ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪ್ರೊ. ದಶರಥ ಬಂಧನಕ್ಕೆ ಆಗ್ರಹ

Rashmi Kasaragodu
Updated On : 13 Dec 2013, 11:13 am

ಗುಲ್ಬರ್ಗ: ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಗುಲ್ಬರ್ಗ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರೊಫೆಸರ್ ದಶರಥ ನಾಯಕ ಅವರನ್ನು ಕೂಡಲೇ ಬಂಧಿಸದಿದ್ದರೆ ಶುಕ್ರವಾರ ವಿಶ್ವವಿದ್ಯಾಲಯವನ್ನು ಬಂದ್ ಮಾಡಬೇಕಾಗುತ್ತದೆ ಎಂದು ವೀರಶೈವ ಯುವ ಬಳಗ ಎಚ್ಚರಿಕೆ ನೀಡಿದೆ.
  ಬಂಧನ ಭೀತಿಯಲ್ಲಿರುವ ಡಾ. ದಶರಥ ನಾಯಕ ಈಗ ನಾಪತ್ತೆಯಾಗಿದ್ದಾರೆ. ಲೈಂಗಿಕ ಪ್ರಕರಣ ದಾಖಲಾಗಿ ಎರಡು ವಾರ ಕಳೆದರೂ ಇದುವರೆಗೆ ಆರೋಪಿಯನ್ನು ಬಂಧಿಸಲಾಗಿಲ್ಲ. ವಿವಿಯ ಉನ್ನತ ಹುದ್ದೆಯಲ್ಲಿ ಇರುವವರು ಇವರನ್ನು ರಕ್ಷಿಸುತ್ತಿದ್ದಾರೆ ಎಂದು ಯುವಬಳಗದ ಮಲ್ಲಿಕಾರ್ಜುನ ಗರೂರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಪ್ರಕರಣ ಮುಚ್ಚಿಹಾಕಲು ಯತ್ನ: ಪ್ರಕರಣ ವಾಪಸ್ಸು ಪಡೆದುಕೊಳ್ಳುವಂತೆ ಕೆಲವು ರಾಜಕೀಯ ಮುಖಂಡರಿಂದ ಬೆದರಿಕೆ ಕರೆಗಳನ್ನು ಮಾಡಿಸಲಾಗುತ್ತಿದೆ. ಕುಲಪತಿ ಮತ್ತು ಸ್ವಜಾತಿಯ ಇತರೆ ಪ್ರಾಧ್ಯಾಪಕರು, ಸಿಂಡಿಕೇಟ್ ಸದಸ್ಯರು ಕೂಡಿ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ದೂರಿದರು. ಕೂಡಲೇ ಈ ಪ್ರಕರಣ ಸೂಕ್ತ ತನಿಖೆ ನಡೆಸಿ ರಾಜ್ಯಪಾಲರು ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ವಿವಿಯಲ್ಲಿ ಹಲವು ವಿದ್ಯಾರ್ಥಿನಿಯರು ದೂರು ನೀಡಿದರೂ ಯಾವುದೇ ವಿಚಾರಣೆ ಮಾಡದೆ ಉನ್ನತ ಹುದ್ದೆಯಲ್ಲಿರುವವರು ಉಡಾಫೆ ಮಾಡುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವ ವಿವಿ ಕುಲಪತಿ ಪುಟ್ಟಯ್ಯ ಅವರನ್ನು ಕೂಡಲೇ ವಜಾಗೊಳಿಸಬೇಕೆಂದು ಆಗ್ರಹಿಸಿದರು.
  ಸಂಗಮೇಶ ನಾಗನಳ್ಳಿ, ರವಿ ಬಿರಾದಾರ, ಅಮರನಾಥ ತಡಕಲ್, ಚಂದ್ರಕಾಂತ ಕಾಳಗಿ, ಎಂ. ಎಸ್. ಪಾಟೀಲ್, ಸಿದ್ದು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement