ಇಂದು ಮಡಿವಾಳ ಸಮಾಜ ಸಭೆ
ಜೇವರ್ಗಿ: ಜ.5ರಂದು ಬೆಂಗಳೂರಿನಲ್ಲಿ ರಾಜ್ಯ ಮಡಿವಾಳರ ಜನ ಜಾಗೃತಿ ಸಮಾವೇಶ ನಡೆಯಲಿದೆ. ಸಮಾವೇಶಕ್ಕೆ ಜೇವರ್ಗಿ ತಾಲೂಕಿನಿಂದ ಭಾಗವಹಿಸುವ ಹಾಗೂ ಇತರ ವಿಷಯಗಳ ಬಗ್ಗೆ ಚರ್ಚಿಸಲು ಡಿ.16 ಬೆಳಗ್ಗೆ 11.30ಕ್ಕೆ ಮಡಿವಾಳ ಸಮಾಜದ ಸಮುದಾಯ ಭವನದಲ್ಲಿ ಸಭೆ ಕರೆಯಲಾಗಿದೆ.ಈ ಸಭೆಯಲ್ಲಿ ಸಮಾಜದ ಮುಖಂಡರಾದ ಮಲ್ಲಣ್ಣ ಮಡಿವಾಳ, ಧರ್ಮಣ್ಣ ಮಡಿವಾಳ, ಶಿವಪುತ್ರಪ್ಪ ಮಲ್ಲಾಬಾದ ಇತರರು ಭಾಗವಹಿಸಲಿದ್ದಾರೆ. ತಾಲೂಕಿನ ಮಡಿವಾಳ ಸಮಾಜದ ಬಾಂಧವರು ಪಾಲ್ಗೊಂಡು ಯಶಸ್ವಿಗೊಳಿಸಲು ಸಮಾಜದ ತಾಲೂಕಾಧ್ಯಕ್ಷ ಬಂಡೆಪ್ಪ ಹಾಗರಗಿ ಮನವಿ ಮಾಡಿದ್ದಾರೆ.
ತೊಗರಿ ಬೆಳಗಾರರ ರಸ್ತೆ ತಡೆ ಇಂದು
ಚಿತ್ತಾಪುರ: ತಾಲೂಕು ತೊಗರಿ ಬೆಳೆ ಹೋರಾಟಗಾರ ಸಮಿತಿ ವತಿಯಿಂದ ಡಿ.16 ರಂದು ಬೆಳಗ್ಗೆ 10.30ಕ್ಕೆ ಲಾಜಿಂಗ್ ಕ್ರಾಸ್ ಬಳಿ ರಸ್ತೆತಡೆ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಮಂಜುಗೌಡ ಪೊಲೀಸ್ ಪಾಟೀಲ್ ತಿಳಿಸಿದ್ದಾರೆ.ಸ್ವಾಮಿನಾಥ ವರದಿ ಜಾರಿಗೊಳಿಸಿ ತೊಗರಿ ಬೆಳೆಗೆ ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮೂಲಕ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಗುವುದು.
ಪೌರಾಡಳಿತ ಸಚಿವರ ಪ್ರವಾಸ
ಗುಲ್ಬರ್ಗ: ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಡಿ.16ರಂದು ಬೆ.6.30ಕ್ಕೆ ನಗರಕ್ಕೆ ಆಗಮಿಸಿ, ಬೆ.9.30 ಗಂಟೆಗೆ ಎಸ್‌ಎಸ್‌ಜಿ ಪ್ಯಾಕೇಜ್, 13ನೇ ಹಣಕಾಸು ಯೋಜನೆ ಕಾಮಗಾರಿಗಳಿಗೆ ಚಾಲನೆ ನೀಡುವರು. ಮ.12.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಉದ್ಘಾಟನೆಯನ್ನು ನೆರವೇರಿಸುವರು. ಮ.3ರಿಂದ ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ಕೈಗೊಂಡು ವಾಸ್ತವ್ಯ ಮಾಡುವರು. ಡಿ.17ರಂದು ಬೆ.11ರಿಂದ ಸಂಜೆ 6ರವರೆಗೆ ಸಾರ್ವಜನಿಕ ಭೇಟಿ, ಕುಂದುಕೊರತೆಗಳ ವಿಚಾರಣೆ ಹಾಗೂ ಉಳಿದ ಕಾಮಗಾರಿಗಳ ಚಾಲನೆ ನೆರವೇರಿಸಿ ಸಂಜೆ 6.45ಕ್ಕೆ ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.
ನಾಳೆ ಪ್ರತಿಭಟನೆ
ಚಿತ್ತಾಪುರ: ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಣಿಕೆ ನಿಲ್ಲಿಸಬೇಕು, ಸ್ಥಗಿತಗೊಂಡ ರಸ್ತೆ ನಿರ್ಮಾಣ ಕಾಮಾಗಾರಿಯನ್ನು ಆರಂಬಿಸಬೇಕೆಂಬ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ತಾಲೂಕು ಬಿಜೆಪಿ ಯುವ ಮೋರ್ಚಾದ ವತಿಯಿಂದ ಡಿ.17ರಂದು ಬೆ.10.30ಕ್ಕೆ ರಸ್ತೆ ತಡೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ವಕ್ತಾರ ಗಿರೀಶ ಭಜಂತ್ರಿ ಅಳ್ಳಳ್ಳಿ ಹಾಗೂ ಯುವ ಮೋರ್ಚಾದ ತಾಲೂಕಾಧ್ಯಕ್ಷ ತಮ್ಮಣ್ಣ ದಿಗ್ಗಿ ತಿಳಿಸಿದ್ದಾರೆ. ಬೆ.10.30ಕ್ಕೆ ಲಾಜಿಂಗ್ ಕ್ರಾಸ್ ಹತ್ತಿರ ರಸ್ತೆ ತಡೆ ನಡೆಸಲಾಗುವುದು. ನಂತರ ಬಸ್ ನಿಲ್ದಾಣ, ಅಂಬೇಡ್ಕರ್ ಚೌಕ್, ಭುವನೇಶ್ವರಿ, ನಾಗಾವಿ ಚೌಕ್ ಮೂಲಕ ತಹಸೀಲ್ದಾರ್ ಕಚೇರಿಗೆ ತಲುಪಿ ಮನವಿ ಪತ್ರ ಸಲ್ಲಿಸಲಾಗುವುದು.