ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮಾ.10ರವರೆಗೆ ನೀರು ಹರಿಸದಿದ್ದರೆ ಕೋರ್ಟ್ಗೆ

Rashmi Kasaragodu
Updated On : 14 Dec 2013, 10:38 am

ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆಗೆ ನೀರು ಹರಿಸಲಾಗುವ ಕೊನೆ ದಿನದ ಬಗ್ಗೆ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಗೊಂದಲ ಮೂಡಿಸುತ್ತಿದ್ದಾರೆಂದು ಇಲ್ಲಿನ ಬತ್ತ ಬೆಳೆಗಾರರ ಸಂಘದ ಅಧ್ಯಕ್ಷ ಬಸಣ್ಣ ದೇಸಾಯಿ, ರೈತ ಮುಖಂಡ ಬಸವರಾಜ ಸ್ವಾಮಿ ಸ್ಥಾವರಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.  
 ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ನ.18ರಂದು ಆಲಮಟ್ಟಿಯಲ್ಲಿ ನಡೆಸಲಾದ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಮಾ. 10ರವರೆಗೆ ಕಾಲುವೆಗೆ ನೀರು ಹರಿಸಲಾಗುವುದೆಂದು ನಿರ್ಣಯಿಸಲಾಗಿದೆ. ಇವರ ಮಾತನ್ನು ನಂಬಿದ ರೈತರು ಮುಂದಿನ ಹಂಗಾಮಿನ ಬೆಳೆಗಳ ಸಿದ್ಧತೆಗಾಗಿ ಈಗಾಗಲೇ ಲಕ್ಷಾಂತರ ರು. ಖರ್ಚು ಮಾಡಿದ್ದಾರೆಂದು ನಿಗಮದ ವಿರುದ್ಧ ಕಿಡಿ ಕಾರಿದರು.
ಆತಂಕ: ಇದೀಗ ಕೆಲವೆಡೆ ಅಧಿಕಾರಿಗಳು ಫೆಬ್ರವರಿ ಕೊನೆ ವಾರದವರೆಗೆ ಮಾತ್ರ ನೀರು ಹರಿಸಲು ಸಾಧ್ಯವೆಂದು ಹೇಳುತ್ತಿರುವುದರಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ. ಅವರ ತಲೆ ಮೇಲೆ ಬಂಡೆಗಲ್ಲನ್ನು ಹಾಕಿದಂತಾಗಿದೆ ಎಂದು ಆತಂಕ ವ್ಯಕ್ತಗೊಳಿಸಿದರು.
  ಮಾ.10ರವರೆಗೆ ಕಾಲುವೆಗೆ ನೀರು ಹರಿಸದಿದ್ದರೆ, ಈ ಭಾಗದ ರೈತರಿಗೆ ಭಾರಿ ಪ್ರಮಾಣದ ನಷ್ಟವಾಗಿ ಆತ್ಮಹತ್ಯೆಗೆ ಶರಣಾಗುವ ಭೀಕರ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದಕ್ಕೆ ನಿಗಮದ ಅಧಿಕಾರಿಗಳು ಮತ್ತು ಸಲಹಾ ಸಮಿತಿಯವರೇ ಹೊಣೆಗಾರರು ಎಂದರು. ಈ ಮೊದಲೇ ಪ್ರಕಟಿಸಿದಂತೆ ಮಾ. 10ರವರೆಗೆ ಕಾಲುವೆಗೆ ನೀರು ಹರಿಸದಿದ್ದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಮತ್ತು ನೀರಾವರಿ ಸಲಹಾ ಸಮಿತಿಯವರ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ  ಬಸಣ್ಣ ದೇಸಾಯಿ ಹಾಗೂ ಬಸವರಾಜ್ ಸ್ಥಾವರಮಠ ಘೋಷಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement