ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಟಗೇರಾ: ಬಾಲಕಿ ಅಪಹರಣ

Lingaraj Badiger
Updated On : 18 Dec 2013, 11:09 am

ಗುಲ್ಬರ್ಗ: ಬಾಲಕಿಯೊಬ್ಬಳನ್ನು ಅಪಹರಿಸಿದ ಘಟನೆ ಸೇಡಂ ತಾಲೂಕಿನ ಬಟಗೇರಾ(ಕೆ) ಗ್ರಾಮದಲ್ಲಿ ನಡೆದಿದೆ. ವೆಂಟಕಸ್ವಾಮಿ ಎಂಬುವರ ಮಗಳನ್ನು ಗ್ರಾಮದ ಶಾಲೆಯ ಹತ್ತಿರ ಗ್ರಾಮದ ರಾಜು ಫಸಲರ್ ಎಂಬಾತ ಬೈಕ್ ಮೇಲೆ ಒತ್ತಾಯ ಪೂರ್ವಕವಾಗಿ ಅಪಹರಿಸಿಕೊಂಡು ಹೋಗಿದ್ದಾನೆ. ಕೂಡಲೇ ಮಗಳನ್ನು ಹುಡುಕಿ ಆರೋಪಿಗೆ ಶಿಕ್ಷೆ ವಿಧಿಸಬೇಕೆಂದು ಬಾಲಕಿಯ ತಂದೆ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆಭರಣ ಕಳ್ಳತನ
ಗುಲ್ಬರ್ಗ: ಇಲ್ಲಿನ ಗುಬ್ಬಿ ಕಾಲೋನಿಯ ಮನೆಯೊಂದರದಲ್ಲಿ 2 ಲಕ್ಷ ಮೌಲ್ಯದ ನಗ- ನಾಣ್ಯ ಕಳ್ಳತನವಾಗಿದೆ. ಪ್ರೊ. ಎ.ಎಸ್.ಆರ್. ಮೂರ್ತಿ ಎಂಬವರು ಪತ್ನಿಯೊಂದಿಗೆ ಔರಂಗಬಾದ್ ಪುನಾಕ್ಕೆ ಹೋಗಿರುವ ಸಂದರ್ಭದಲ್ಲಿ ಕಳ್ಳರು ಮನೆಯ ಬೀಗ ಮುರಿದು ಒಳನುಗ್ಗಿ 80 ಸಾವಿರ ಮೌಲ್ಯದ 32 ಗ್ರಾಂ ಬಂಗಾರದ ವಿವಿಧ ಆಭರಣ, 1.20 ಲಕ್ಷ ಮೌಲ್ಯದ 2.910 ಕೆಜಿ ಬೆಳ್ಳಿಯ ವಿವಿಧ ಸಾಮಾನುಗಳನ್ನು ಕಳವು ಮಾಡಲಾಗಿದೆ. ಎಂ.ಬಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಕ್ಕಿ; ವ್ಯಕ್ತಿ ಸಾವು
ಆಳಂದ: ಬೈಕಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಪಟ್ಟಣದ ಧಬಧಬಿ ನಾಲಾ ಹತ್ತಿರ ಸಂಭವಿಸಿದೆ. ತಾಲೂಕಿನ ಮುನ್ನಹಳ್ಳಿ ಶಾಂತಪ್ಪ ಕಣಮಸ(31) ಮೃತನು. ಹಿಂಬದಿ ಸವಾರ ದಯಾನಂದ  ಕಾಪಸೆ ಅವರಿಗೂ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಿಎಸ್ಐ ಮಹಾದೇವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬೆದರಿಸಿ ಲೂಟಿ
ಗುಲ್ಬರ್ಗ: ನಗರದ ಬಹುಮನಿ ಹೋಟೆಲ್ ಬಳಿ ಮೂವರು ಸೇರಿ ವ್ಯಕ್ತಿಯೊಬ್ಬನಿಗೆ ಬೆದರಿಸಿ ಆತನ ಬಳಿಯಿಂದ ನಗದು 1,500 ಹಾಗೂ 9 ಸಾವಿರ ಮೌಲ್ಯದ ಮೊಬೈಲ್ ಲೂಟಿ ಮಾಡಿದ್ದಾರೆ. ಗುಲ್ಬರ್ಗದ ಖೂಬಾ ಪ್ಲಾಟ್ನ ಡಾ. ಶರಣಪ್ಪ ಪಾಟೀಲ್ ಎಂಬುವರು ಬಹುಮನಿ ಹೋಟೆಲ್ ಬಳಿ ಬೈಕ್ ನಿಲ್ಲಿಸಿ ತಾಯಿಯೊದಿಗೆ ಮಾತನಾಡುತ್ತಿದ್ದಾಗ ಮೂವರು ಅಪರಿಚಿತರು ಬೈಕ್ ಬೀಳಿಸಿ ಆತನಿಗೆ ಬೆದರಿಸಿ ಮೊಬೈಲ್ ಮತ್ತು ನಗದು ಹಣ ಲೂಟಿ ಮಾಡಿದ್ದಾರೆ. ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement