ರಸ್ತೆ ಸುಧಾರಣೆಗಾಗಿ ಪ್ರತಿಭಟನೆ
ಗುಲ್ಬರ್ಗ: ವಾಡಿ ಪಟ್ಟಣದ ಹಾಗೂ ಗ್ರಾಮಗಳ ರಸ್ತೆ ಸುಧಾರಣೆಗೆ ಜೈ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇಲ್ಲಿಗೆ ಸಮೀಪದ ರಾವೂರ ಗ್ರಾಮದ ಚಿತ್ತಾಪುರ- ಶಹಾಬಾದ್ ವೃತ್ತದಲ್ಲಿ ಜೈಕರವೇ ವಾಡಿ ವಲಯ ಅಧ್ಯಕ್ಷ ದೀಪಕಕುಮಾರ್ ರಾಠೋಡ ನೇತೃತ್ವದಲ್ಲಿ ರಾವೂರ- ಶಹಾಬಾದ್- ಚಿತ್ತಾಪುರ ರಸ್ತೆ ಸುಧಾರಣೆಗೆ ರಸ್ತೆ ಮೇಲೆ ಟೈರುಗಳನ್ನು ಸುಡುವ ಮೂಲಕ ಪ್ರತಿಭಟಿಸಿದರು.
ವಲಯ ಅಧ್ಯಕ್ಷ ದೀಪಕಕುಮಾರ್ ರಾಠೋಡ ಮಾತನಾಡಿ, ಗ್ರಾಮದ ರಸ್ತೆ ಸುಧಾರಣೆಗೆ ಈ ವೃತ್ತದಲ್ಲಿ ಹೋರಾಟ ನಡೆಸಲಾಯಿತು. ಪ್ರಿಯಾಂಕ್ ಖರ್ಗೆ ಅವರು ಶಾಸಕರಾಗಿ 9 ತಿಂಗಳು ಗತಿಸಿದರೂ ಅವರಿಗೆ ಹದ್ದೆಗೆಟ್ಟ ಗ್ರಾಮದ ರಸ್ತೆಗಳು ಮಾತ್ರ ಕಾಣುತ್ತಿಲ್ಲ ಎಂದು ಆರೋಪಿಸಿದರು. ಜೈಕರವೇ ಕಾರ್ಯಕರ್ತರಾದ ವೆಂಕಟೇಶ ಬಮ್ಮನ, ಹುಸೇನಸಾಬ್ ಚೇಟ್ಟನ್ನಳಿ, ತಾಯಪ್ಪ ಕಂಬಲಪುರ, ಅಖಿಲಸಾಬ್, ಸಾಹೇಬಗೌಡ, ರಾಕೇಶ, ಮಡಿವಾಳ, ಸಂಗಣ್ಣ ರಾವೂರ, ಹನಮಂತ ರಾವುರ, ದೇವರಾಜ ಬಡಿಗೇರ, ಸಾಬು ಇದ್ದರು.