ಇಂದು ವಿಶ್ವಶಾಂತಿಗಾಗಿ 6ನೇ ಜ್ಞಾನ ದಾಸೋಹ
ಗುರುಮಠಕಲ್: ಜಿಲ್ಲೆಯ ಸೈದಾಪುರ ವಲಯದ ಮುನಗಾಲ ಗ್ರಾಮದ ಸುಕ್ಷೇತ್ರದ ಸಿದ್ಧಾರೂಢ ಜ್ಞಾನಯೋಗಾಶ್ರವುದಲ್ಲಿ ಡಿ.14ರಿಂದ 16ರವರೆಗೆ ವಿಶ್ವಶಾಂತಿಗಾಗಿ 6ನೇ ಜ್ಞಾನ ದಾಸೋಹ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶನಿವಾರ ಸಂಜೆ 6ಕ್ಕೆ ಮುನಗಾಲ ಗ್ರಾಮದ ಹನುಮಾನ ಮಂದಿರದಿಂದ ಕುಂಭ ಮೇಳದೊಂದಿಗೆ ಮೆರವಣಿಗೆ ಮೂಲಕ ಸಿದ್ದರೂಢ ಜ್ಞಾನಾಯೋಗಶ್ರವುಕ್ಕೆ ತೆರಳುವರು. ನಂತರ ಪ್ರವಚನ ನಡೆಯುವುದು. ಸಾನ್ನಿಧ್ಯವನ್ನು ಅನೆಗುಂದಿ ಸಂಸ್ಥಾನ ಎಕದಂಡಗಿ ಮಠದ ಗುರುನಾಥೇಂದ್ರ ಸರಸ್ವತಿ ಸ್ವಾಮೀಜಿ, ಮಿಟ್ಟಿಮಲ್ಕಾಪುರ ನಿಜಾನಂದ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ಶಿವಲಿಂಗೇಶ್ವರ ಸ್ವಾಮಿ ವಹಿಸುವರು. ನೇತೃತ್ವ ಅದ್ವೆತಾನಂದ ಸ್ವಾಮೀಜಿ, ಬಸವಂತಚಾರ್ಯ, ಪ್ರಭಾನಂ ಸ್ವಾಮಿ ವಹಿಸುವರು.