ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜಾತಿ ನಿಂದನೆ ಮಾಡಿ ದೌರ್ಜನ್ಯ: ಆರೋಪ

Lingaraj Badiger
Updated On : 17 Dec 2013, 11:17 am

ಶಹಾಪುರ: ಕಳೆದ ಶನಿವಾರ ತಾಲೂಕಿನ ಹುಂಡೆಕಲ್ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ (ಹೊಲೆಯ ಸಮುದಾಯ) ಸೇರಿದ ದೇವಿಂದ್ರಪ್ಪ ಹಣಮಂತ ಮರಿಲಿಂಗಪ್ಪ ಹಣಮಂತ ಇವರ ಮೇಲೆ ಸವರ್ಣಿಯರು ಹೊಲಕ್ಕೆ ಹೋಗುವ ದಾರಿ ಸಂಬಂಧ ಜಗಳ ತೆಗೆದುಕೊಂಡು ಜಾತಿ ನಿಂದನೆ ಮಾಡಿದ್ದಲ್ಲದೆ ಗಾಯಗಳಾಗುವಂತೆ ಹಲ್ಲೆ ಮಾಡಿದ್ದಾರೆ. ಜೊತೆಗೆ ಪರಿಶಿಷ್ಟ ಸಮುದಾಯಗಳ ಮೇಲೆ ದೂರು ಸಲ್ಲಿಸಿದ್ದಾರೆ ಎಂದು ಮರೆಪ್ಪ ಕನ್ಯಕೊಳೂರು ಮತ್ತು ಸಂಘಟನೆ ಪೊಲೀಸ್ ಅಧಿಕಾರಿಗಳಿಗೆ ಮನವಿಯೊಂದನ್ನು ಸಲ್ಲಿಸಿ ಸವರ್ಣೀಯರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಕುರಿತಂತೆ ತಿಳಿಸಿರುವ ಸಂಘಟನೆ ದಲಿತರ ಮೇಲೆ ಹಲ್ಲೆ ಮಾಡಿ ಮತ್ತೆ ದೂರು ದಾಖಲಿಸಿದ್ದು, ಪೊಲೀಸ್ ಇಲಾಖೆ ಸರಿಯಾಗಿ ತನಿಖೆ ನಡೆಸಬೇಕು. ದಲಿತರ ಮೇಲಿನ ಸುಳ್ಳು ದೂರನ್ನು ಹಿಂಪಡೆಯಬೇಕು.   ಅನ್ಯಾಯ ಮಾಡಿದವರನ್ನು ಬಂಧಿಸಬೇಕು. ಇಲ್ಲವಾದಲ್ಲಿ ಠಾಣೆ ಮುಂದೆ ಧರಣಿ ಮಾಡುವುದಾಗಿ ದಲಿತ ಸಂಘಟನೆ ತಿಳಿಸಿದೆ.

--
ಕೆಬಿಜೆಎನ್‌ಎಲ್‌ನಲ್ಲಿ ಅವ್ಯವಹಾರ: ಆರೋಪ
ಸುರಪುರ: ಹಸನಾಪುರದ ಕೆಬಿಜೆಎನ್‌ಎಲ್ ಹೊಲಗಾಲುವೆ ವಿಭಾಗ 2ರಲ್ಲಿ 20011-12 ಮತ್ತು 12-13ನೇ ಸಾಲಿನ ಕಾಮಗಾರಿಯಲ್ಲಿ ಕೋಟ್ಯಂತರ ರುಪಾಯಿ ಅವ್ಯಹಾರ ನಡೆದಿದೆ ಎಂದು ಎಂದು ಕರ್ನಾಟಕ ಪ್ರದೇಶ ಕುರುಬ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿಡ್ಡಪ್ಪ ವಾಗಣಗೇರಿ ಆರೋಪಿಸಿದ್ದಾರೆ.
ದೇವದುರ್ಗ ತಾಲೂಕಿನ ಚಿಕ್ಕ ಹೊನ್ನಕುಣಿಯಲ್ಲಿದ್ದ ಕಚೇರಿಯನ್ನು ಇತ್ತೀಚಿಗೆ ಹಸನಾಪುರಕ್ಕೆ ವರ್ಗಾಯಿಸಲಾಗಿದೆ.
  ದೇವದುರ್ಗದ ಸುತ್ತಮುತ್ತಲಿನ ಜಮೀನುಗಳಿಗೆ ನೀರುಣಿಸುವ ಹೊಲಗಾಲುವೆ ಕಾಮಗಾರಿಗೆ ಸರ್ಕಾರ 98 ಕೋಟಿ ರೂಪಾಯಿ ಪ್ಯಾಕೇಜ್ ಬಿಡುಗಡೆ ಮಾಡಿತ್ತು. ಕಾಮಗಾರಿಯ ಉಸ್ತುವಾರಿಗೆ ಪ್ರಭಾರಿ ಸಹಾಯಕ ಅಭಿಯಂತರ ರಾಯಪ್ಪ ಅವರನ್ನು ನಿಯೋಜಿಸಲಾಗಿತ್ತು.
 ಆದರೆ ಗುತ್ತಿಗೆದಾರರು ಎಲ್ಲಿಯೂ ಕಾಮಗಾರಿ ಸಮರ್ಪಕವಾಗಿ ಮಾಡದೆ ಕಾಮಗಾರಿ ಹೆಸರಿನಲ್ಲಿ ಬೋಗಸ್ ಬಿಲ್ ಎತ್ತಿಹಾಕಿದ್ದಾರೆ ಎಂದು ದೂರಿದ್ದಾರೆ.
ಕಾರಣ ಸದರಿ ಕಾಮಗಾರಿ ಬಗ್ಗೆ ಸಮಗ್ರ ತನಿಖೆ ಮಾಡಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಪ್ರಭಾರಿ ಸಹಾಯಕ ಅಭಿಯಂತರ ರಾಯಪ್ಪ ಹಾಗೂ ಇತರೆ ಕಿರಿಯ ಅಭಿಯಂತರರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕು ಎಂದು ನೀರಾವರಿ ಸಚಿವರಿಗೆ ಬರೆದ ದೂರಿನಲ್ಲಿ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement