ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜಗಜೀವನಜೀ ತತ್ವಾದರ್ಶ ಅಳವಡಿಸಿಕೊಳ್ಳಲು ಸಲಹೆ

Rashmi Kasaragodu
Updated On : 13 Dec 2013, 11:12 am

ಸುರಪುರ: ತಾಲೂಕಿನ ಮಾದಿಗ ಸಮುದಾಯ ಬಾಂಧವರು ಅಭಿವೃದ್ಧಿಯಾಗಬೇಕಾದರೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಸಮುದಾಯ ಬಾಂಧವರು ಬಾಬು ಜಗಜೀವನರಾಂ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪುರಸಭೆ ಸದಸ್ಯ ಭೀಮಾಶಂಕರ ಬಿಲ್ಲವ್ ಕರೆ ನೀಡಿದರು.
 ಇಲ್ಲಿಯ ಪಾಳದಕೇರಾದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಹೋಬಳಿ ಶಾಖೆ ಗುರುವಾರ ಏರ್ಪಡಿಸಿದ್ದ ಬಾಬು ಜಗಜೀವನರಾಂ ವೃತ್ತ ಉದ್ಘಾಟನೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲೂಕು ಘಟಕದ ಅಧ್ಯಕ್ಷ ನಾಗರಾಜ ಬಿಲ್ಲವ್, ಉಪಾಧ್ಯಕ್ಷ ದಾನಪ್ಪ ಕಡಿಮನಿ, ಭೀಮಣ್ಣ ಲಕ್ಷ್ಮೀಪುರ, ಹೋಬಳಿ ಮಟ್ಟದ ಅಧ್ಯಕ್ಷ ನಾಗರಾಜ ಓಕಳಿ, ಉಪಾಧ್ಯಕ್ಷ ರಮೇಶ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಚಂದಪ್ಪ ಓಕಳಿ, ರಮೇಶ ಓಕಳಿ, ಬಾಲಪ್ಪ ಬಜ್ಲರ್, ತಿಪ್ಪಣ, ವಿಜಯಕುಮಾರ, ರಮೇಶ ಕಟ್ಟಿಮನಿ, ನಿಂಗಪ್ಪ ಹೊಸ್ಮನಿ ಇನ್ನಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement