ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಗೀತಾಧ್ಯಯನದಿಂದ ಬದುಕಿನ ಅರಿವು'

Mainashree
Updated On : 15 Dec 2013, 10:40 am

ಹುಣಸಗಿ: ಸಮೀಪದ ಕಾಮನಟಗಿ ಗ್ರಾಮದಲ್ಲಿ ಗೀತಾ ಜಯಂತಿಯನ್ನು ವೈಭವದಿಂದ ಆಚರಿಸಲಾಯಿತು.
ಅಧ್ಯಾತ್ಮ ಸತ್ಸಂಗಿ ರಾಮಚಂದ್ರಗೌಡ ದೇವಾಪುರ ಮಾತನಾಡಿ, ಬದುಕಿನಲ್ಲಿ ಯಾವುದು ಸತ್ಯ, ಯಾವುದು ಮಿಥ್ಯ ಎಂಬುದನ್ನು ಭಗವಂತ ಸ್ವತಃ ತನ್ನ ಮುಖವಾಣಿಯಿಂದ ಜಗತ್ತಿಗೆ ಗೀತೋಪದೇಶ ಮುಖಾಂತರ ನೀಡಿದ್ದಾನೆ ಎಂದರು.
ಗೀತಾಭ್ಯಾಸಿ ರಾಜನಕೋಳೂರಿನ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ವಿಜಯ ರಾಘವನ್ ಗೀತೆಯೊಳಗಿನ ಮೂಲ ತಿರುಳಾದ ಸ್ಥಿತಪ್ರಜ್ಞ ಕುರಿತು ಮಾತನಾಡಿದರು.
ಹಣುಮಂತಾಚಾರ್ಯ ಪುರೋಹಿತ್ ಮಾತನಾಡಿದರು. ನಿವೃತ್ತ ಶಿಕ್ಷಕ ಮನೋಹರರಾವ್ ದ್ಯಾಮನಹಾಳ ಮಾತನಾಡಿ, ಭಗವದ್ಗೀತೆಯನ್ನು ಸಂಸ್ಕೃತ ಭಾಷೆಯಿಂದ ಕನ್ನಡದ ಭಾಮಿನಿ ಷಟ್ಪದಿಗೆ ಅನುವಾದ ಮಾಡಿದ ರಾಜನಕೋಳೂರು ಗ್ರಾಮದ ಬ.ಮ. ಪಾಟೀಲ್ ಅವರನ್ನು ಸ್ಮರಿಸಿದರು. ಕೊಡೆಕಲ್ ಗ್ರಾಮದ ಗಿರಿಜಾಬಾಯಿ ಗೀತಾರ್ಥವನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಬಸವಂತ್ರಾಯ ಕುಲಕರ್ಣಿ, ನಾರಾಯಣರಾವ ದ್ಯಾಮನಹಾಳ, ನರಸಿಂಗರಾವ ಕುಲಕರ್ಣಿ, ವೆಂಕಟರಾವ, ಚಂದುರಾವ, ದತ್ತಾತ್ರೇಯ, ಜಗನ್ನಾಥಾಚಾರ್ಯ ಕೊಡೆಕಲ್ ಸೇರಿದಂತೆ ಇತರರು ಇದ್ದರು.  ಡಾ. ಗೋವಿಂದರಾವ ಜಹಾಗೀರದಾರ ಸ್ವಾಗತಿಸಿದರು. ದೇವರಾಜ ಕುಲಕರ್ಣಿ ನಿರೂಪಿಸಿದರು. ವಾಸುದೇವರಾವ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement