'ಶೋಷಣೆಯಿಂದ ಮುಕ್ತರಾಲು ಹೋರಾಟಕ್ಕೆ ಮುಂದಾಗಿ'
ಯಾದಗಿರಿ: ಗ್ರಾಮೀಣ ಭಾಗದಲ್ಲಿ ಶೋಷಣೆಗೆ ಒಳಗಾಗುತ್ತಿರುವ ಸಮಾಜದ ಬಾಂಧವರ ಹಿತಕ್ಕಾಗಿ ಸಮಿತಿಯ ಪ್ರತಿಯೊಬ್ಬರು ಮುಂದಾದಾಗ ಮಾತ್ರ ಡಾ. ಅಂಬೇಡ್ಕರ್ ಮತ್ತು ಜಗಜೀವನ್ ಜೀ ಕಂಡ ಕನಸು ನನಸಾಗಲಿದೆ ಎಂದು ಲಿಂಗಪ್ಪ ಹತ್ತಿಮನಿ ಹೇಳಿದರು.
ನಗರದ ಚರ್ಚ್ ಹಾಲ್‌ನಲ್ಲಿ ಭಾನುವಾರ ನಡೆದ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಸಭೆಯಲ್ಲಿ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಅವಿರೋಧ ಆಯೆಯಾಗಿ ಮಾತನಾಡಿ, ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕೆಂದು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಜಾಗೃತಿ ಕೊರೆತೆಯಿಂದ ಯೋಜನೆಗಳ ಸದುಪಯೋಗ ಆಗುತ್ತಿಲ್ಲ. ಸಂಘಟನೆಯ ವತಿಯಿಂದ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ದುಶ್ಚಟಗಳಿಂದ ದೂರವಿರಿ: ಯುವಜನತೆ ದುಶ್ಚಟಗಳನ್ನು ಬಿಟ್ಟು ಸಮಾಜದ ಒಳಿತಿಗಾಗಿ ಶ್ರಮಿಸಬೇಕಾದ ಅಗತ್ಯವಿದ್ದು, ಈ ನಿಟ್ಟಿಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ. ಸಮಾಜದ ಜನತೆ ಶಿಕ್ಷಣ ಪಡೆಯುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು. ಸಮಾಜದ ಮುಖಂಡರಾದ ಮಲ್ಲಣ್ಣ ದಾಸನಕೇರಾ, ಜಿಪಂ ಮಾಜಿ ಸದಸ್ಯ ಖಂಡಪ್ಪ ದಾಸನ, ಎಂ.ಕೆ ಬೀರನೂರ, ಗೋಪಾಲ ದಾಸನಕೇರಾ, ಸ್ಯಾಂಸನ ಮ್ಯಾಳಿಕೇರಿ, ದೇವಿಂದ್ರ ನಾದ್, ಮಲ್ಲಿಕಾರ್ಜುನ ಕಾಂತಿಮನಿ, ಶಂಕ್ರಪ್ಪ ದೋರನಳ್ಳಿ, ಹಣಮಂತ ಲಿಂಗೇರಿ ಇತರರಿದ್ದರು.
ಇದೇ ವೇಳೆ ಮಾರುತಿ ಮುಂಡಾಸ, ನಂದಕುಮಾರ ಸುರಪುರ, ವಾಸುದೇವ ಕಟ್ಟಿಮನಿ ಅವರನ್ನು ಸಮಿತಿಯ ಉಪಾಧ್ಯಕ್ಷರನ್ನಾಗಿ, ಸಿದ್ದಪ್ಪ ಲಿಂಗೇರ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಯಿತು.