ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸರ್ದಾರ್ ಪಟೇಲ್ ಆಧುನಿಕ ಭಾರತದ ನಿರ್ಮಾತೃ: ಪ್ರಕಾಶ

Lingaraj Badiger
Updated On : 16 Dec 2013, 10:42 am

ಶಹಾಪುರ: ಅನೇಕ ಸಂಸ್ಥಾನಗಳಾಗಿ ಹಂಚಿಹೋಗಿದ್ದ ಭಾರತವನ್ನು ಒಗ್ಗೂಡಿಸಿ ಸಂಸ್ಥಾನಗಳ ವಿಲೀನಿಕರದ ಮೂಲಕ ಆಧುನಿಕ ಭಾರತ ಕಟ್ಟಿದ ನಿರ್ಮಾತೃಸರ್ದಾರ್ ಪಟೇಲ್ ಆಗಿದ್ದಾರೆಂದು ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನಳ್ಳಿ ನುಡಿದರು.
ಪಟ್ಟಣದ ಈಶ್ವರ ದೇವಸ್ಥಾನದ ಆವರಣದಲ್ಲಿ ಅಖಿಲಭಾರತ ವಿದ್ಯಾರ್ಥಿ ಪರಿಷತ್ ಶಹಾಪುರ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರ 63ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪಟೇಲರು ಈ ದೇಶದ ಪ್ರಧಾನಿಯಾಗಬೇಕಾಗಿತ್ತು. ಅವರು ಗೃಹ ಸಚಿವರಾಗಿ ಸಂಸ್ಥಾನಗಳನ್ನು ಒಗ್ಗೂಡಿಸಿದ್ದು ಮಹತ್ತರವಾದ ಕಾರ್ಯ ಎಂದರು.
ದೇಶಕ್ಕೆ ಮಹಾನ್ ಕೊಡುಗೆ: ಉಪನ್ಯಾಸ ನೀಡಿದ ಸಾಹಿತಿ ಅಶೋಕ ಚೌದರಿ, 1875ರ ಅಕ್ಟೋಬರ್-31 ರಂದು ಗುಜರಾತಿನ ನದಿಯಾಡದಲ್ಲಿ ಜನಿಸಿದರು. ಇವರ ತಂದೆ ಜವೇರಾ ಬಾಯಿ. ತಾಯಿ ಲಾಡಾಬಾಯಿ. ಇವರು ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡು ದೇಶ ಸ್ವಾತಂತ್ರ್ಯದ ಚಳುವಳಿಯಲ್ಲಿ ಧುಮುಕಿದರು. ಗಾಂಧೀಜಿ ಪ್ರಭಾವದಲ್ಲಿ ಬೆಳೆದ ಇವರು ಗಾಂಧೀಜಿಯಿಂದ ಸರ್ದಾರ್ ಎಂಬ ಬಿರುದು ಪಡೆದರು.
ದೇಶಕ್ಕೆ ಮಹಾನ್ ಕೊಡುಗೆ ನೀಡಿ, ಪಟೇಲರು 1950ರ ಡಿಸೆಂಬರ್-15 ರಂದು ನಿಧನ ಹೊಂದಿದರು ಎಂದರು.
ಎಬಿವಿಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಅರವಿಂದ ಉಪ್ಪಿನ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಮಲ್ಲು ಬಾದ್ಯಪೂರ, ಬಸವರಾಜ ಅಗ್ನಿ ಇದ್ದರು. ಸಂಘಟನೆಯ ಪ್ರಮುಖರಾದ ಶರಣು ಅಸ್ಕಿ, ಚೇತನ್ ಹಿರೇಮಠ, ಮಹಮ್ಮದ್ ಸದ್ದಾಂ, ರಾಜು ದಾರದ್, ಅಭಿಷೇಕ್ ಪತ್ತರ್, ಪ್ರಕಾಶ ಸಾಹು, ಗೌಡಪ್ಪ ಮಡಿವಾಳಕರ್, ದೇವು ಬಡಿಗೇರ, ವಿರೇಶ ಹಿರೆಮಠ, ಮಲ್ಲುಗೌಡ ಕನ್ಯಕೌಳೂರು ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮವನ್ನು ಮಲ್ಲಯ್ಯ ಸ್ವಾಮಿ ಇಟಗಿ ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement