ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಭೂಮಿ ಹಂಚಲು ಆಗ್ರಹಿಸಿ ಧರಣಿ

Mainashree
Updated On : 15 Dec 2013, 10:39 am

ಯಾದಗಿರಿ: ಬಗರ್ ಹುಕಂ ಸಾಗುವಳಿ ಸಕ್ರಮಗೊಳಿಸಿ ಭೂ ರಹಿತರಿಗೆ ಭೂಮಿ ನೀಡುವಂತೆ ಆಗ್ರಹಿಸಿ ಜಿಲ್ಲಾ ಬಹುಜನ ಪಕ್ಷ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರದಿಂದ ಮೂರು ದಿನಗಳ ಬೃಹತ್ ಧರಣಿ ಸತ್ಯಾಗ್ರಹ ಶನಿವಾರ ಮುಕ್ತಾಯಗೊಂಡಿತು.
ಜಿಲ್ಲಾಧ್ಯಕ್ಷ ಆನಂದ ಕುಮಾರ ಯಲಗೋಡ ಮಾತನಾಡಿ, ಸಂವಿಧಾನ ಆಶಯದಂತೆ ಸ್ವತಂತ್ರ ಭಾರತದ ಪ್ರತಯೊಬ್ಬ ಪ್ರಜೆಗೆ ಸಮಾನ ಭೂಮಿ ಹಂಚಿಕೆಯಾಗಬೇಕಿತ್ತು. ಭಾರತ ಬಹುಜನರ ಭೂರಹಿತರಾಗಿದ್ದಾರೆಂದು ಟೀಕಿಸಿದರು.
ಸರ್ಕಾರ ತಕ್ಷಣ ವಿ. ಬಾಲಾಸುಬ್ರಮಣಿ ಸಮಿತಿಯ ವರದಿಯನ್ನು ಒಪ್ಪಕೊಳ್ಳಬೇಕು. ಈ ವರದಿಯನ್ನು ಎಸ್‌ಸಿ ಮತ್ತು ಎಸ್‌ಟಿ ಹಿಂದುಳಿದ ಜಾರಿಗಳು, ಅರಣ್ಯವಾಸಿಗಳು ಮತ್ತು ಭೂರಹಿತರು ರಾಜ್ಯಾದ್ಯಂತ ಅಕ್ರಮವಾಗಿ ಸಾಗುವಳಿ ಮಾಡಿಕೊಂಡಿರುವುದನ್ನು ಪ್ರತ್ಯೇಕಗೊಳಿಸಿ ಈಗಾಗಲೇ ಇವರು ನಮೂನೆ 50.53ರ ಪ್ರಕಾರ ಅರ್ಜಿ ಸಲ್ಲಿಸಿದ್ದು, ಇವರ ಅಕ್ರಮ ಸಾಗುವಳಿಯನ್ನು ಸಕ್ರಮಗೊಳಿಸಿ ತಕ್ಷಣ ಇವರಿಗೆ ಸಾಗುವಳಿ ಪತ್ರ ನೀಡಬೇಕೆಂದು ಒತ್ತಾಯಿಸಿದರು.
ಸರ್ಕಾರದ ಸೀಲಿಂಗ್ ಲಿಮಿಟ್‌ಗಿಂತ ಹೆಚ್ಚುವರಿ ಭೂಮಿಯನ್ನು ಹೊಂದಿರುವ ಭೂ ಮಾಲೀಕರಿಂದ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡು ಭೂರಹಿತರಿಗೆ ಹಂಚಿಕೆ ಮಾಡಬೇಕು. 191 ಮತ್ತು 1999ರ ಅವಧಿಯಲ್ಲಿ ನಿಗದಿತ ಅಮೂನತೆಯಲ್ಲಿ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದ ಮತ್ತು ನಂತರದ ದಿನಗಳಲ್ಲಿ ಬಗರ್ ಹುಕಂ ಸಾಗುವಳಿ ಮಾಡುತ್ತಿರುವ ಭೂ ರಹಿತರು ಸಣ್ಣ ಹಿಡುವಳಿದಾರರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಒಂದು ಕಾಲಾಕಾಶವನ್ನು ನೀಡಬೇಕು. ತಕ್ಷಣ ಬಗರ್ ಹುಕಂ ಸಾಗುವಳಿ ಸಕ್ರಮ ಸಮಿತಿಯನ್ನು ನೇಮಕ ಮಾಡಬೇಕು. ರಾಜ್ಯದ ಶೇ.80 ರಷ್ಟು ಹಳ್ಳಿಗಳಲ್ಲಿ ಸ್ಮಶಾನ ಭೂಮಿ ಇಲ್ಲದಿರುವುದರಿಂದ ಎಲ್ಲಾ ಹಳ್ಳಿ ಮತ್ತು ನಗರ ಪ್ರದೇಶಗಳಿಗೂ ಒಂದು ಕಾಲ ಮಿತಿಯಲ್ಲಿ ಸ್ಮಶಾನ ಭೂಮಿ ಒದಗಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಬದಲ್ಲಿ ಇಸ್ಮಾಲ್ ಖಾದರಿ, ಶಾಭೋದಿನ್ ಶೇಖ್, ರಾಹುಲ್ ಹತ್ತಿಕುಣಿ, ನರಸಿಂಗ್ ಕೊರೆ, ಭೀಮರಾಯ ಎಲ್ಹೇರಿ ಸೇರಿದಂತೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement