ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಣಬಿಯಲ್ಲಿ ಪ್ರತಿಭಾ ಕಾರಂಜಿ ಮನೋಲ್ಲಾಸ

Lingaraj Badiger
Updated On : 17 Dec 2013, 11:17 am

ಶಹಾಪುರ: ಸರ್ಕಾರ ಜಾರಿಗೆ ತಂದಿರುವ ಪ್ರತಿಭಾ ಕಾರಂಜಿಯಿಂದ ಪ್ರತಿ ಮಗುವಿನಲ್ಲೂ ಮನೋಲ್ಲಾಸದ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಿವಾಜಿನಾಯಕ ಹೇಳಿದರು. ಇತ್ತೀಚಿಗೆ ಅಣಬಿಯಲ್ಲಿ ನಡೆದ ಶಿರವಾಳ ಕ್ಲಸ್ಟರ್ ವಲಯದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷೆ ಅಯ್ಯಮ್ಮ ಪರಮಣ್ಣ ಉದ್ಘಾಟಿಸಿದರು. ಸಿಆರ್‌ಪಿ ಶರಣಪ್ಪ ಪ್ರತಿಭಾ ಕಾರಂಜಿ ಮಹತ್ವ ಕುರಿತು ವಿವರಿಸಿದರು. ಮುಖ್ಯ ಶಿಕ್ಷಕ ದೇವಿಂದ್ರಪ್ಪ, ಪ್ರಮುಖರಾದ ಮರಿಗೌಡ, ಚಿದಾನಂದ ಚಿಪ್ಪಾರ, ಎಸ್‌ಡಿಎಂಸಿ ಸದಸ್ಯರಾದ ಬುರಾನೋದ್ದಿನ್, ಮಲ್ಕಪ್ಪ ಮೂಲಿಮನಿ, ಹಾಜರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಪ್ರೌಢಶಾಲೆ ಶಿಕ್ಷಕ ಬಸವರಾಜ ನೆರವೇರಿಸಿದರು. ಶಿಕ್ಷಕ ಸುಭಾಸಚಂದ್ರ ನಿರೂಪಿಸಿದರು. ಶಂಕರಲಿಂಗ ವಂದಿಸಿದರು.
ನಾಳೆ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ
ಶಹಾಪುರ: ತಾಲೂಕಾ ಮಟ್ಟದ ಪ್ರತಿಭಾಕಾರಂಜಿ ಕಾರ್ಯಕ್ರಮ ಡಿ. 18 ಬುಧವಾರದಂದು ಆಯೋಜಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ರಾಯಪ್ಪರಡ್ಡಿ ತಿಳಿಸಿದ್ದಾರೆ. 1ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ಸ.ಹಿ.ಪ್ರಾ. ಶಾಲೆ ಪೇಠ ಶಹಾಫುರ 5ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಸರ್ಕಾರಿ ಮಾದರಿ ಪ್ರಾ. ಶಾಲೆ ಕನ್ಯಾ 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸಮಾಪ್ರಾ ಶಾಲೆ (ಬಾಲಕರ) ವಿಭಾಗದಲ್ಲಿ ನಡೆಯುತ್ತವೆ. ಕ್ಲಸ್ಟರ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳೊಂದಿಗೆ ಸಂಬಂಧಪಟ್ಟ ಶಿಕ್ಷಕರು ಪಾಲ್ಗೊಳ್ಳುವರು. ಹೆಚ್ಚಿನ ಮಾಹಿತಿಗಾಗಿ ಶಂಕರ ಚವ್ಹಾಣ ಶಿಕ್ಷಣ ಸಂಯೋಜಕರು ಇವರನ್ನು ಸಂಪರ್ಕಿಸಲು ತಿಳಿಸಿದೆ. (ಮೊ. 9740303278)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement