ವಿಠ್ಠಲ್ ಹೇರೂರ್ ಶ್ರದ್ಧಾಂಜಲಿ
ಹುಣಸಗಿ: ಪಟ್ಟಣದ ಅಂಬೀಗರ ಚೌಡಯ್ಯ ವೃತ್ತದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ದಿ. ವಿಠ್ಠಲ್ ಹೇರೂರ್ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಟೋಕರಿ ಕೂಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ, ವಿಠ್ಠಲ್ ಹೇರೂರ್ ಅಪರೂಪದ ರಾಜಕಾರಣಿಯಾಗಿದ್ದರು. ಅವರು ಕೋಲಿ ಸಮಾಜದ ಧೀಮಂತ ನಾಯಕರಾಗಿದ್ದರು ಎಂದು ಬಣ್ಣಸಿದರು. ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಸುರೇಶ ನೀರಲಗಿ, ಪ್ರಾಚಾರ್ಯ ಆರ್.ಎಲ್. ಸುಣಗಾರ, ಪೋಸ್ಟ್ ಮಾಸ್ಟರ್ ಬಿ.ಎಸ್. ನೇಲೋಗಿ ಅವರ ಜೀವನದ ಕುರಿತು ಮಾತನಾಡಿದರು. ಬಸನಗೌಡ ಪಾಟೀಲ, ಬಸವರಾಜ ಹಂಚಲಿ ಇತರರು ಇದ್ದರು.
ಇಂದು ರಕ್ತದಾನ ಶಿಬಿರ
ಶಹಾಪುರ: ಸ್ಥಳೀಯ ಲಯನ್ಸ್ ಕ್ಲಬ್ ವತಿಯಿಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಡಿ.18 ರಂದು ಬುಧವಾರ ಆಯೋಜಿಸಲಾಗಿದೆ. ಜಿಪಂ ಸದಸ್ಯ ಹನುಮೇಗೌಡ ಮರಕಲ್ ಶಿಬಿರಕ್ಕೆ ಚಾಲನೆ ನೀಡುವರು ಎಂದು ಲಯನ್ಸ್ ಕ್ಲಬ್ ಪಿಆರ್ಓ ಬಂದೀಶ್ ತಿಳಿಸಿದ್ದಾರೆ.