ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವೇತನ ವಿತರಣೆಗೆ ಒತ್ತಾಯ

Rashmi Kasaragodu
Updated On : 13 Dec 2013, 11:10 am

ಚಿಂಚೋಳಿ: ತಾಲೂಕಿನ ಗ್ರಾಮ ಪಂಚಾಯ್ತಿ ನೌಕರರು ತಮ್ಮ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಗುರುವಾರ ತಾಲೂಕ ಪಂಚಾಯ್ತಿ ಕಾರ್ಯಾಲಯ ಮುಂದೆ ಭಾರಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ತಾಲೂಕ ಸಿಪಿಐಎಂ ಮುಖಂಡರು ಕರ್ನಾಟಕ ಪ್ರಾಂತ ರೈತಸಂಘದ ತಾಲೂಕ ಅಧ್ಯಕ್ಷ ಶರಣಬಸ್ಸಪ್ಪಾ ಮಮಶೆಟ್ಟಿ ಮಾತನಾಡಿ, ತಾಲೂಕಿನ 32 ಗ್ರಾಮ ಪಂಚಾಯ್ತಿಗಳಿಗೆ ದಿನಗೂಲಿ ಅಧಾರದ ಮೇಲೆ ಹಲವು ವರ್ಷಗಳಿಂದ ಕಡಿಮೆ ವೇತನದಲ್ಲಿ ದುಡಿಯುತ್ತಿದ್ದಾರೆ. ಆದರೆ ದಿನಗೂಲಿ ನೌಕರರಿಗೆ ತಿಂಗಳ ವೇತನ ಸರಿಯಾಗಿ ನೀಡುತ್ತಿಲ್ಲ.
ನೀಡದ ವೇತನ: ರಾಜ್ಯ ಸರ್ಕಾರದಿಂದ ಅನುದಾನ ನೀಡಿದರು, ಪಿಡಿಒ, ಗ್ರಾಪಂ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ರಾಜಕೀಯ ಜನಪ್ರತಿನಿಧಿಗಳೊಂದಿಗೆ ಶಾಮೀಲಾಗಿ ಕಸಗೂಡಿಸುವ, ಕರ ವಸೂಲಿ, ಪಂಪ್ ಆಪರೇಟರ್ ಇನ್ನಿತರ ಕಾರ್ಮಿಕರಿಗೆ ವೇತನ ಸರಿಯಾಗಿ ನೀಡುತ್ತಿಲ್ಲ. ಕೆಲವು ಗ್ರಾಪಂ.ಗಳಲ್ಲಿ 15ರಿಂದ 20 ತಿಂಗಳ ವೇತನ ನೀಡಿಲ್ಲ. ಹೀಗಾದರೆ ದಿನಗೂಲಿಯಲ್ಲಿ ಕೆಲಸ ಮಾಡುವವರು ಹೇಗೆ ಜೀವನ ಸಾಗಿಸಬೇಕೆಂದು ಆಕ್ರೋಶವ್ಯಕ್ತಪಡಿಸಿದರು.
2013 ವರ್ಷದ ತುಟ್ಟಿ ಭತ್ಯೆ, ಸಿಬ್ಬಂದಿ ಸಂಬಳ, ಸೇವಾ ಪುಸ್ತಕ, ಖಾಲಿ ಇರುವ ಬಿಲ್ಕಲೆಕ್ಟರ್ ಬಡ್ತಿ ಇನ್ನಿತರ 12 ಬೇಡಿಕೆಗಳ ಮನವಿ ಪತ್ರವನ್ನು ತಾಲೂಕ ಅಧ್ಯಕ್ಷ ಭಾಗಪ್ಪಾ ಸಾಗರ ತಾಪಂ ಇಒಗೆ ಮನವಿ ಪತ್ರ ಸಲ್ಲಿಸಿದರು. ದುರ್ಗಪ್ಪಾ ಚೆಂಗಟಾ, ಚೆನ್ನಮಲ್ಲಯ್ಯ ಹಸರಗುಂಡಗಿ, ರೇವಣಸಿದ್ದಪ್ಪಾ ಕೋಡ್ಲಿ, ಮೋಹನ ವೆಂಕಟಾಪುರ, ಮಡಿವಾಳಯ್ಯ ಸ್ವಾಮಿ ಕನಕಪುರ, ರಾಜೂ ಐನಾಪುರ, ಪ್ರದೀಪ ತಿರಲಾಪೂರ ಇನ್ನಿತರರು ನೇತೃತ್ವ ವಹಿಸಿದ್ದರು. ಪಟ್ಟಣದ ಹಳೆ ಪ್ರವಾಸಿ ಮಂದಿರದಿಂದ ಚಂದಾಪುರ ತಾಪಂ ಕಾರ್ಯಲಯವರೆಗೆ ಪಾದಯಾತ್ರೆ ನಡೆಸಲಾಯಿತು. 150ಕ್ಕೂ ಹೆಚ್ಚು ಗ್ರಾಪಂ ನೌಕರರು ಭಾಗವಹಿಸಿದರು. ಚಿಂಚೋಳಿ ಪೊಲೀಸರು ಸೂಕ್ತ ಪೊಲೀಸ್ ವ್ಯವಸ್ಥೆಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement