1.40 ಲಕ್ಷ ಕಳ್ಳತನ
ಆಳಂದ: ಮನೆ ಬೀಗ ಮುರಿದು ಚಿನ್ನ, ಬೆಳ್ಳಿ ಸೇರಿ ಸುಮಾರು 1.40 ಲಕ್ಷ ಮೌಲ್ಯದ ಸಾಮಗ್ರಿ ಕಳ್ಳತನವಾದ ಘಟನೆ ತಾಲೂಕಿನ ನರೋಣಾ ಠಾಣೆ ವ್ಯಾಪ್ತಿಯ ಬೋಳಣಿ(ಬಾಳಿ) ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.
ಭೀಮಾಶಂಕರ ಮೂಲಗೆ ಎಂಬುವರ ಮನೆಯ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಭೀಮಾಶಂಕರ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಗ್ರಾಮದಲ್ಲಿರುವ ಅವರ ಪತ್ನಿ ಮಾಣಿಕಮ್ಮ ತನ್ನ ತವರಿಗೆ ಹೋಗಿರುವುದನ್ನು ಕೊಂಚು ಹಾಕಿದ ಕಳ್ಳರು ಮನೆ ಬೀಗಿ ಮುರಿದು ಮೂರು ತೊಲೆ ಚಿನ್ನ, ನಾಲ್ಕುವರೆ ತೊಲೆ ಬೆಳ್ಳಿ, 10 ಸಾವಿರ ನಗದು, ರೇಷ್ಮೆ ಸೀರೆ ಸೇರಿದಂತೆ ಒಟ್ಟು 1.40 ಲಕ್ಷ ಮೌಲ್ಯದ ಸಾಮಗ್ರಿ ಕಳ್ಳತನ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ನರೋಣಾ ಠಾಣೆಗೆ ಮಾಣಿಕಮ್ಮ ಭೀಮಾಶಂಕರ ಮೂಲಗೆ ಅವರು ದೂರು ಸಲ್ಲಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಎಸ್.ಎಲ್. ಝಂಡೇಕರ್, ಸಿಪಿಐ ಕೆ.ಎಚ್.ಹಟ್ಟಿ, ಪಿಎಸ್ಐ ಎಂ.ಎಸ್. ದೊರೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ಬೆರಳಚ್ಚು ತಜ್ಞರು, ಶ್ವಾನದಳ ತಂಡ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ. ಆಗಾಗ ಕಳ್ಳತನ ಪ್ರಕರಣಗಳು ಸಂಭವಿಸುತ್ತಲೇ ಇರುವುದು ನಾಗರಿಕ ವಲಯದಲ್ಲಿ ತಲ್ಲಣಗೊಳಿಸಿದೆ.