ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬ್ಯಾರೇಜ್ ಸರಿಪಡಿಸಿ

Rashmi Kasaragodu
Updated On : 13 Dec 2013, 11:10 am

ಅಫಜಲ್ಪುರ: ತಾಲೂಕಿನಲ್ಲಿ ಬರುವ ನದಿ ಮತ್ತು ದೊಡ್ಡ ಪ್ರಮಾಣದ ಹಳ್ಳಗಳಿಗೆ ರೈತರ ಅನುಕೂಲಕ್ಕಾಗಿ ಬ್ರಿಜ್ ಕಂ ಬ್ಯಾರೇಜ್ಗಳನ್ನು ನಿರ್ಮಿಸಿದ್ದು, ಈ ಪೈಕಿ ಎಲ್ಲ ಬ್ಯಾರೇಜ್ಗಳಲ್ಲಿ ನೀರು ನಿಂತಿರುವುದು ಸಂತಸದ ವಿಚಾರವಾದರೆ, ಕೆಲವು ಕಡೆ ಬ್ಯಾರೇಜ್ನ ಗೇಟ್ಗಳು ಸರಿಯಾಗಿ ಅಳವಡಿಸಿಲ್ಲವಾದ್ದರಿಂದ ನೀರು ಪೋಲಾಗುತ್ತಲಿದೆ. ಈ ಕುರಿತು ಅಧಿಕಾರಿಗಳು ಗಮನ ಹರಿಸಿ ಕೂಡಲೇ ನೀರು ಪೋಲಾಗದಂತೆ ತಡೆಯಬೇಕೆಂದು ತಾಪಂ ಇಒ ಎಸ್.ಪಿ. ನಂದಗಿರಿ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸಾ.ಸಿ. ಬೆನಕನಳ್ಳಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ಶಾರದಾಬಾಯಿ ಗಂಡೋಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತ, ಬ್ಯಾರೇಜ್ಗಳಿಗೆ ಶೀಘ್ರವೇ ಸೂಕ್ತ ವ್ಯವಸ್ಥೆ ಕಲ್ಪಿಸಿ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕೆಂದು ಹೇಳಿದರು.
ಗೇಟ್ಗಳಲ್ಲಿ ತೊಂದರೆ: ಈ ಮಾತಿಗೆ ಸ್ಪಂದಿಸಿದ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಎಂಡಿಗೇರಿ ಅವರು ಈಗಾಗಲೇ ನೀರು ಎಲ್ಲೆಲ್ಲಿ ಪೋಲಾಗುತ್ತಿದೆ ಎಂಬುವುದರ ಕುರಿತು ಮಾಹಿತಿ ಪಡೆಯಲಾಗಿದ್ದು, ಕೂಡಲೇ ದುರಸ್ತಿ ಮಾಡಿಸುವುದಾಗಿ ಮತ್ತು ಘತ್ತರಗಿ, ದೇವಲ ಗಾಣಗಾಪುರ ಬ್ಯಾರೇಜ್ನ ಗೇಟ್ಗಳಲ್ಲಿ ತೊಂದರೆ ಕಾಣಿಸಿದ್ದರ ಪರಿಣಾಮ ನೀರು ಪೋಲಾಗುತ್ತಿದೆ. ಇದನ್ನು ಕೂಡಲೇ ಸರಿಪಡಿಸಲಾಗುವುದು ಎಂದು ಸಭೆಗೆ ತಿಳಿಸಿದರು. ತಾಪಂ ಅಧಿಕಾರಿ ಎಸ್.ಪಿ. ನಂದಗಿರಿ ಅಡುಗೆ ಕೋಣೆಗಳ ಕಾಮಗಾರಿ ಮತ್ತು ಖರ್ಚು ವೆಚ್ಚದ ಬಗ್ಗೆ ಮಾಹಿತಿ ನೀಡಬೇಕೆಂದರು.
ಕಾಂಬಳೆರನ್ನು ತರಾಟೆಗೆ: ತಾಲೂಕಾದ್ಯಂತ ಶೇ.50ಕ್ಕೂ ಹೆಚ್ಚು ಶಾಲೆಗಳಲ್ಲಿ ಒಂದಿಲ್ಲದೊಂದು ಕಾರಣಗಳಿಂದಾಗಿ ಬಿಸಿಯೂಟದಲ್ಲಿ ತೊಂದರೆ ಕಂಡುಬಂದು ಸ್ಥಗಿತವಾಗಿರುವುದು ನಮ್ಮ ಗಮನಕ್ಕೆ ಬಂದಿದ್ದು, ಬಿಸಿಯೂಟದ ಅಧಿಕಾರಿಗಳು ಈ ಕುರಿತು ಪರಿಶೀಲಿಸಿ ಸಮಸ್ಯೆ ಮರುಕಳಿಸದಂತೆ ಜಾಗೃತ ವಹಿಸಬೇಕೆಂದು ಸಾ.ಸಿ. ಬೆನಕನಳ್ಳಿ ಬಿಸಿಯೂಟ ಅಧಿಕಾರಿ ಅಂಬರೀಷ್ ಕಾಂಬಳೆ ಅವರನ್ನು ತರಾಟೆಗೆ ತೆಗೆದುಕೊಂಡರು.
  ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಗಂಗುಬಾಯಿ ಜಮಾದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮಡಿ, ಜಿಪಂ ಎಇಇ ಎಸ್. ನಾಗನಳ್ಳಿ, ಶ್ರೀಮಂತ ಕೋಟ್ರೆ, ಸರಳಾ ದೊಡ್ಮನಿ, ಎಂ.ಎಂ. ಮರಗುತ್ತಿ ಜೈ ಕರವೇ ತಾಲೂಕು ಅಧ್ಯಕ್ಷ ಸುರೇಶ ಅವಟೆ, ಶಾರದಾಬಾಯಿ ಗಂಡೋಳಿ, ಗಂಗುಬಾಯಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement