ರೀಕಾಂತ ಗೌರ, ನಿಂಗೊಂಡಪ್ಪ ಕರ್ಜಗಿ, ಶಿವಾಜಿ ತೆನ್ನಳ್ಳಿ, ನಾಗಮ್ಮ ಹೊಸ್ಮನಿ ಸೇರಿದಂತೆ ಎಲ್ಲಾ ಗ್ರಾಪಂನ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement