ವ್ಯಕ್ತಿತ್ವ ವಿಕಸನ ಕಾರ್ಯಕ್ರಮ
ಶಹಾಪುರ: ಪ್ರತಿ ವ್ಯಕ್ತಿಯ ಜೀವನದಲ್ಲಿ ಶ್ರದ್ಧೆಯಿಂದ ಮಾಡುವ ಎಲ್ಲಾ ಕೆಲಸ ಕಾರ್ಯಗಳು ವೈಯಕ್ತಿಕ ವ್ಯಕ್ತಿತ್ವದ ವಿಕಾಸಕ್ಕೆ ಸ್ಫೂರ್ತಿ ನೀಡುತ್ತವೆ ಎಂದು ಕನ್ನಡ ಪಂಡಿತ ಶಿವಶರಣಪ್ಪ ಶಿರೂರು ಶಹಾಪುರ ಪಟ್ಟಣದ ಮೊರಾರ್ಜಿ ದೇಸಾಯಿ ಶಾಲೆಯ ದೊರಿಗುಡ್ಡದಲ್ಲಿ ನಡೆದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಅಭಿಪ್ರಾಯ ಹಂಚಿಕೊಂಡರು.
ಇನ್ನೊಬ್ಬ ಮುಖ್ಯ ಅತಿಥಿ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಸವರಾಜ ಸಿನ್ನೂರು ಮಾತನಾಡಿ, ನಾವು ಯಾವುದೇ ವಿಷಯದ ಬಗ್ಗೆ ಮಾತನಾಡಿದರೆ ಅದು ಸೂಕ್ತವಾದ ಸಮಯದಲ್ಲಿ ನೈತಿಕ ನೆಲೆಗಟ್ಟಿನಲ್ಲಿ ಇದ್ದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದರು. ಯುವ ಸಾಹಿತಿ ಸಾಯಿಬಾಬ ಅಣಬಿ, ಮಡಿವಾಳಪ್ಪ ಹೆಗ್ಗಣದೊಡ್ಡಿ ಪಾಲ್ಗೊಂಡಿದ್ದರು. ಶಾಲೆಯ ಪ್ರಾಂಶುಪಾಲರಾದ ಜಟ್ಟೆಪ್ಪ ಹದನೂರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಗೀತಸಾಧಕ ರಮೇಶ ಹೂಗಾರ, ತಬಲವಾದಕರಾದ ರಾಮಕೃಷ್ಣ ದೀಪಸಾಗರ, ಶಾಂತಲಿಂಗಪ್ಪ ಪಾಟೀಲ, ನಿಂಗಣ್ಣ ನಾಯ್ಕಲ್ ಇದ್ದರು. ಪ್ರಾರ್ಥನೆ ಗೀತೆ ಸುಜಾತ, ರೇಣುಕಾ ಹಾಡಿದರು, ನಿರೂಪಣೆ ರಾಜಕುಮಾರ ಮಾಡಿದರು, ಶರಣು ನಾಯಕ ವಂದಿಸಿದರು.