ಕವಲು ದಾರಿಯಲ್ಲಿ ಕನ್ನಡಿಗರು: ನಾಡಗೌಡ
ಗುಲ್ಬರ್ಗ: ಇಂದು ಕನ್ನಡಿಗರ ಮುಂದೆ ಅನೇಕ ಸಮಸ್ಯೆಗಳಿದ್ದು, ಇವುಗಳ ಪರಿಹಾರ ಮಾಡಿಕೊಳ್ಳುವುದು ಕನ್ನಡಿಗರೇ ಸೇರಿದೆ. ವಿಶ್ವದರ್ಜೆ ಜ್ಞಾನ ಹೊಂದಿರುವ ಕನ್ನಡಿಗರು ಇಂದು ಕವಲು ದಾರಿಯಲ್ಲಿದ್ದಾರೆ ಎಂದು ಜೆಡಿಯು ರಾಜ್ಯಾಧ್ಯಕ್ಷ ಡಾ. ಎಂ.ಪಿ. ನಾಡಗೌಡ ಹೇಳಿದರು. ಅವರು ನಗರದಲ್ಲಿ ಶಾಂತಪ್ಪ ಪಾಟೀಲ್ ನರಿಬೋಳ ಪ್ರತಿಷ್ಠಾನ ಹಾಗೂ ಕನ್ನಡಿಗರ ಮುಂದಿರುವ ಸಮಸ್ಯೆ ಸವಾಲುಗಳ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಶಾಂತವೀರ ಮುರುಗೇಂದ್ರ ಸ್ವಾಮೀಜಿ, ವೀರಣ್ಣಗೌಡ ಪಾಟೀಲ್ ನರಿಬೋಳ, ಮುಡುಬಿ ಗುಂಡುರಾವ, ಶಂಕರಗೌಡ ಪಾಟೀಲ್ ಆಂದೋಲ, ಉಸ್ತಾದ್ ನಾಸೀರ್ ಹುಸೇನ್, ಬಸವರಾಜ ಪಾಟೀಲ್, ವಿಜಯಕುಮಾರ್ ತೇಗಲತಿಪ್ಪಿ, ಆನಂದ ಪಾಟೀಲ್, ಸದಾಶಿವ ಪಾಟೀಲ್, ಸೆಣ್ಮುಗಪ್ಪ ಹಿರೇಗೌಡ ಜೇವರ್ಗಿ, ಬಾಲಚೇಂದ್ರ ಬಾವಜಿ, ಮಲ್ಲಣಗೌಡ ಕಲ್ಲೂರ್, ಮಹಾದೇವ ಬಡಾ, ಸಿದ್ರಾಮಪ್ಪ ಸಾಹು, ಅಯಳ್ಳಪ್ಪ ಪೂಜಾರಿ ಇದ್ದರು. ಎಂ.ಎಸ್. ಪಾಟೀಲ್ ಸ್ವಾಗತಿಸಿದರು. ಎಂ.ಬಿ. ನಿಂಗಪ್ಪ ಪ್ರಾರ್ಥಿಸಿದರು. ಕೆ. ಗಿರಿಮಲ್ಲ ಕಾರ್ಯಕ್ರಮ ನಿರೂಪಿಸಿದರು. ಪ. ಮಾನು ವಂದಿಸಿದರು.