ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಕ್ರಮ ಮರಳು ಸಾಗಣೆ; ಲಾರಿ ವಶ

Rashmi Kasaragodu
Updated On : 14 Dec 2013, 10:38 am

ಗುಲ್ಬರ್ಗ: ತಾಲೂಕಿನ ಫಿರೋಜಾಬಾದ್ ದರ್ಗಾ ಹಾಗೂ ಫರತಾಬಾದ್ ಬಳಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಸುಮಾರು 21 ಲಾರಿ ಹಾಗೂ ಟಿಪ್ಪರ್ಗಳನ್ನು ಜಪ್ತಿ ಮಾಡಲಾಗಿದೆ.
ರಾತ್ರಿ ವೇಳೆ ಮರಳು ಸಾಗಣೆ ನಿಷೇಧದ ಮಧ್ಯೆಯೂ ಕೆಲವು ಲಾರಿ ಮಾಲೀಕರು ಮರಳು ಸಾಗಣೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ತಹಸೀಲ್ದಾರ್ ಪ್ರಕಾಶ ಚಿಂಚೋಳಿ ನೇತೃತ್ವ ತಂಡ ಗುರುವಾರ ರಾತ್ರಿ ದಾಳಿ ನಡೆಸಿ ನದಿಯಿಂದ ಅಕ್ರಮವಾಗಿ ಸಾಗುತ್ತಿದ್ದ ಮರಳು ಲಾರಿಗಳನ್ನು ಜಪ್ತಿ ಮಾಡಿದ್ದಾರೆ. ಪಿಎಸ್ಐ ವಿಜಯಕುಮಾರ್ ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು. ಫರತಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೀಗ ಮುರಿದು ಕಳ್ಳತನ
ಗುಲ್ಬರ್ಗ: ವಿದೇಶಕ್ಕೆ ತೆರಳಿದ್ದ ನ್ಯಾಯವಾದಿಯೊಬ್ಬರ ಮನೆಯ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ. ನಗರದ ಹೊರವಲಯದ ಹಾಗರಗಾ ರಸ್ತೆಯ ನ್ಯೂ ರೆಹಮತ್ ಕಾಲೋನಿಯ ನ್ಯಾಯವಾದಿ ಶಮಸ್ತಿ ಎನ್ನುವರ ಮನೆ ಕಳ್ಳತನವಾಗಿದೆ. ಮನೆಯಲ್ಲಿದ್ದ 1 ತೊಲೆ ಚಿನ್ನ ಹಾಗೂ ನಗದು ಸೇರಿದಂತೆ ಲಕ್ಷಾಂತರ ರು. ಕಳ್ಳತನ ನಡೆದಿದೆ. ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement