ಇಂದು ದಿನಾಚರಣೆ
ಗುಲ್ಬರ್ಗ: ಅಂಚೆ ಮತ್ತು ಆರ್ಎಂಎಸ್ ನಿವೃತ್ತ ನೌಕರರ ಕಲ್ಯಾಣ ಸಂಘವು ನಗರದಲ್ಲಿ ನಿವೃತ್ತರ ದಿನಾಚರಣೆಯನ್ನು ಡಿ.17ರಂದು ಲಯನ್ಸ್ ಕ್ಲಬ್ ಭವನ ಮುಖ್ಯ ಅಂಚೆ ಕಚೇರಿ ಹತ್ತಿರ ಬೆಳಗ್ಗೆ 10.30 ಗಂಟೆಗೆ ಹಮ್ಮಿಕೊಂಡಿದೆ. ಸುಪ್ರೀಂ ಕೋರ್ಟ್ 1982ರ ಡಿ.17ರಂದು ನೌಕರರ ಪಿಂಚಣಿ ವಿಷಯದಲ್ಲಿ ಮಹತ್ವದ ತೀರ್ಪನ್ನು ಪ್ರಕಟಿಸಿತು. ಈ ತೀರ್ಪು ಡಿ.ಎಸ್. ನಾಕ್ರಾ ಢ/ಡ ಯುನಿಯನ್ ಆಫ್ ಇಂಡಿಯಾ ಎಂದೇ ಪ್ರಸಿದ್ಧಿ ಪಡೆದಿದೆ. ಈ ಐತಿಹಾಸಿಕ ತೀರ್ಪಿನ ಸವಿ ನೆನಪಿಗಾಗಿ ಡಿ.17ರಂದು ನಿವೃತ್ತರ ದಿನಾಚರಣೆ ಎಂದು ಅಖಿಲ ಭಾರತ ಮಟ್ಟದಲ್ಲಿ ಆಚರಿಸಲಾಗುತ್ತಿದೆ. ಸಮಾರಂಭಕ್ಕೆ ಗುಲ್ಬರ್ಗ ಅಂಚೆ ವಿಭಾಗದ ಮುಖ್ಯಸ್ಥ ಎನ್. ಪ್ರಕಾಶ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಗರದ ಖ್ಯಾತ ವೈದ್ಯ ಡಾ. ಎಸ್.ಎಸ್. ಗುಬ್ಬಿ ಮತ್ತು ಜಾನಪದ ಸಾಹಿತ್ಯದಲ್ಲಿ ರಾಜ್ಯ ಪ್ರಶಸ್ತಿ ಪಡೆದ ಪ್ರೊ. ಸೂಗಯ್ಯ ಹಿರೇಮಠ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಂಚೆ ಮತ್ತು ಆರ್ಎಂಎಸ್ ನಿವೃತ್ತ ಹಿರಿಯ ಕಾರ್ಮಿಕ ನಾಯಕರು ಮತ್ತು ನಿವೃತ್ತ ಅಧಿಕಾರಿ ಡಿ. ಕಲ್ಯಾಣರಾವ, ಪ್ರತಾಪಸಿಂಗ್, ಎಸ್.ಎಸ್. ಬಾಳಿ, ಸೈಯದ್ ಮೀಯಾ ಮತ್ತು ಜೆ. ಎಸ್. ಕೊಣ್ಣೂರು ಭಾಗವಹಿಸಲಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಯೇವೂರಕರ್, ಕುಲ್ಕರ್ಣಿ ಮನವಿ ಮಾಡಿದ್ದಾರೆ.
ತರಬೇತಿ ಶಿಬಿರ
ಗುಲ್ಬರ್ಗ: ನಗರದ ನೆಹರು ಯುವಕೇಂದ್ರ ಹಾಗೂ ಹೀರಾಪುರಿನ ಪ್ರಜ್ಞಾ ಯುವಕ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಡಿ.17ರಿಂದ 19ರವರೆಗೆ ಹೀರಾಪುರದ ನೂತನ ಸಮುದಾಯ ಭವನದಲ್ಲಿ ಯುವ ನಾಯಕತ್ವ ಮತ್ತು ಸಮುದಾಯ ಅಭಿವೃದ್ಧಿ ತರಬೇತಿ ಶಿಬಿರ ಆಯೋಜಿಸಲಾಗಿದೆ. ಹೀರಾಪೂರ ನೂತನ ಸಮುದಾಯ ಭವನದಲ್ಲಿ ಡಿ.17ರ ಬೆ.11ಕ್ಕೆ ಶಿಬಿರವನ್ನು ಜಿಪಂ ಉಪಾಧ್ಯಕ್ಷೆ ಅನೀತಾ ಪವನಕುಮಾರ್ ವಳಕೇರಿ ಉದ್ಘಾಟಿಸುವರು. ಪ್ರಜ್ಞಾ ಯುವಕ ಸಂಘದ ಅಧ್ಯಕ್ಷ ಸಂತೋಷಕುಮಾರ ಮೇಲ್ಮನಿ ಅಧ್ಯಕ್ಷತೆ ವಹಿಸುವರು. ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ವಿದ್ಯುತ್ ನಿಲುಗಡೆ
ಗುಲ್ಬರ್ಗ: ಸೊಲ್ಲಾಪುರದಿಂದ ರಾಯಚೂರುವರೆಗೆ 765 ಕೆವಿ ಸಿಂಗಲ್ ಸರ್ಕ್ಯೂಟ್ ವಿದ್ಯುತ್ ಪ್ರಸರಣಾ ಮಾರ್ಗದ ನಿರ್ಮಾಣದ ಕೆಲಸ ನಡೆದಿರುವ ಪ್ರಯುಕ್ತ ಡಿ.18 ರಂದು ಬೆಳಗಿನ 8ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು ಗುಲ್ಬರ್ಗ, ಆಳಂದ, ಅಫಜಲ್ಪುರ ಮತ್ತು ಜೇವರ್ಗಿ ತಾಲೂಕಿನ ಎಲ್ಲ ಗ್ರಾಮಗಳು ಹಾಗೂ ಚಿತ್ತಾಪುರ ತಾಲೂಕಿನ ಶಹಾಬಾದ್ ಮತ್ತು ವಾಡಿ ವ್ಯಾಪ್ತಿಯ ಎಲ್ಲ ಗ್ರಾಮಗಳು. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸುವಂತೆ ಕೋರಲಾಗಿದೆ.
ಇಂದು ನಿಲುಗಡೆ: ನಗರದಲ್ಲಿ 11 ಕೆವಿ ಮಾರ್ಗ ವಿಸ್ತರಣೆ, ಹೆಚ್ಚುವರಿ ಪರಿವರ್ತಕ ಅಳವಡಿಕೆ ಕೈಗೊಳ್ಳಲಾಗುತ್ತಿದ್ದು, 11 ಕೆವಿ ಪೊಲೀಸ್ ಕಾಲೋನಿ ಹಾಗೂ ಬಸವೇಶ್ವರ ಫೀಡರ್ ಮೇಲೆ ಡಿ.17ರಂದು ಬೆ.10ರಿಂದ ಸಂಜೆ 5ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.