2 ಲಕ್ಷ ಮೌಲ್ಯದ ಗಾಂಜಾ ಬೆಳೆ ವಶ
ಶಹಾಪುರ: ತಾಲೂಕಿನ ಮಹಲ್ ರೋಜಾ ಗ್ರಾಮದ ಮಹಾದೇವಪ್ಪ ಮಂಜುನಾಥ ಎಂಬವರ ಜಮೀನಿನಲ್ಲಿ ಹತ್ತಿ ಬೆಳೆ ಮಧ್ಯದಲ್ಲಿ ಸುಮಾರು 5 ಲಕ್ಷ ಮೌಲ್ಯದ 26 ಕೆ.ಜಿ. ಗಾಂಜಾ ಗಿಡಗಳನ್ನು ಅಬಕಾರಿ ನಿರೀಕ್ಷಕ ಪ್ರಭುಗೌಡ ಪಾಟೀಲ್ ಮತ್ತು ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ತಾಲೂಕಿನಲ್ಲಿ ತಿಂಗಳಿಗೊಂದು ಗಾಂಜಾ ಬೆಳೆ ಪ್ರಕರಣಗಳು ದಾಖಲಾಗುತ್ತಿದ್ದು ಎಲ್ಲೆಡೆ ಗಾಂಜಾ ಬೆಳೆ ಅವ್ಯಾಹತವಾಗಿ ಬೆಳೆಯುತ್ತಿರುವುದು ಪ್ರಕರಣಗಳಿಂದ ತಿಳಿದುಬರುತ್ತಿದೆ.