ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಸ್ ತಂಗುದಾಣಗಳಿಲ್ಲದೆ ಪರದಾಟ

Lingaraj Badiger
Updated On : 18 Dec 2013, 11:12 am

ಗುರುಮಠಕಲ್: ಸರ್ಕಾರ ಕೋಟಿ ಗಟ್ಟಲೆ ಹಣ ಖರ್ಚು ಮಾಡಿ ಜನತೆಗೆ ಎಲ್ಲಾ ಸವಲತ್ತುಗಳನ್ನು ಕಲ್ಪಿಸಲು ಪ್ರಮಾಣಿಕವಾಗಿ ಪ್ರಯತ್ನಗಳನ್ನು ಮಾಡುತ್ತಿದೆ.
ಅದರೆ ಅದಕ್ಕೆ ತಕ್ಕಂತೆ ಕೆಲಸ ಕಾರ್ಯಗಳು ಮಾತ್ರ ನಡೆಯುತ್ತಿಲ್ಲ ಎನ್ನುವುದಕ್ಕೆ ಗುರುಮಠಕಲ್ ಮತಕ್ಷೇತ್ರದ ಗ್ರಾಮೀಣ ಭಾಗದಲ್ಲಿರುವ ಬಸ್ ನಿಲ್ದಾಣಗಳೇ ಪ್ರತ್ಯಕ್ಷ ಸಾಕ್ಷಿಗಳಾಗಿವೆ.
ಇಲ್ಲಿನ ಗ್ರಾಮಗಳಿಗೆ ಬಸ್ ಸಂಚಾರವಿದ್ದರೂ, ಅಲ್ಲಿ ಜನತೆಗೆ ಕೂಡಲು ಬಸ್ ನಿಲ್ದಾಣಗಳೇ ಇಲ್ಲ. ಇದರಿಂದ ಜನ ಬಸ್ ಬರುವವರೆಗೆ ಗಿಡಗಳ ನೆರಳನ್ನೇ ಆಶ್ರಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಹೆದ್ದಾರಿಯ ಗುರುಮಠಕಲ್ನಿಂದ ಯಾದಗಿರಿ ಮಧ್ಯ ಬರುವ ಕಂದಕೂರ, ಗಣಪುರ,ಪಸಪೂಲ್ ಗ್ರಾಮಗಳ ಬಸ್ನಿಲ್ದಾಣಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದು, ಜನರ ಉಪಯೋಗಕ್ಕೆ ಬಾರದಂತಾಗಿವೆ.
ದೂರದೂರುಗಳಿಗೆ ತೆರಳಬೇಕಾಗಿರುವವರು ಇಲ್ಲೇ ಕಾಲ ಕಳೆಯಬೇಕಾದ ಪರಿಸ್ಥಿತಿ. ಬಸ್ಗಳು ಜನರನ್ನು ತುಂಬಿಕೊಂಡೇ ಬಂದರೆ ಮತ್ತೆ ಬಸ್ನಲ್ಲಿ ನಿಂತು ಸಾಗಬೇಕಾದ ಪರಿಸ್ಥಿತಿ. ಅದೇ ರೀತಿ ಬಸ್ ತಂಗುದಾಣದಲ್ಲಿರುವ ಮರದ ನೆರಳಿನಲ್ಲಿ ಹೆಚ್ಚಿನ ಜನರಿದ್ದರೆ ಬಿಸಿಲಿನಲ್ಲೇ ಒಣಗಬೇಕಾದ ಪರಿಸ್ಥಿತಿ ಎದುರಾಗಿದೆ.
ಈ ಭಾಗದ ಜನತೆಯ ಅನುಕೂಲಕ್ಕಾಗಿ ಒಳ್ಳೆಯ ಬಸ್ನಿಲ್ದಾಣಗಳನ್ನು ನಿರ್ಮಾಣ ಮಾಡುವ ಕೆಲಸಕ್ಕೆ ಈ ಭಾಗದ ಜನ ಪ್ರತಿನಿಧಿಗಳು, ಆಧಿಕಾರಿ ವರ್ಗದವರು ಗಮನಹರಿಸಬೇಕಾಗಿದೆ. ಆ ಮೂಲಕ ಜನರ ಕಷ್ಟವನ್ನು ನಿವಾರಿಸಬೇಕಾಗಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕಂದಕೂರ ಗ್ರಾಮದ ಡಾ.ಸಿದ್ದಲಿಂಗ ರಡ್ಡಿ ಕಂದಕೂರ ಆಗ್ರಹಿಸಿದ್ದಾರೆ.
-
ಇಂದು ಮಾನವ ಹಕ್ಕುಗಳ ದಿನ
ಯಾದಗಿರಿ: ಜಿಲ್ಲಾಡಳಿತ ಮತ್ತು ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ ಯಾದಗಿರಿ ಸಂಯುಕ್ತಾಶ್ರಯದಲ್ಲಿ ಮಾನವ ಹಕ್ಕಗಳ ದಿನಾಚರಣೆಯನ್ನು ಡಿ.18ರಂದು ಬೆಳಗ್ಗೆ 10 ಗಂಟೆಗೆ ಜಿ.ಪಂ. ಸಭಾಂಗಣ ಯಾದಗಿರಿಯಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ವಿದ್ಯಾವತಿ ಎಸ್.ಅಕ್ಕಿ ಉದ್ಘಾಟಿಸುವರು. ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಿಗಾಗಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ. ಜಿಲಾನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ವಂಶಿಕೃಷ್ಣ ಹಾಗೂ ವೆಂಕಟೇಶ ಡಿ.ಕೊಲ್ಲೂರ, ಎಸ್. ದೇವಿಂದ್ರಪ್ಪ ಹಳಿಮನಿ ಆಗಮಿಸುವರು.

ಸಾಹಿತ್ಯ ಕಾರ್ಯಗಳಿಗೆ ಅನುದಾನ ನೀಡಿ
ಯಾದಗಿರಿ: ಯಾದಗಿರ ಜಿಲ್ಲೆಯಲ್ಲಿ ಡಿ.19ರಂದು ನಡೆಯುವ ಗಿರಿ ಕನ್ನಡಿಗರ ಉತ್ಸವ ಮತ್ತು ಡಿ. 30ರಂದು ಶಹಾಪುರದಲ್ಲಿ ನಡೆಯುವ 16ನೇ ಸಗರನಾಡು ಉತ್ಸವ ಆಮಂತ್ರಣ ಪತ್ರಿಕೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಬಿಡುಗಡೆ ಮಾಡಿದರು.
ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕ ಕರವೇ ಅಧ್ಯಕ್ಷ ಶರಣು ಬಿ. ಗದ್ದುಗೆಯವರು ಹೈ-ಕ ಭಾಗದಲ್ಲಿ ನಡೆಯುವ ಸಾಂಸ್ಕೃತಿಕ ಉತ್ಸವಗಳಿಗೆ ಧನ ಸಹಾಯ ನೀಡುವಲ್ಲಿ ಇಲಾಖೆ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು. ತಕ್ಷಣದಿಂದಲೇ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಲು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement