ಬಾಲಕಿಯ ಪಾಲಕರ ಪತ್ತೆಗೆ ಮನವಿ
ಗುಲ್ಬರ್ಗ: ನಗರದ ಬುದ್ಧಿಮಾಂದ್ಯ ಬಾಲಕಿಯರ ಬಾಲಮಂದಿರದಲ್ಲಿ ಸುಮಾರು 17 ವರ್ಷದ ಬಾಲಕಿ ಮಂಜುಳಾಳನ್ನು ನ.11 ರಂದು ಚೈಲ್ಡ್ ಲೈನ್ ಮುಖಾಂತರ ದಾಖಲಾಗಿಸಲಾಗಿದೆ. ಈ ಬಾಲಕಿಯು ಕನ್ನಡ, ಹಿಂದಿ ಮಾತನಾಡುವಳಾಗಿದ್ದು, ಕಪ್ಪು ಮೈ ಬಣ್ಣ ಹೊಂದಿದ್ದಾಳೆ. ಬುದ್ಧಿಮಾಂದ್ಯಳಾಗಿರುತ್ತಾಳೆ. ಈ ಬಾಲಕಿಗೆ ಸಂಬಂಧಪಟ್ಟವರು ಪಾಲಕರಾಗಲಿ, ಪೋಷಕರಾಗಲಿ ಇಲ್ಲಿಯವರೆಗೆ ಭೇಟಿಯಾಗಿರುವುದಿಲ್ಲ. 60 ದಿನದೊಳಗೆ ಅಗತ್ಯ ದಾಖಲೆ ಜತೆ ಅಧೀಕ್ಷಕರು, ಸರ್ಕಾರಿ ಬುದ್ಧಿಮಾಂದ್ಯ ಬಾಲಕಿಯರ ಬಾಲ ಮಂದಿರ, ರಾಜ್ಯ ಮಹಿಳಾ ನಿಲಯ, ಆಳಂದ ರಸ್ತೆ ಗುಲ್ಬರ್ಗ. ದೂ. 08472-230053, 98801 53371ಗೆ ಸಂಪರ್ಕಿಸಿ.
ನಾಳೆ ನಾಮಕರಣ
ಗುಲ್ಬರ್ಗ: ಪ್ರತಿಷ್ಠಿತ ಹೈ.ಕ. ಶಿಕ್ಷಣ ಸಂಸ್ಥೆಯ ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ಡಾ. ಮಲಕರೆಡ್ಡಿ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಎಂಬ ನಾಮಕರಣ ಸಮಾರಂಭ ಡಿ.14 ರಂದು ಸಂಜೆ 5ಕ್ಕೆ ಪಿಡಿಎ ಕಾಲೇಜಿನ ಆವರಣದ ಸ್ಯಾಕ್ ಸಭಾಂಗಣದಲ್ಲಿ ನಡೆಯಲಿದೆ. ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ನಾಮಕರಣ ಮಾಡಲಿದ್ದಾರೆ. ಸಂಸದ, ಡಾ. ಧರ್ಮಸಿಂಗ್, ಸಚಿವ ಖಮರುಲ್, ಶಾಸಕ ಡಾ. ಮಲಕರೆಡ್ಡಿ ಆಗಮಿಸಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ನಮೋಶಿ ಅಧ್ಯಕ್ಷತೆ ವಹಿಸಲಿದ್ದಾರೆ.
ಏಡ್ಸ್ ವಿರುದ್ಧ ಜಾಗೃತಿ
ಗುಲ್ಬರ್ಗ: ಏಡ್ಸ್ ನಿಯಂತ್ರಿಸುವಲ್ಲಿ ಸಮಾಜ ಕಾರ್ಯಕರ್ತರ ಪಾತ್ರ ತುಂಬಾ ಅವಶ್ಯಕತೆ ಇದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಸಂಯೋಜಕ ಸೋಮಶೇಖರ ಮಾಲಿಪಾಟೀಲ್ ಅಭಿಪ್ರಾಯಪಟ್ಟರು. ನಗರದ ಶ್ರೀಸಾಯಿ ಪ್ರಸಾದ ಎಂಎಸ್ಡಬ್ಲೂ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಸುನೀಲಕುಮಾರ್ ಒಂಟಿ, ಲಕ್ಷ್ಮೀಕಾಂತ ಪಾಟೀಲ್ ರೇವೂರ, ಶಿವಾನಂದ ಹಾಲಶೆಟ್ಟಿ, ಸುಜಾತಾ ಹಿರೇಮಠ, ಜ್ಯೋತಿ ಕಟ್ಟಿಮನಿ, ಕುಮಾರ ದೇವಿಂದ್ರಪ್ಪ, ಗೋವರ್ಧನ, ಮೀನಾಕ್ಷಿ, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.